Automobile
2030ರ ವೇಳೆಗೆ ಭಾರತದಲ್ಲಿ ಒಂದೇ ಒಂದು ಪೆಟ್ರೋಲ್, ಡೀಸೆಲ್ ಕಾರು ಮಾರಾಟವಾಗಲ್ಲ

ನವದೆಹಲಿ: ಕೇಂದ್ರ ಸರ್ಕಾರ ಮತ್ತು ನೀತಿ ಆಯೋಗದ ಕನಸು ನನಸಾದರೆ 2030ರ ವೇಳೆಗೆ ಭಾರತದಲ್ಲಿ ಒಂದೇ ಒಂದು ಪೆಟ್ರೋಲ್, ಡೀಸೆಲ್ ಕಾರು ಮಾರಾಟ ಆಗಲ್ಲ.
ಹೌದು. ಕಚ್ಚಾ ತೈಲದ ಆಮದನ್ನು ಕಡಿಮೆ ಮಾಡಲು ಭಾರೀ ಪ್ರಮಾಣದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗೆ ಇಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಈ ವಿಚಾರವಾಗಿ ಇಂಧನ ಸಚಿವ ಪಿಯೂಷ್ ಗೋಯಲ್ ಮಾತನಾಡಿದ್ದು, ನಾವು ದೊಡ್ಡ ಪ್ರಮಾಣದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗೆ ಇಳಿಸಲು ಚಿಂತನೆ ನಡೆಸಿದ್ದೇವೆ. 2030ರ ವೇಳೆಗೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಮಾರಾಟ ಸಂಪೂರ್ಣ ಸ್ಥಗಿತವಾಗಬೇಕು. ಈ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪೆಟ್ರೋಲ್ ಬಂಕ್‍ಗಳಲ್ಲಿ ಹೀಗೂ ಮೋಸ ಮಾಡ್ತಾರೆ ಗೊತ್ತಾ!
ಆರಂಭದ 2-3 ವರ್ಷ ಸರ್ಕಾರವೇ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಸಹಾಯ ನೀಡುತ್ತದೆ. ದೇಶದ ಅತಿ ದೊಡ್ಡ ಕಾರು ಉತ್ಪಾದಕ ಕಂಪೆನಿಗೆ ಸರ್ಕಾರ ಸಹಕಾರ ನೀಡಿದರೆ ಮುಂದೆ ದೇಶದ ಆಟೋಮೊಬೈಲ್ ಕೈಗಾರಿಕೆಯ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ವಿವರಿಸಿದರು.
ಬೃಹತ್ ಕೈಗಾರಿಕಾ ಸಚಿವಾಲಯ ಮತ್ತು ನೀತಿ ಆಯೋಗ ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗೆ ಇಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು. ವಾಹನಗಳ ಬೆಲೆ ಬಗ್ಗೆ ಪ್ರತಿಕ್ರಿಯಿಸಿ, ಎಲೆಕ್ಟ್ರಿಕ್ ವಾಹನಗಳು ಜನರ ಕೈಗೆ ಎಟಕುವ ದರದಲ್ಲಿ ಇರಲಿದೆ ಎಂದು ಪೆಟ್ರೋಲ್, ಡೀಸೆಲ್, ಎಲೆಕ್ಟ್ರಿಕ್ ಕಾರು,ಇಂಧನ, ಪಿಯೂಷ್ ಗೋಯಲ್ ಹೇಳಿದರು.
ಯುಜಲಾ ಯೋಜನಾ ಮೂಲಕ ಕಳೆದ ಎರಡು ವರ್ಷಗಳಲ್ಲಿ 500 ದಶಲಕ್ಷ ಎಲ್‍ಇಡಿ ಬಲ್ಬ್ ಗಳನ್ನು ದೇಶದಲ್ಲಿ ವಿತರಿಸಲಾಗಿದೆ. ವಿದ್ಯುತ್ ಉತ್ಪಾದನೆಯನ್ನು ಹೆಚ್ಚಳ ಮಾಡಿ ವಿದ್ಯುತ್ ವ್ಯರ್ಥವಾಗಿ ಪೋಲಾಗುವುದನ್ನು ನಿಲ್ಲಿಸುವುದು ನನ್ನ ಕೆಲಸ ಎಂದರು.
ವಿಶ್ವದಲ್ಲಿ ಮೊದಲ ಬಾರಿಗೆ ನಾರ್ವೆ ಸರ್ಕಾರ ಈ ಕ್ರಮವನ್ನು ಕೈಗೊಂಡಿದ್ದು, 2025ರಿಂದ ಪೆಟ್ರೋಲ್, ಡೀಸೆಲ್ ಕಾರುಗಳು ಅಲ್ಲಿನ ರಸ್ತೆಗೆ ಇಳಿಯುವಂತಿಲ್ಲ. 2030ರ ವೇಳೆಗೆ ಪೆಟ್ರೋಲ್, ಡೀಸೆಲ್ ಕಾರುಗಳನ್ನು ನಿಷೇಧಿಸುವ ನಿರ್ಧಾರವನ್ನು ಜರ್ಮನಿ ಈ ಹಿಂದೆ ಕೈಗೊಂಡಿತ್ತು.
ಎಲೆಕ್ಟ್ರಿಕ್ ವಾಹನಗಳು ದುಬಾರಿ:
ಅಶೋಕ್ ಲೇಲ್ಯಾಂಡ್ ಕಂಪೆನಿ ಮೊದಲ ಬಾರಿಗೆ ಸ್ವದೇಶಿ ಎಲೆಕ್ಟ್ರಿಕ್ ಬಸ್ ತಯಾರಿಸಿದೆ. 2016ರ ಅಕ್ಟೋಬರ್ ನಲ್ಲಿ ಈ ಬಸ್ ಬಿಡುಗಡೆ ಮಾಡಿದೆ. 1.75 ಕೋಟಿ ರೂ. ವೆಚ್ಚದಲ್ಲಿ ಈ ಬಸ್ ತಯಾರಾಗಿದ್ದು, ಒಮ್ಮೆ ಬ್ಯಾಟರಿ ಫುಲ್ ಚಾರ್ಜ್ ಮಾಡಿದರೆ 120 ಕಿ.ಮೀ ಕ್ರಮಿಸುತ್ತದೆ.
ಇದನ್ನೂ ಓದಿ: 1 ರೂ. ಟಿಕೆಟ್‍ಗೆ 17 ಕಿ.ಮೀ ಸಂಚಾರ – ಇದು ದನದ ಸೆಗಣಿಯಿಂದ ಓಡೋ ಬಸ್ ವಿಶೇಷತೆ
ಇದನ್ನೂ ಓದಿ: 2016-17ರಲ್ಲಿ ಮಾರಾಟವಾದ ದೇಶದ ಟಾಪ್ -10 ಕಾರುಗಳು: ಯಾವ ಕಾರು ಎಷ್ಟು ಮಾರಾಟವಾಗಿದೆ?
