ದುಬೈ: ಪಹಲ್ಗಾಮ್ ಟೆರರ್ ಅಟ್ಯಾಕ್‌ನಲ್ಲಿ (Pahalgam Terror Attack) ಮಡಿದ ಕುಟುಂಬಗಳ ಜೊತೆ ನಾವಿದ್ದೀವಿ. ಅಪರಿಮಿತ ಶೌರ್ಯ ಪ್ರದರ್ಶಿಸಿದ ಸೇನೆಗೆ ಈ ಗೆಲುವು ಅರ್ಪಣೆ ಅಂತಾ ಭಾರತ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ (Suryakumar Yadav) ಪಾಕ್‌ನ ಮಾನ ಕಳೆದಿದ್ದಾರೆ. ಇಡೀ ಪಂದ್ಯದುದ್ದಕ್ಕೂ ಪಾಕ್ ಆಟಗಾರರ ಕೈ ಕುಲುಕದೆ ಪಹಲ್ಗಾಮ್ ಕೃತ್ಯಕ್ಕೆ ಆಟಗಾರರು ಸೇಡು ತೀರಿಸಿಕೊಂಡಿದ್ದಾರೆ.
ಭಾನುವಾರ ದುಬೈನಲ್ಲಿ (Dubai) ನಡೆದ ಏಷ್ಯಾ ಕಪ್ (Asia Cup) ಕ್ರಿಕೆಟ್ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಸುಲಭ ಗೆಲುವು ದಾಖಲಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಪಾಕ್, ಸ್ಪಿನ್ನರ್‌ಗಳಾದ ಕುಲ್ದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಕೈ ಚಳಕದ ಮುಂದೆ 20 ಓವರ್‌ಗಳಲ್ಲಿ 127 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತ 15.5 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಸುಲಭ ಜಯಗಳಿಸಿತು. ಆದರೆ ಇಡೀ ಪಂದ್ಯದುದ್ದಕ್ಕೂ ದುಬೈ ಅಂಗಳದಲ್ಲಿ ಭಾರತ ಪಾಕ್‌ನ ಮಾನ ಕಳೆಯುವ ಕೆಲಸವನ್ನೂ ಮಾಡ್ತಾನೇ ಬಂತು. ಇದನ್ನೂ ಓದಿ: ಪಾಕ್ ವಿರುದ್ಧದ ಗೆಲುವನ್ನು ಪಹಲ್ಗಾಮ್ ಸಂತ್ರಸ್ತರು, ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸಿದ ಕ್ಯಾಪ್ಟನ್ ಸೂರ್ಯ
ಪಂದ್ಯ ನಡೀವಾಗ್ಲೂ ಪರಸ್ಪರ ಮಾತಿಲ್ಲ
ಎಷ್ಟೇ ವೈರತ್ವವಿದ್ದರೂ ಪಂದ್ಯದ ನಡುವೆ ಉಭಯ ತಂಡಗಳ ಆಟಗಾರರ ನಡುವೆ ಒಂದೆರಡು ಬಾರಿಯಾದರೂ ಮಾತುಕತೆ ನಡೆಯುತ್ತದೆ. ಒಬ್ಬರನ್ನೊಬ್ಬರು ಕಿಚಾಯಿಸುವುದು, ಕಾಲೆಳೆಯುವುದು, ಬೈದುಕೊಳ್ಳುವುದು, ಗುರಾಯಿಸುವುದು ಇದ್ದಿದ್ದೇ. ಆದರೆ ಭಾನುವಾರದ ಪಂದ್ಯದಲ್ಲಿ ಇದಾವುದು ಕಾಣಿಸಿಲ್ಲ. ಪಂದ್ಯದ ವೇಳೆ ಭಾರತ ತಂಡದ ಆಟಗಾರರು ಪಾಕಿಸ್ತಾನ ಆಟಗಾರರ ಜೊತೆ ಮಾತಾಡುವುದಿರಲಿ, ಅವರನ್ನು ಕಣ್ಣೆತ್ತಿಯೂ ನೋಡಲಿಲ್ಲ.
