ದುಬೈ: ಟಿ20 ವಿಶ್ವಕಪ್‌ಗೂ (T20 WorldCup) ಮುನ್ನವೇ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಎದುರು ನೋಡುತ್ತಿರುವ ಟೀಂ ಇಂಡಿಯಾ (Team India) ಇಂದು ಹಾಲಿ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ (Australia) ವಿರುದ್ಧ T20 ಸರಣಿಯ ಅಂತಿಮ ಪಂದ್ಯದಲ್ಲಿ ಸೆಣಸಲಿದೆ.
ಇಂದು ಸಂಜೆ 7 ಗಂಟೆಗೆ ಹೈದರಾಬಾದ್‌ನ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ಭಾರತ – ಆಸಿಸ್ 3ನೇ ಹಾಗೂ ಅಂತಿಮ ಟಿ20 ಪಂದ್ಯ ನಡೆಯಲಿದೆ. ಇದನ್ನೂ ಓದಿ: ನನ್ನ ಸ್ಫೋಟಕ ಬ್ಯಾಟಿಂಗ್ ಕಂಡು ನಾನೇ ಶಾಕ್ – ಪಂದ್ಯ ಗೆದ್ದರೂ ಹೀಗೇಕೆ ಅಂದ್ರು ಹಿಟ್‌ಮ್ಯಾನ್?
Advertisement
Advertisement
ಮೊದಲ ಪಂದ್ಯದಲ್ಲಿ ಸೋತು, 2ನೇ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಟೀಂ ಇಂಡಿಯಾ 1-1 ಅಂತರದಲ್ಲಿ ಸರಣಿಯನ್ನು ಸಮಬಲಗೊಳಿಸಿದೆ. ಇದರೊಂದಿಗೆ ಸರಣಿ ಕನಸು ಜೀವಂತವಾಗಿಸಿಕೊಂಡಿರುವ ಟೀಂ ಇಂಡಿಯಾ ಇಂದು ಆಸಿಸ್ ಜೊತೆಗೆ ಪೈಪೋಟಿ ನಡೆಸಲಿದೆ.
Advertisement
ಹರ್ಷಲ್, ಚಾಹಲ್‌ದೇ ಚಿಂತೆ: ಸದ್ಯ ಟೀಂ ಇಂಡಿಯಾ ಜಯದ ಹಾದಿಯಲ್ಲಿ ಸಾಗುತ್ತಿದೆ. ಆದರೆ ಇನ್ನೂ ಫಾರ್ಮ್‌ಗೆ ಮರಳದ ಹರ್ಷಲ್ ಪಟೇಲ್ (Harshal Patel) ಹಾಗೂ ಯಜುವೇಂದ್ರ ಚಾಹಲ್ ಅವರದ್ದೇ ಚಿಂತೆಯಾಗಿದೆ. ಈ ಪಂದ್ಯದಲ್ಲಿ ಇಬ್ಬರೂ ಸುಧಾರಿತ ಪ್ರದರ್ಶನ ತೋರಲೇಬೇಕಾದ ಅವಶ್ಯಕತೆಯಿದೆ.
Advertisement
ಸದ್ಯ ಆಲ್‌ರೌಂಡರ್ ರವೀಂದ್ರ ಜಡೇಜಾ ಗಾಯಗೊಂಡು ಹೊರಬಿದ್ದ ಬಳಿಕ ಅವರ ಸ್ಥಾನ ತುಂಬಲು ಬಂದಿರುವ ಅಕ್ಷರ್ ಪಟೇಲ್ ಯಶಸ್ವಿ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಅವರಿಂದು ಬ್ಯಾಟಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡುವ ಅವಶ್ಯಕತೆ ಇದೆ. ಆದರೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾರ (Rohit Sharma) ಗೇಮ್‌ಪ್ಲ್ಯಾನ್ ಏನೆಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ರೋಹಿತ್ ನಾಯಕನ ಆಟ – ಭಾರತಕ್ಕೆ ಜಯ, ಸರಣಿ ಸಮಬಲ
2ನೇ ಟಿ20 ಪಂದ್ಯದಲ್ಲಿ ಮಳೆಯ ಕಾರಣದಿಂದಾಗಿ ಭಾರತ ಮತ್ತು ಆಸಿಸ್ ತಂಡಗಳ ಪಂದ್ಯವನ್ನು 8 ಓವರ್‌ಗಳಿಗೆ ಇಳಿಸಲಾಗಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 8 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 90 ರನ್‌ಗಳಿಸಿತ್ತು. ಸಿಕ್ಸ್, ಫೋರ್‌ಗಳ ಮಳೆ ಸುರಿಸುತ್ತಾ ಸ್ಫೋಟಕ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ 7.2 ಓವರ್‌ಗಳಲ್ಲೇ 92 ರನ್‌ಗಳಿಸಿ ಎದುರಾಳಿ ಆಸಿಸ್ ವಿರುದ್ಧ ಗೆಲುವು ಸಾಧಿಸಿತು.