ಅಹಮದಾಬಾದ್: ಬಾರ್ಡರ್ ಗಾವಾಸ್ಕರ್ ಟ್ರೋಫಿ (Border Gavaskar Trophy) ಸರಣಿಯ 4ನೇ ಹಾಗೂ ಅಂತಿಮ ಟೆಸ್ಟ್‌ನ ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾ (Australia) ತಂಡ ಮೇಲುಗೈ ಸಾಧಿಸಿದೆ.
ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಒಂದೇ ದಿನಕ್ಕೆ ಸರ್ವಪತನ ಕಂಡಿದ್ದ ಆಸ್ಟ್ರೇಲಿಯಾ ತಂಡ 4ನೇ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದೆ. ಮೊದಲ ದಿನದ ಅಂತ್ಯಕ್ಕೆ 90 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 255 ರನ್ ಕಲೆಹಾಕಿದೆ. ಇದನ್ನೂ ಓದಿ: Ind Vs Aus: ಆಸ್ಟ್ರೇಲಿಯಾದ ಪ್ರಧಾನಿ ಜೊತೆ ಮೋದಿ ಮ್ಯಾಚ್ ವೀಕ್ಷಣೆ
Advertisement
Advertisement
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಉತ್ತಮ ಶುಭಾರಂಭ ಪಡೆದುಕೊಂಡಿತು. ಆರಂಭಿಕ ಟ್ರಾವಿಸ್ ಹೆಡ್ 32 ರನ್ ಗಳಿಸಿ ಔಟಾದರು. ನಂತರ ಬಂದ ಮಾರ್ನಸ್ ಲಾಬುಶೇನ್ ಕೇವಲ 3 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಈ ವೇಳೆ ಖವಾಜ (Usman Khawaja) ಜೊತೆಗೂಡಿದ ನಾಯಕ ಸ್ಟೀವ್ ಸ್ಮಿತ್ (Steven Smith) ಉತ್ತಮ ಜೊತೆಯಾಟವಾಡಿದರು. ಈ ಜೋಡಿ 3ನೇ ವಿಕೆಟ್‌ಗೆ 79 ರನ್ ಕಲೆಹಾಕಿತ್ತು. ಸ್ಟೀವ್ ಸ್ಮಿತ್ 38 ರನ್ ಗಳಿಸಿ ಆಡುತ್ತಿದ್ದಾಗ ಜಡೇಜಾ ಸ್ಪಿನ್ ದಾಳಿಗೆ ತುತ್ತಾದರು. ಈ ಬೆನ್ನಲ್ಲೇ 17 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ಪೀಟರ್ ಹ್ಯಾಂಡ್ಸ್‌ಕೊಂಬ್‌ಗೆ ಮೊಹಮ್ಮದ್ ಶಮಿ (Mohammed Shami) ಪೆವಿಲಿಯನ್ ದಾರಿ ತೋರಿಸಿದರು.
Advertisement
Advertisement
ನಂತರ ಆಸ್ಟ್ರೇಲಿಯಾ ಯಾವುದೇ ವಿಕೆಟ್ ಕಳೆದುಕೊಳ್ಳದೇ ಮೊದಲ ದಿನದಾಟ ಪೂರ್ಣಗೊಳಿಸಿತು. ಖವಾಜಾ ಮತ್ತು ಕೆಮರೊನ್ ಗ್ರೀನ್ ದಿನದ ಕೊನೆಯಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದರು. ಈ ಜೋಡಿ ಮುರಿಯದ 5ನೇ ವಿಕೆಟ್‌ಗೆ 85 ರನ್ ಕಲೆಹಾಕಿತು. ಉಸ್ಮಾನ್ ಖವಾಜ 104 ರನ್ (251 ಎಸೆತ, 15 ಬೌಂಡರಿ) ಬಾರಿಸಿದರೆ, ಕೆಮರೊನ್ ಗ್ರೀನ್, 64 ಎಸೆತಗಳಲ್ಲಿ 8 ಬೌಂಡರಿ ಸಹಿತ ಅಜೇಯ 49 ರನ್ ಗಳಿಸಿ 2ನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ.
ಟೀಂ ಇಂಡಿಯಾ ಪರವಾಗಿ ಮೊಹಮ್ಮದ್ ಶಮಿ ಎರಡು ವಿಕೆಟ್ ಪಡೆದರೆ, ರವಿಚಂದ್ರನ್ ಅಶ್ವಿನ್ (R Ashwin) ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದರು. ಇದನ್ನೂ ಓದಿ: ಪಾಕ್ ಆಲ್‍ರೌಂಡರ್ ಆಟಗಾರ ಹಫೀಸ್ ಮನೆಯಲ್ಲಿ ಕಳ್ಳತನ