ಪಾಕ್‌ನ ಅಭಿನಂದನೆ ಸ್ವೀಕರಿಸದ ಭಾರತ
ಸಿಕ್ಸರ್ ಸಿಡಿಸುವ ಗೆಲುವು ದಾಖಲಿಸಿದ ಬಳಿಕ ಟೀಮ್ ಇಂಡಿಯಾ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್, ಪಾಕಿಗಳಿಗೆ ಹ್ಯಾಂಡ್ ಶೇಕ್ ಮಾಡದೆ ತಮ್ಮ ಜೊತೆಗಾರ ದುಬೆ ಜೊತೆ ಪೆವಿಲಿಯನ್‌ಗೆ ತೆರಳಿದರು. ಟೀಮ್ ಇಂಡಿಯಾದ ಯಾವುದೇ ಆಟಗಾರರು ಡ್ರೆಸ್ಸಿಂಗ್ ರೂಂನಿಂದ ಇಳಿದು ಕೆಳಕ್ಕೇ ಬರಲಿಲ್ಲ. ಭಾರತೀಯರನ್ನು ಅಭಿನಂದಿಸಲು ಪಾಕ್ ಆಟಗಾರರು ಮೈದಾನದಲ್ಲೇ ಕಾಯುತ್ತಾ ನಿಂತಿದ್ದರು. ಆದರೆ ಭಾರತೀಯರೆಲ್ಲರೂ ಡ್ರೆಸ್ಸಿಂಗ್ ರೂಂ ಒಳಕ್ಕೆ ಹೋಗಿ, ಬಾಗಿಲು ಬಂದ್ ಮಾಡಿಕೊಂಡರು.
ಸ್ಟೇಡಿಯಂನಲ್ಲಿ ಪಾಕ್ ರಾಷ್ಟ್ರಗೀತೆ ಬದಲು ʻಜಿಲೇಬಿ ಬೇಬಿʼ ಪ್ರಸಾರ
ಪಂದ್ಯಕ್ಕೂ ಮುನ್ನ ಉಭಯ ತಂಡಗಳ ರಾಷ್ಟ್ರಗೀತೆ ಪ್ರಸಾರ ಮಾಡುವುದನ್ನು ಪ್ರತಿ ಪಂದ್ಯದಲ್ಲೂ ನಾವು ನೋಡಿದ್ದೇವೆ. ಆದರೆ ನಿನ್ನೆ ನಡೆದ ಪಂದ್ಯದ ವೇಳೆ ಪಾಕ್ ರಾಷ್ಟ್ರಗೀತೆ ಬದಲು ಡಿಜೆ ಹಾಡು ಪ್ರಸಾರವಾಗಿದ್ದು, ಇದರಿಂದ ಪಾಕ್ ಆಟಗಾರರು ಮುಜುಗರಕ್ಕೀಡಾದರು. ಪಾಕಿಸ್ತಾನದ ರಾಷ್ಟ್ರಗೀತೆ ಪ್ರಸಾರಕ್ಕೂ ಮುನ್ನ ಮೈದಾನದಲ್ಲಿ ‘ಜಿಲೇಬಿ ಬೇಬಿ’ ಹಾಡು 6 ಸೆಕೆಂಡ್ ಪ್ರಸಾರವಾಗಿದೆ. ಬಳಿಕ ತಮ್ಮ ತಪ್ಪನ್ನು ಸರಿಪಡಿಸಿಕೊಂಡ ಆಯೋಜಕರು, ಪಾಕ್ ರಾಷ್ಟ್ರ ಗೀತೆಯನ್ನು ಪ್ರಸಾರ ಮಾಡಿದ್ದಾರೆ. ಆದರೆ ಈ ಯಡವಟ್ಟಿನ ವೀಡಿಯೋ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇದನ್ನೂ ಓದಿ: ಬರ್ತ್‌ಡೇ ದಿನವೇ ಪಾಕ್ ವಿರುದ್ಧ ಭಾರತಕ್ಕೆ ಗೆಲುವಿನ ಸಿಹಿ ಕೊಟ್ಟ ನಾಯಕ ಸೂರ್ಯ
