ನವದೆಹಲಿ: ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಭಾರತ ಈಗ ಚೀನಾವನ್ನು ಹಿಂದಿಕ್ಕಿದ್ದು, ಕಳೆದ ವರ್ಷ ಒಟ್ಟು 1.77 ಕೋಟಿ ದ್ವಿಚಕ್ರ ವಾಹನ ದೇಶದಲ್ಲಿ ಮಾರಾಟವಾಗಿದೆ. ದಿನದ ಲೆಕ್ಕಾಚಾರರ ಹಾಕಿದರೆ ಪ್ರತಿದಿನ ಅಂದಾಜು 48 ಸಾವಿರ ದ್ವಿಚಕ್ರ ವಾಹನಗಳು ಮಾರಾಟವಾಗಿದೆ.
ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನ್ಯುಫ್ಯಾಕ್ಚರ್ಸ್ ನ ಹಿರಿಯ ಅಧಿಕಾರಿಯೊಬ್ಬರು ಈ ವಿಚಾರವನ್ನು ತಿಳಿಸಿದ್ದು, ಭಾರತದಲ್ಲಿ 1.77 ಕೋಟಿ ಮಾರಾಟವಾಗಿದ್ದರೆ, ಚೀನಾದಲ್ಲಿ 1.68 ಕೋಟಿ ದ್ವಿಚಕ್ರ ವಾಹನಗಳು ಮಾರಾಟವಾಗಿದೆ ಎಂದು ಅವರು ಹೇಳಿದ್ದಾರೆ.
Advertisement
ಮಾರಾಟ ಹೆಚ್ಚಾಗಿದ್ದು ಹೇಗೆ?
ಗ್ರಾಮೀಣ ಭಾಗದ ಜನರ ಆದಾಯ ಹೆಚ್ಚಾಗುತ್ತಿರುವ ಜೊತೆ ರಸ್ತೆಗಳು ಈಗ ಅಭಿವೃದ್ಧಿಯಾಗುತ್ತಿರುವುದಿಂದ ಗಣನೀಯವಾಗಿ ಮಾರಾಟದಲ್ಲಿ ಹೆಚ್ಚಳ ಕಂಡು ಬಂದಿದೆ. ಇದರ ಜೊತೆಗೆ ಮಹಿಳಾ ಸವಾರರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮಾರಾಟದಲ್ಲಿ ಏರಿಕೆಯಾಗಿದೆ.
Advertisement
ಸರ್ಕಾರ ಈಗ ಗ್ರಾಮೀಣ ಭಾಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುತ್ತಿದೆ. ವಿಶೇಷವಾಗಿ ಭಾರೀ ಪ್ರಮಾಣದಲ್ಲಿ ರಸ್ತೆ ನಿರ್ಮಾಣವಾಗುತ್ತಿದೆ. ಸುಲಭವಾದ ಹಣಕಾಸು ಆಯ್ಕೆಗಳು, ಆನ್‍ಲೈನ್ ವ್ಯವಹಾರಗಳಿಗೆ ಉತ್ತೇಜನದಂತಹ ಕಾರಣಗಳಿಂದಾಗಿ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ ಎಂದು ಹೆಸರನ್ನು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
ಇದನ್ನೂ ಓದಿ: ಪೆಟ್ರೋಲ್ ಬಂಕ್‍ಗಳಲ್ಲಿ ಹೀಗೂ ಮೋಸ ಮಾಡ್ತಾರೆ ಗೊತ್ತಾ!
Advertisement
ಚೀನಾದಲ್ಲಿ ಇಳಿಕೆಯಾಗಿದ್ದು ಯಾಕೆ?
ಕಳೆದ ಕೆಲ ವರ್ಷಗಳಿಂದ ಚೀನಾದ ಮಾರುಕಟ್ಟೆ ಇಳಿಕೆಯಾಗುತ್ತಿದೆ. ಇದರ ಜೊತೆಯಲ್ಲಿ ಈಗ ಅಲ್ಲಿ ಪೆಟ್ರೋಲ್ ಗಿಂತ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಖರೀದಿಸುತ್ತಿರುವುದರಿಂದ ಕಳೆದ ವರ್ಷ 1.68 ಕೋಟಿ ದ್ವಿಚಕ್ರ ವಾಹನಗಳು ಮಾರಾಟವಾಗಿದೆ.
