CricketLatestLeading NewsMain PostSports

ರೋಹಿತ್ ನಾಯಕನ ಆಟ – ಭಾರತಕ್ಕೆ ಜಯ, ಸರಣಿ ಸಮಬಲ

ನಾಗ್ಪುರ: ಮಳೆ ಅಡಚಣೆಯ ನಡುವೆ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ 6 ವಿಕೆಟ್‍ಗಳ ಅಂತರದ ಜಯ ಸಾಧಿಸಿದ ಭಾರತ (India) ಸರಣಿಯನ್ನು 1-1 ಸಮಬಲಗೊಳಿಸಿದೆ.

ಮಳೆಯಿಂದಾಗಿ 8 ಓವರ್‌ಗೆ ಇಳಿಕೆ ಕಂಡಿದ್ದ 2ನೇ ಟಿ20 (T20) ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 91 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ 7.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 92 ಸಿಡಿಸಿ ಜಯ ಸಾಧಿಸಿತು. ಇದನ್ನೂ ಓದಿ: ಧೋನಿ ಆಸೆಯಂತೆ ನಡೆಯಲಿದೆ ನಿವೃತ್ತಿ ಪಂದ್ಯ – ಚೆನ್ನೈನಲ್ಲಿ ಐಪಿಎಲ್‍ಗೆ ಗುಡ್ ಬೈ ಹೇಳುವುದು ಖಚಿತ

ಭಾರತದ ಪರ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ (Rohit Sharma)  ಅಬ್ಬರಿಸಿದರು. ಆರಂಭಿಕರಾಗಿ ಬಂದು ತಂಡದ ಗೆಲುವಿಗಾಗಿ ಕೊನೆಯವರೆಗೆ ಹೋರಾಡಿದ ರೋಹಿತ್ ಅಜೇಯ 46 ರನ್ (20 ಎಸೆತ, 4 ಬೌಂಡರಿ, 4 ಸಿಕ್ಸ್) ಚಚ್ಚಿ ಮಿಂಚಿದರು. ಅಂತಿಮವಾಗಿ ದಿನೇಶ್ ಕಾರ್ತಿಕ್ ಒಂದು ಸಿಕ್ಸ್, ಒಂದು ಬೌಂಡರಿ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ 3 ಟಿ20 ಪಂದ್ಯಗಳ ಸರಣಿ 1-1ರಲ್ಲಿ ಸಮಬಲ ಕಂಡಿದ್ದು, 3ನೇ ಟಿ20 ಪಂದ್ಯ ಕುತೂಹಲ ಮೂಡಿಸಿದೆ.

ಈ ಮೊದಲು ಟಾಸ್ ಗೆದ್ದ ಭಾರತ ಆಸ್ಟ್ರೇಲಿಯಾವನ್ನು ಮೊದಲು ಬ್ಯಾಟಿಂಗ್‍ಗೆ ಆಹ್ವಾನಿಸಿತು. ಇತ್ತ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾಗೆ ಆರಂಭದಲ್ಲೇ ಶಾಕ್ ಎದುರಾಯಿತು. ಕಳೆದ ಪಂದ್ಯದ ಹೀರೋ ಕ್ಯಾಮರೂನ್ ಗ್ರೀನ್ 5 ರನ್ (4 ಎಸೆತ, 1 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿ ಹೊರನಡೆದರು. ನಂತರ ಬಂದ ಮ್ಯಾಕ್ಸ್‌ವೆಲ್ ಶೂನ್ಯ ಸುತ್ತಿದರು. 19 ರನ್‍ಗಳಿಗೆ ಆಸ್ಟ್ರೇಲಿಯಾ 2 ವಿಕೆಟ್ ಕಳೆದುಕೊಂಡಿತು. ಇದನ್ನೂ ಓದಿ: ಓಡೆನ್ ಸ್ಮಿತ್, ಬೇಬಿ ಎಬಿಡಿ ಹೊಡಿಬಡಿ ಆಟ – ತಲಾ ಆರಾರು ಎಸೆತ ಐದೈದು ಸಿಕ್ಸ್ 60 ರನ್‌

ಇತ್ತ ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕ ಫಿಂಚ್, ಪಂಚ್ ಶಾಟ್‍ಗಳ ಮೂಲಕ ಅಬ್ಬರಿಸಲು ಆರಂಭಿಸಿದರು. ಈ ವೇಳೆ ದಾಳಿಗಿಳಿದ ಬುಮ್ರಾ ಯಾರ್ಕರ್ ಎಸೆತದ ಮೂಲಕ 31 ರನ್ (15 ಎಸೆತ, 4 ಬೌಂಡರಿ, 1 ಸಿಕ್ಸ್) ಸಿಡಿಸಿದ್ದ ಫಿಂಚ್ ವಿಕೆಟ್ ಬೇಟೆಯಾಡಿದರು.

ಬಳಿಕ ಬಂದ ಮ್ಯಾಥ್ಯೂ ವೇಡ್ ಕೊನೆಯ ಓವರ್‌ಗಳಲ್ಲಿ ಬೌಂಡರಿ, ಸಿಕ್ಸರ್‌ಗಳ ಮೂಲಕ ಅಬ್ಬರಿಸಿದರು. ಅಂತಿಮವಾಗಿ ವೇಡ್ ಅಜೇಯ 43 ರನ್ (20 ಎಸೆತ, 4 ಬೌಂಡರಿ, 3 ಸಿಕ್ಸ್) ಮತ್ತು ಸ್ಟೀವ್ ಸ್ಮಿತ್ 8 ರನ್ (5 ಎಸೆತ, 1 ಬೌಂಡರಿ) ನೆರವಿನಿಂದ ಆಸ್ಟ್ರೇಲಿಯಾ 8 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 90 ರನ್ ಕಲೆಹಾಕಿತು. ಭಾರತದ ಪರ ಅಕ್ಷರ್ ಪಟೇಲ್ 2 ವಿಕೆಟ್ ಕಿತ್ತು ಶೈನ್ ಆದರೆ, ಬುಮ್ರಾ 1 ವಿಕೆಟ್ ಪಡೆಯಲು ಯಶಸ್ವಿಯಾದರು.

Live Tv

Leave a Reply

Your email address will not be published.

Back to top button