ಲಂಡನ್: ನಾಟಿಂಗ್‍ಹ್ಯಾಮ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 203 ರನ್ ಅಂತರದ ಗೆಲುವು ದಾಖಲಿಸಿದೆ. ಈ ಮೂಲಕ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಸೋಲುಂಡು ಭಾರೀ ಟೀಕೆಗೆ ಗುರಿಯಾಗಿದ್ದ ತಂಡ ಸೇಡು ತೀರಿಸಿಕೊಂಡಿದೆ.
521 ರನ್‍ಗಳ ಬೃಹತ್ ಗುರಿ ಹಿಂಬಾಲಿಸಿದ ಇಂಗ್ಲೆಂಡ್ ನಾಲ್ಕನೇ ದಿನದಾಂತ್ಯಕ್ಕೆ 102 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿತ್ತು. ಇಂದು ಆಟ ಮುಂದುವರಿಸಿದ ಇಂಗ್ಲೆಂಡ್ 16 ರನ್ ಸೇರಿಸುವಷ್ಟರಲ್ಲಿ ಅಶ್ವಿನ್, ಆ್ಯಂಡರ್ ಸನ್ ವಿಕಟ್ ಪಡೆದು ತಂಡಕ್ಕೆ ಗೆಲುವಿನ ಸಿಹಿ ನೀಡಿದರು. 2ನೇ ಇನ್ನಿಂಗ್ಸ್ ನಲ್ಲಿ ಅಶ್ವಿನ್ 1 ವಿಕೆಟ್ ಪಡೆದರು. ಜಸ್ ಪ್ರೀತ್ ಬುಮ್ರಾ 29 ಒವರ್ ಗಳಲ್ಲಿ 85 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಇಶಾಂತ್ ಶರ್ಮಾ 2, ಮಹಮ್ಮದ್ ಶಮಿ ಹಾಗೂ ಪಾಂಡ್ಯ ತಲಾ 1 ವಿಕೆಟ್ ಪಡೆದರು.
Advertisement
That didn't take long! After 10 minutes and 17 balls, James Anderson edges Ravichandran Ashwin to slip, and India win by 203 runs. What an all-round performance from them in this Test! #ENGvIND SCORE ➡️ https://t.co/3x88SzxNtJ pic.twitter.com/hrHpJRukgZ
— ICC (@ICC) August 22, 2018
Advertisement
ಟೀಂ ಇಂಡಿಯಾ ಬೌಲಿಂಗ್ ದಾಳಿಯನ್ನು ಎದುರಿಸಲು ಭಾರೀ ಹೋರಾಟ ನಡೆಸಿದ ಇಂಗ್ಲೆಂಡ್ ಸ್ಟೋಕ್ಸ್ ಹಾಗೂ ಬಟ್ಲರ್ ಹೋರಾಟ ವ್ಯರ್ಥವಾಯಿತು. ಈ ಜೋಡಿ 2ನೇ ಇನ್ನಿಂಗ್ಸ್ 5ನೇ ವಿಕೆಟ್ ಗೆ 169 ರನ್ ಜೊತೆಯಾಟವಾಡಿದ್ದರು. ಬಳಿಕ ಬಂದ ಬೋರ್ಡ್ ಮತ್ತು ರಷಿದ್ ಜೋಡಿ 8ನೇ ವಿಕೆಟ್ ಗೆ 50 ರನ್ ಜೊತೆಯಾಟ ನೀಡಿತ್ತು. ಆದರೆ ಟೀಂ ಇಂಡಿಯಾ ಪರ ಮಾರಕ ದಾಳಿ ನಡೆಸಿದ ಬುಮ್ರಾ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
Advertisement
ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3ನೇ ಪಂದ್ಯವನ್ನು ಗೆಲುವು ಪಡೆಯುವ ಮೂಲಕ ಟೀಂ ಇಂಡಿಯಾ ಸರಣಿ ಗೆಲುವಿನ ಆಸೆಯನ್ನು ಜೀವಂತವಾಗಿಸಿದೆ. ಸದ್ಯ ಟೀಂ ಇಂಡಿಯಾ ಟೂರ್ನಿಯ ಇನ್ನುಳಿದ 2 ಪಂದ್ಯಗಳಲ್ಲಿ ಗೆಲುವು ಪಡೆಯುವ ಅನಿವಾರ್ಯತೆಯನ್ನು ಎದುರಿಸುತ್ತಿದೆ.
Advertisement
ಪಂದ್ಯದ ಬಳಿಕ ಮಾತನಾಡಿದ ಟೀ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂಡದ ಗೆಲುವನ್ನು ಕೇರಳ ಪ್ರವಾಹ ಪೀಡಿದ ಸಂತ್ರಸ್ತರಿಗೆ ಅರ್ಪಿಸುವುದಾಗಿ ತಿಳಿಸಿದರು.
???????? Player of the Match goes to #TeamIndia Skipper @imVkohli.#ENGvIND pic.twitter.com/4MTJj87MmY
— BCCI (@BCCI) August 22, 2018
ಸಂಕ್ಷೀಪ್ತ ಸ್ಕೋರ್
ಭಾರತ ಮೊದಲ ಇನ್ನಿಂಗ್ಸ್ 329/10 – 94.5 ಓವರ್
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 161/10 – 38.2 ಓವರ್
ಭಾರತ ಎರಡನೇ ಇನ್ನಿಂಗ್ಸ್ 352/7 ಡಿಕ್ಲೇರ್ – 110 ಓವರ್
ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ 327/10 – 104.5 ಓವರ್
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
India win the 3rd Test by 203 runs.#ENGvIND pic.twitter.com/YkNJjsGRlQ
— BCCI (@BCCI) August 22, 2018