– ಬೀಜಿಂಗ್-ದೆಹಲಿ ನಡುವೆ ನೇರ ವಿಮಾನ ಸಂಪರ್ಕಕ್ಕೆ ತಾತ್ವಿಕ ಒಪ್ಪಿಗೆ
ನವದೆಹಲಿ: 2025ರ ಬೇಸಿಗೆಯಲ್ಲಿ ಕೈಲಾಸ-ಮಾನಸ ಸರೋವರ ಯಾತ್ರೆಯನ್ನು (Kailash Mansarovar Yatra) ಪುನರಾರಂಭಿಸಲು ಭಾರತ-ಚೀನಾ ಒಪ್ಪಿಕೊಂಡಿವೆ. 2020ರ ನಂತರ ನಿಲ್ಲಿಸಲಾಗಿದ್ದ ಈ ಯಾತ್ರೆಯನ್ನು ಪುನರಾರಂಭಿಸಲು ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ ಎಂದು ವಿದೇಶಾಂಗ ಸಚಿವಾಲಯ ಸೋಮವಾರ ತಿಳಿಸಿದೆ.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ನಡುವಿನ ಸಭೆಯಲ್ಲಿ ಎರಡೂ ರಾಷ್ಟ್ರಗಳ ನಡುವೆ ನೇರ ವಿಮಾನ ಪುನಾರಂಭಿಸಲು ತಾತ್ವಿಕ ಒಪ್ಪಿಗೂ ಸಿಕ್ಕಿದೆ. ಇದನ್ನೂ ಓದಿ: ಸಿಎಂ ಪತ್ನಿಗೆ ಇಡಿ ನೋಟಿಸ್ ರಾಜಕೀಯ ಅನ್ನೋಕ್ಕಾಗಲ್ಲ, ಉತ್ತರ ಕೊಡಲಿ – ಸತೀಶ್ ಜಾರಕಿಹೊಳಿ
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಇದೇ ಜನವರಿ 26-27 ರಂದು ಬೀಜಿಂಗ್‌ಗೆ ಭೇಟಿ ನೀಡಿ ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿ, ಉಪ ವಿದೇಶಾಂಗ ಸಚಿವರ ಕಾರ್ಯವಿಧಾನ ಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಭಾರತ ಮತ್ತು ಚೀನಾ ತಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಪರಿಶೀಲಿಸಿವೆ.
ಅಕ್ಟೋಬರ್‌ನಲ್ಲಿ ಕಜಾನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ಮಾಡಿಕೊಂಡ ಒಪ್ಪಂದಗಳಿಗೆ ಅನುಗುಣವಾಗಿ ನಡೆದ ಈ ಸಭೆಯಲ್ಲಿ, ಸಂಬಂಧಗಳನ್ನು ಸ್ಥಿರಗೊಳಿಸಲು ಮತ್ತು ಪುನರ್ನಿರ್ಮಿಸಲು ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಲು ಎರಡೂ ಕಡೆಯವರು ಒಪ್ಪಿಕೊಂಡಿರುವುದಾಗಿ ವಿದೇಶಾಂಗ ಸಚಿವಾಲಯ ತಿಳಿಸಿದೆ.
2020ರ ಕೋವಿಡ್ ಬಳಿಕ ಟಿಬೆಟ್‌ನ ಕೈಲಾಸ ಪರ್ವತ ಮತ್ತು ಮಾನಸ ಸರೋವರಕ್ಕೆ ಭೇಟಿ ನೀಡುವ ಈ ಯಾತ್ರೆಯನ್ನು ಏಕಾಏಕಿ ಸ್ಥಗಿತಗೊಳಿಸಲಾಗಿತ್ತು. ಅಲ್ಲದೇ ಗಲ್ವಾನ್ ಘರ್ಷಣೆಯ ಬಳಿಕ ಬೀಜಿಂಗ್ ಮತ್ತು ನವದೆಹಲಿ ನಡುವಿನ ಮುನಿಸು ಮತ್ತೆ ಮುಂದುವರಿದಿತ್ತು. ಇದೀಗ ಚೀನಾ ದ್ವಿಪಕ್ಷೀಯ ಒಪ್ಪಂದಗಳು ಬಲಗೊಂಡ ಬೆಲ್ಲನ್ನೇ ಮಹತ್ವದ ಬೆಳವಣಿಗೆ ಕಂದುಬಂದಿದೆ.
ಎರಡೂ ದೇಶಗಳ ನಡುವೆ ನೇರ ವಿಮಾನ ಸೇವೆ ಪುನರಾರಂಭಿಸಲು ಇಂದಿನ ಸಭೆಯು ತಾತ್ವಿಕ ಒಪ್ಪಿಗೆ ನೀಡಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಮತ್ತೊಂದು ಜಾಲ ಪತ್ತೆ – 2ನೇ ಮದ್ವೆ ಮಾಡಿಸಿ ಲಕ್ಷ ಲಕ್ಷ ಹಣಕ್ಕೆ ಮಗು ಮಾರಾಟ ಮಾಡಿದ್ದ ಗ್ಯಾಂಗ್