ನವದೆಹಲಿ: ಯುದ್ಧಭೂಮಿಯಲ್ಲಿ ಅತ್ಯಂತ ಯಶಸ್ವಿಯಾಗಿ ಸಾಬೀತಾಗಿರುವ, ಒಬ್ಬರೇ ಹೊತ್ತೊಯ್ಯಬಹುದಾದ ಮತ್ತು ‘fire-and-forget’ ತಂತ್ರಜ್ಞಾನ ಹೊಂದಿರುವ ಮಧ್ಯಮ ಶ್ರೇಣಿಯ ಜಾವೆಲಿನ್ ಟ್ಯಾಂಕ್-ನಿಗ್ರಹ ಕ್ಷಿಪಣಿ (ಆಂಟಿ-ಟ್ಯಾಂಕ್ ಮಿಸೈಲ್) ವ್ಯವಸ್ಥೆಯನ್ನು ಖರೀದಿಸಲು ಭಾರತ (India) ಯೋಜಿಸುತ್ತಿದೆ ಎಂದು ಭಾರತದಲ್ಲಿನ ಯುಎಸ್ ರಾಯಭಾರಿ ಸೆರ್ಗಿಯೊ ಗೋರ್(Sergio Gor) ತಿಳಿಸಿದ್ದಾರೆ.
ಭಾರತ(India) ಮತ್ತು ಅಮೆರಿಕ(USA) ನಡುವಿನ ರಕ್ಷಣಾ ಸಹಕಾರವನ್ನು ಬಲಪಡಿಸುವ ಉದ್ದೇಶದಿಂದ, ಭಾರತಕ್ಕೆ ಎಫ್‌ಜಿಎಂ-148 (FGM-148) ಜಾವೆಲಿನ್ ಶಸ್ತ್ರಾಸ್ತ್ರ ವ್ಯವಸ್ಥೆಯ (Javelin Anti-Tank Weapon System) ಮಾರಾಟಕ್ಕೆ ಕಳೆದ ವರ್ಷದ ನವೆಂಬರ್‌ನಲ್ಲಿ ಅಮೆರಿಕದ ವಿದೇಶಾಂಗ ಇಲಾಖೆ ಅನುಮೋದನೆ ನೀಡಿತ್ತು.
ಈ ಕುರಿತು ಎಕ್ಸ್ ತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಗೋರ್, “ದೊಡ್ಡ ಸುದ್ದಿ! ಯುದ್ಧ-ಪರೀಕ್ಷಿತ ಜಾವೆಲಿನ್ ಆಂಟಿ-ಟ್ಯಾಂಕ್ ವ್ಯವಸ್ಥೆಯನ್ನು ಖರೀದಿಸಲು ಭಾರತ ಯೋಜಿಸುತ್ತಿದೆ. ಮೇ 2026ರ ಶಾಂಗ್ರಿ-ಲಾ ಸಂವಾದದಲ್ಲಿ ಯುಎಸ್ ವಿದೇಶಾಂಗ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಪ್ರಸ್ತಾಪಿಸಿದಂತೆ, ಇದು ಯುಎಸ್-ಭಾರತ ರಕ್ಷಣಾ ಬಾಂಧವ್ಯದಲ್ಲಿನ ಒಂದು ಮಹತ್ವದ ಹೆಜ್ಜೆಯಾಗಿದೆ. ಅಲ್ಲದೆ ಇದು ಜಂಟಿ ಉತ್ಪಾದನೆಯ ಸಾಧ್ಯತೆಗಳಿಗೂ ಬಾಗಿಲು ತೆರೆಯುತ್ತದೆ” ಎಂದು ತಿಳಿಸಿದ್ದಾರೆ.
ಭಾರತವು ಎಷ್ಟು ಸಂಖ್ಯೆಯ ಜಾವೆಲಿನ್ ಕ್ಷಿಪಣಿ ವ್ಯವಸ್ಥೆಗಳನ್ನು ಖರೀದಿಸುತ್ತಿದೆ ಅಥವಾ ಈ ಒಪ್ಪಂದದ ಒಟ್ಟು ಮೊತ್ತವೆಷ್ಟು ಎಂಬ ವಿವರಗಳು ತಿಳಿದುಬಂದಿಲ್ಲ.
