ನಾಗ್ಪುರ: ಮಳೆ ಅಡಚಣೆಯ ನಡುವೆ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ 6 ವಿಕೆಟ್‍ಗಳ ಅಂತರದ ಜಯ ಸಾಧಿಸಿದ ಭಾರತ (India) ಸರಣಿಯನ್ನು 1-1 ಸಮಬಲಗೊಳಿಸಿದೆ.
Advertisement
ಮಳೆಯಿಂದಾಗಿ 8 ಓವರ್‌ಗೆ ಇಳಿಕೆ ಕಂಡಿದ್ದ 2ನೇ ಟಿ20 (T20) ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 91 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ 7.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 92 ಸಿಡಿಸಿ ಜಯ ಸಾಧಿಸಿತು. ಇದನ್ನೂ ಓದಿ: ಧೋನಿ ಆಸೆಯಂತೆ ನಡೆಯಲಿದೆ ನಿವೃತ್ತಿ ಪಂದ್ಯ – ಚೆನ್ನೈನಲ್ಲಿ ಐಪಿಎಲ್‍ಗೆ ಗುಡ್ ಬೈ ಹೇಳುವುದು ಖಚಿತ
Advertisement
Advertisement
ಭಾರತದ ಪರ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ (Rohit Sharma) ಅಬ್ಬರಿಸಿದರು. ಆರಂಭಿಕರಾಗಿ ಬಂದು ತಂಡದ ಗೆಲುವಿಗಾಗಿ ಕೊನೆಯವರೆಗೆ ಹೋರಾಡಿದ ರೋಹಿತ್ ಅಜೇಯ 46 ರನ್ (20 ಎಸೆತ, 4 ಬೌಂಡರಿ, 4 ಸಿಕ್ಸ್) ಚಚ್ಚಿ ಮಿಂಚಿದರು. ಅಂತಿಮವಾಗಿ ದಿನೇಶ್ ಕಾರ್ತಿಕ್ ಒಂದು ಸಿಕ್ಸ್, ಒಂದು ಬೌಂಡರಿ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ 3 ಟಿ20 ಪಂದ್ಯಗಳ ಸರಣಿ 1-1ರಲ್ಲಿ ಸಮಬಲ ಕಂಡಿದ್ದು, 3ನೇ ಟಿ20 ಪಂದ್ಯ ಕುತೂಹಲ ಮೂಡಿಸಿದೆ.
Advertisement
ಈ ಮೊದಲು ಟಾಸ್ ಗೆದ್ದ ಭಾರತ ಆಸ್ಟ್ರೇಲಿಯಾವನ್ನು ಮೊದಲು ಬ್ಯಾಟಿಂಗ್‍ಗೆ ಆಹ್ವಾನಿಸಿತು. ಇತ್ತ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾಗೆ ಆರಂಭದಲ್ಲೇ ಶಾಕ್ ಎದುರಾಯಿತು. ಕಳೆದ ಪಂದ್ಯದ ಹೀರೋ ಕ್ಯಾಮರೂನ್ ಗ್ರೀನ್ 5 ರನ್ (4 ಎಸೆತ, 1 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿ ಹೊರನಡೆದರು. ನಂತರ ಬಂದ ಮ್ಯಾಕ್ಸ್‌ವೆಲ್ ಶೂನ್ಯ ಸುತ್ತಿದರು. 19 ರನ್‍ಗಳಿಗೆ ಆಸ್ಟ್ರೇಲಿಯಾ 2 ವಿಕೆಟ್ ಕಳೆದುಕೊಂಡಿತು. ಇದನ್ನೂ ಓದಿ: ಓಡೆನ್ ಸ್ಮಿತ್, ಬೇಬಿ ಎಬಿಡಿ ಹೊಡಿಬಡಿ ಆಟ – ತಲಾ ಆರಾರು ಎಸೆತ ಐದೈದು ಸಿಕ್ಸ್ 60 ರನ್
ಇತ್ತ ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕ ಫಿಂಚ್, ಪಂಚ್ ಶಾಟ್‍ಗಳ ಮೂಲಕ ಅಬ್ಬರಿಸಲು ಆರಂಭಿಸಿದರು. ಈ ವೇಳೆ ದಾಳಿಗಿಳಿದ ಬುಮ್ರಾ ಯಾರ್ಕರ್ ಎಸೆತದ ಮೂಲಕ 31 ರನ್ (15 ಎಸೆತ, 4 ಬೌಂಡರಿ, 1 ಸಿಕ್ಸ್) ಸಿಡಿಸಿದ್ದ ಫಿಂಚ್ ವಿಕೆಟ್ ಬೇಟೆಯಾಡಿದರು.
ಬಳಿಕ ಬಂದ ಮ್ಯಾಥ್ಯೂ ವೇಡ್ ಕೊನೆಯ ಓವರ್‌ಗಳಲ್ಲಿ ಬೌಂಡರಿ, ಸಿಕ್ಸರ್‌ಗಳ ಮೂಲಕ ಅಬ್ಬರಿಸಿದರು. ಅಂತಿಮವಾಗಿ ವೇಡ್ ಅಜೇಯ 43 ರನ್ (20 ಎಸೆತ, 4 ಬೌಂಡರಿ, 3 ಸಿಕ್ಸ್) ಮತ್ತು ಸ್ಟೀವ್ ಸ್ಮಿತ್ 8 ರನ್ (5 ಎಸೆತ, 1 ಬೌಂಡರಿ) ನೆರವಿನಿಂದ ಆಸ್ಟ್ರೇಲಿಯಾ 8 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 90 ರನ್ ಕಲೆಹಾಕಿತು. ಭಾರತದ ಪರ ಅಕ್ಷರ್ ಪಟೇಲ್ 2 ವಿಕೆಟ್ ಕಿತ್ತು ಶೈನ್ ಆದರೆ, ಬುಮ್ರಾ 1 ವಿಕೆಟ್ ಪಡೆಯಲು ಯಶಸ್ವಿಯಾದರು.