ಇದಲ್ಲದೇ ಟಾಸ್ ವೇಳೆ ಸೂರ್ಯಕುಮಾರ್ ಯಾದವ್, ಪಾಕ್ ನಾಯಕನಿಗೆ ಹ್ಯಾಂಡ್ ಶೇಕ್ ಮಾಡದೇ ತೆರಳಿದ್ದರು. ಪಂದ್ಯದ ಗೆಲುವಿನ ಬಳಿಕವೂ ಪಾಕ್ ಆಟಗಾರರ ಕೈ ಕುಲುಕದೆ ಸೂರ್ಯಕುಮಾರ್ ಯಾದವ್ ಹಾಗು ಶಿವಂ ದುಬೆ ಸೀನ್ ಡ್ರೆಸ್ಸಿಂಗ್ ರೂಂ ಕಡೆ ಮುಖ ಮಾಡಿದ್ದರು. ಪಾಕ್ ಆಟಗಾರರನ್ನ ಗ್ರೌಂಡ್‌ನಲ್ಲೇ ಕಾಯುವಂತೆ ಮಾಡಿ ಪ್ರತೀಕಾರ ಟೀಮ್ ಇಂಡಿಯಾ ಆಟಗಾರರು. ಬಹುಮಾನ ವಿತರಣೆ ವೇಳೆ ಪಾಕ್ ಜೆರ್ಸಿ ತೊಟ್ಟಿದ್ದ ಮಹಿಳೆಗೂ ಟೀಮ್ ಇಂಡಿಯಾ ಆಟಗಾರರು ಶೇಕ್ ಮಾಡಿರಲಿಲ್ಲ. ಸಂದರ್ಶನದ ಬಳಿಕ ಪಹಲ್ಗಾಮ್ ದಾಳಿಯಲ್ಲಿ ಮಡಿದವರ ಸಂತ್ರಸ್ತ ಕುಟುಂಬಗಳ ಜೊತೆ ನಾವಿದ್ದೀವಿ. ಈ ಗೆಲುವು ಶೌರ್ಯ ಪ್ರದರ್ಶಿಸಿದ ಸೇನೆಗೆ ಅರ್ಪಿಸ್ತೇನೆ ಅಂತಿದ್ದಂತೆ ಕ್ರೀಡಾಂಗಣದಲ್ಲಿ ಅಭಿಮಾನಿಗಳಿಂದ ಹರ್ಷೋಧ್ಘಾರ ವ್ಯಕ್ತಪಡಿಸಲಾಯ್ತು.
ಪಾಪಿ ಪಾಕ್ ವಿರುದ್ಧ ಮ್ಯಾಚ್ ಆಡಬಾರದು ಅನ್ನೊ ವಿರೋಧಗಳ ನಡುವೆ ಟೀಂ ಇಂಡಿಯಾ ಆಟಗಾರರು ಹಾಗೂ ಕ್ಯಾಪ್ಟನ್ ಸೂರ್ಯ, ಕ್ರಿಕೆಟ್ ಜಗತ್ತಿನ ಮುಂದೆ ಪಾಕ್‌ನ ಮಾನ ಕಳೆದಿದ್ದಾರೆ. ಪಹಲ್ಗಾಮ್ ಟೆರರ್ ಅಟ್ಯಾಕ್‌ನ ಸೂತ್ರಧಾರರು ಪಾಕಿಗಳು ಅಂತ ಬೆತ್ತಲು ಮಾಡಿದ್ದಾರೆ. ಟೀಂ ಇಂಡಿಯಾ ಪ್ಲೇಯರ್ಸ್‌ಗಳ ಈ ನಡೆಗೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.