ಇಂಡೋನೇಷ್ಯಾಕ್ಕೆ ಮೂರನೇ ಸ್ಥಾನ ಸಿಕ್ಕಿದ್ದು, 2015ಕ್ಕೆ ಹೋಲಿಸಿದರೆ ಮಾರಾಟ ಕಡಿಮೆಯಾಗಿದ್ದು ಕಳೆದ ವರ್ಷ 60 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. 2015ರಲ್ಲಿ 65 ಲಕ್ಷ ದ್ವಿಚಕ್ರ ವಾಹನಗಳು ಅಲ್ಲಿ ಮಾರಾಟವಾಗಿತ್ತು.
ಆಟೋಮೊಬೈಲ್ ಕ್ಷೇತ್ರದ ಪರಿಣಿತರು ಮುಂದಿನ ವರ್ಷ ಶೇ.9 ರಿಂದ 11ರಷ್ಟು ಈ ಕ್ಷೇತ್ರ ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಿದ್ದಾರೆ. ಕಡಿಮೆ ಬೆಲೆಯ ದ್ವಿಚಕ್ರ ವಾಹನದ ಜೊತೆ ಜನರು 1 ಲಕ್ಷಕ್ಕೂ ಅಧಿಕ ಬೆಲೆಯ ವಾಹನವನ್ನು ಖರೀದಿಸುತ್ತಿದ್ದು, ರಾಯಲ್ ಎನ್‍ಫೀಲ್ಡ್ ಬೈಕ್‍ಗಳ ಮಾರಾಟ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.30ರಷ್ಟು ಏರಿಕೆಯಾಗಿದೆ.
ಇದನ್ನೂ ಓದಿ: ಏನಿದು ಬಿಎಸ್ -3? ಈಗ ಇರೋ ವಾಹನಗಳು ಏನಾಗುತ್ತೆ?
5 ಲಕ್ಷ ರೂ.ಗಿಂತಲೂ ಹೆಚ್ಚಿನ ಬೆಲೆ ಇರುವ ಇಂಗ್ಲೆಂಡಿನ ಟ್ರಯಂಪ್ ಮತ್ತು ಅಮೆರಿಕ ಹಾರ್ಲೆ ಡೇವಿಡ್‍ಸನ್ ಕಂಪೆನಿಯ ದುಬಾರಿ ಬೈಕ್‍ಗಳನ್ನೂ ಜನರು ಖರೀದಿಸುತ್ತಿದ್ದಾರೆ. ಟ್ರಯಂಪ್ 2013ರಲ್ಲಿ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದ್ದು ಇದೂವರೆಗೆ 4 ಸಾವಿರಕ್ಕೂ ಹೆಚ್ಚು ಬೈಕ್ ಗಳನ್ನು ಮಾರಾಟ ಮಾಡಿದೆ.
ಇದನ್ನೂ ಓದಿ: 2030ರ ವೇಳೆಗೆ ಭಾರತದಲ್ಲಿ ಒಂದೇ ಒಂದು ಪೆಟ್ರೋಲ್, ಡೀಸೆಲ್ ಕಾರು ಮಾರಾಟವಾಗಲ್ಲ
ಇದನ್ನೂ ಓದಿ: 1 ರೂ. ಟಿಕೆಟ್‍ಗೆ 17 ಕಿ.ಮೀ ಸಂಚಾರ – ಇದು ದನದ ಸೆಗಣಿಯಿಂದ ಓಡೋ ಬಸ್ ವಿಶೇಷತೆ
ಇದನ್ನೂ ಓದಿ: 2016-17ರಲ್ಲಿ ಮಾರಾಟವಾದ ದೇಶದ ಟಾಪ್ -10 ಕಾರುಗಳು: ಯಾವ ಕಾರು ಎಷ್ಟು ಮಾರಾಟವಾಗಿದೆ?