BIG news! India plans to buy the battle-tested Javelin anti-tank system. Just as @secwar highlighted at the May 2026 Shangri-La Dialogue, this is a great step forward in the U.S.-India defense relationship and opens the door to co-production possibilities. The engagement between…
— Ambassador Sergio Gor (@USAmbIndia) August 28, 2026
ಏನಿದು ಜಾವೆಲಿನ್ ಕ್ಷಿಪಣಿ?
ಜ್ಯಾವೆಲಿನ್ ಕ್ಷಿಪಣಿಯು ಶಸ್ತ್ರಸಜ್ಜಿತ ಯುದ್ಧ ಟ್ಯಾಂಕ್‌ಗಳನ್ನು ನಾಶಪಡಿಸಲು ಲಾಕ್‌ಹೀಡ್ ಮಾರ್ಟಿನ್ ಮತ್ತು ಆರ್‌ಟಿಎಕ್ಸ್ (RTX/ರೇಥಿಯಾನ್) ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಸುಧಾರಿತ ಟ್ಯಾಂಕ್-ನಿಗ್ರಹ ವ್ಯವಸ್ಥೆಯಾಗಿದೆ. ಇದು ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ಸೇನೆಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರ ವೇಳೆ S-400 ಹುಡುಕಲು ಪಾಕ್ ಸ್ಪೈ ನೆಟ್‌ವರ್ಕ್, ಸ್ಲೀಪರ್ ಸೆಲ್ ಬಳಕೆ: ಜೀತೇಂದ್ರ ಮಿಶ್ರಾ
ಯುದ್ಧ ಟ್ಯಾಂಕ್‌ಗಳ ಮೇಲ್ಭಾಗದಲ್ಲಿ (ಕ್ಯಾನೋಪಿ/ಕಾಕ್‌ಪಿಟ್ ಪ್ರವೇಶದ್ವಾರ) ರಕ್ಷಾಕವಚ ತೀರಾ ದುರ್ಬಲವಾಗಿರುತ್ತದೆ. ಜ್ಯಾವೆಲಿನ್ ಉಡಾವಣೆಯಾದ ಬಳಿಕ ತಲೆಕೆಳಗಾದ ‘ಯು’ (Inverted U) ಆಕಾರದ ಪಥದಲ್ಲಿ ಸಾಗಿ, ಟ್ಯಾಂಕ್‌ನ ಮೇಲ್ಭಾಗಕ್ಕೆ ಬಲವಾಗಿ ಅಪ್ಪಳಿಸಿ ಧ್ವಂಸಗೊಳಿಸುತ್ತದೆ.
ಗನ್ನರ್ ಕರ್ಸರ್ ಬಳಸಿ ಗುರಿಯನ್ನು ಗುರುತಿಸಿದ ತಕ್ಷಣ ಕಮಾಂಡ್ ಲಾಂಚ್ ಯುನಿಟ್ ಕ್ಷಿಪಣಿಗೆ ಸಿಗ್ನಲ್ ರವಾನಿಸುತ್ತದೆ. ಇದು ಅತ್ಯಂತ ಹಗುರವಾಗಿರುವುದರಿಂದ, ಸೈನಿಕರು ಉಡಾವಣೆಯ ನಂತರ ಸುಲಭವಾಗಿ ಸ್ಥಳ ಬದಲಾಯಿಸಲು ಅಥವಾ ಮರುಲೋಡ್ ಮಾಡಲು ಸಾಧ್ಯವಾಗುತ್ತದೆ.
ಇದರ ‘ಸಾಫ್ಟ್-ಲಾಂಚ್’ ವಿನ್ಯಾಸದ ಕಾರಣದಿಂದಾಗಿ ಕಟ್ಟಡಗಳು, ಕೊಠಡಿಗಳು ಅಥವಾ ಬಂಕರ್‌ಗಳಂತಹ ಮುಚ್ಚಿದ ಸ್ಥಳಗಳಿಂದಲೂ ಸೈನಿಕರು ಇದನ್ನು ಸುರಕ್ಷಿತವಾಗಿ ಉಡಾಯಿಸಬಹುದಾಗಿದೆ.
