ನವದೆಹಲಿ: ಯುದ್ಧ ಪೀಡಿತ ಇಸ್ರೇಲ್‍ನಲ್ಲಿ (Israel) ಸಿಲುಕಿರುವ ಭಾರತೀಯರನ್ನು (India) ಕರೆತರಲು ಕೇಂದ್ರ ಸರ್ಕಾರ ಆಪರೇಷನ್ ಅಜಯ್ (Operation Ajay) ಹೆಸರಿನಲ್ಲಿ ವಿಶೇಷ ವಿಮಾನಗಳನ್ನು ಕಳಿಸಿಕೊಡಲು ಸಿದ್ಧತೆ ನಡೆಸಿದೆ.
Launching #OperationAjay to facilitate the return from Israel of our citizens who wish to return.
Special charter flights and other arrangements being put in place.
Fully committed to the safety and well-being of our nationals abroad.
— Dr. S. Jaishankar (@DrSJaishankar) October 11, 2023
Advertisement
ಇಸ್ರೇಲ್‍ನಲ್ಲಿ 18,000 ಭಾರತೀಯರಿದ್ದಾರೆ. ಅವರನ್ನು ಕರೆತರಲು ವಿಶೇಷ ಚಾರ್ಟರ್ ಫ್ಲೈಟ್‍ಗಳನ್ನು ಕಳಿಸಲಾಗುವುದು. ವಿದೇಶದಲ್ಲಿರುವ ನಮ್ಮ ಪ್ರಜೆಗಳ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ (S.Jaishankar) ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಇಸ್ರೇಲ್, ಹಮಾಸ್ ಸಂಘರ್ಷ- ಭಾರತದ ಆರ್ಥಿಕ ಕಾರಿಡಾರ್ ಯೋಜನೆಗೆ ಯುದ್ಧದ ಕಾರ್ಮೋಡ
Advertisement
Advertisement
ಹಿಂದಿರುಗಲು ಮೊದಲು ನೋಂದಾಯಿಸಿದ ಭಾರತೀಯರಿಗೆ ಸೂಚನೆ ನೀಡಲಾಗಿದೆ. ನಾಳೆ ಭಾರತಕ್ಕೆ ಮೊದಲ ವಿಶೇಷ ವಿಮಾನದಲ್ಲಿ ಅವರನ್ನು ಕಳಿಸಲಾಗುವುದು. ಅಲ್ಲದೇ ನೋಂದಾಯಿತರಿಗೆ ಇಮೇಲ್ ಮೂಲಕ ಸಂದೇಶ ರವಾನಿಸಲಾಗಿದೆ ಎಂದು ಇಸ್ರೇಲ್‍ನಲ್ಲಿರುವ ಭಾರತದ ರಾಯಭಾರ ಕಚೇರಿ ತಿಳಿಸಿದೆ.
Advertisement
ಇದುವರೆಗೂ ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಯುದ್ಧದಲ್ಲಿ ಸುಮಾರು 3,000ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಇಸ್ರೇಲ್‌ಗೆ ಬಂದಿಳಿದ ಅಮೆರಿಕದ ಶಸ್ತ್ರಾಸ್ತ್ರ ಹೊತ್ತ ಮೊದಲ ವಿಮಾನ – ಇಸ್ರೇಲ್‌ಗೆ ನೂರಾನೆ ಬಲ
Web Stories