ದುಬೈ: ಇತ್ತೀಚೆಗೆ ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನ ಸೋಲಿಸಿ ಟೀಂ ಇಂಡಿಯಾ (Team India) 8ನೇ ಬಾರಿಗೆ ಏಷ್ಯಾಕಪ್ (Asia Cup 2023) ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು. ಆದರೂ ಏಕದಿನ ಕ್ರಿಕೆಟ್‌ನಲ್ಲಿ ಪಾಕಿಸ್ತಾನವನ್ನ ಹಿಂದಿಕ್ಕುವಲ್ಲಿ ವಿಫಲವಾಗಿದೆ.
Advertisement
ಭಾರತ ಏಷ್ಯಾಕಪ್ ಗೆದ್ದು ಬೀಗಿದರೂ ಐಸಿಸಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ರ‍್ಯಾಂಕಿಂಗ್‌ನಲ್ಲಿ (ICC ODI Ranking) ಪಾಕಿಸ್ತಾನವೇ (Pakistan) ನಂ.1 ಸ್ಥಾನದಲ್ಲಿದೆ. 27 ಪಂದ್ಯಗಳನ್ನಾಡಿರುವ ಪಾಕಿಸ್ತಾನ 3,102 ಅಂಕಗಳು ಮತ್ತು 115 ಶ್ರೇಯಾಂಕದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, 41 ಪಂದ್ಯಗಳನ್ನಾಡಿರುವ ಭಾರತ 4,701 ಅಂಕಗಳೊಂದಿಗೆ 115 ಶ್ರೇಯಾಂಕ ಹೊಂದಿದ್ದರೂ 2ನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಮೊಹಮ್ಮದ್ ಸಿರಾಜ್ ಟೀಂ ಇಂಡಿಯಾದ ಬೆಂಕಿ ಚೆಂಡು – ಜೈಹೋ ಟೀಂ ಇಂಡಿಯಾ ಎಂದ ಡಿಕೆಶಿ
Advertisement
Advertisement
3,166 ಅಂಕಗಳು ಹಾಗೂ 113 ಶ್ರೇಯಾಂಕ ಪಡೆದಿರುವ ಆಸ್ಟ್ರೇಲಿಯಾ (Australia) (28 ಪಂದ್ಯ), 2,551 ಅಂಕಗಳು ಮತ್ತು 106 ಶ್ರೇಯಾಂಕ ಹೊಂದಿರುವ ದಕ್ಷಿಣ ಆಫ್ರಿಕಾ (24 ಪಂದ್ಯ), 2,942 ಅಂಕಗಳೊಂದಿಗೆ 105 ಶ್ರೇಯಾಂಕ ಹೊಂದಿರುವ ಇಂಗ್ಲೆಂಡ್ (England) ಕ್ರಮವಾಗಿ ಮೂರು, ನಾಲ್ಕು ಮತ್ತು 5ನೇ ಸ್ಥಾನದಲ್ಲಿವೆ. ಆದ್ರೆ ವಿಶ್ವಕಪ್ ಟೂರ್ನಿಗೂ ಮುನ್ನವೇ ಭಾರತಕ್ಕೆ ನಂ.1 ಪಟ್ಟಕ್ಕೇರಲು ಅವಕಾಶವಿದೆ. ಇದನ್ನೂ ಓದಿ: Asia Cup 2023: ಮಳೆಯಲ್ಲೂ ಶ್ರಮಿಸಿದ ಕ್ರೀಡಾಂಗಣ ಸಿಬ್ಬಂದಿಗೆ 42 ಲಕ್ಷ ರೂ. ಬಹುಮಾನ ಘೋಷಿಸಿದ ಜಯ್ ಶಾ
Advertisement
ಹೌದು. ಸೆಪ್ಟೆಂಬರ್ 20 ರಿಂದ 26ರ ವರೆಗೆ ಐರ್ಲೆಂಡ್ ವಿರುದ್ಧ ಇಂಗ್ಲೆಂಡ್ ಹಾಗೂ ಸೆ.21 ರಿಂದ 26ರ ವರೆಗೆ ನ್ಯೂಜಿಲೆಂಡ್ ವಿರುದ್ಧ ಬಾಂಗ್ಲಾದೇಶ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯನ್ನಾಡಲಿದೆ. ಈ ಪಂದ್ಯಗಳು ಟೀಂ ಇಂಡಿಯಾದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದ್ರೆ ಇದೇ ತಿಂಗಳ ಸೆ.22 ರಿಂದ 27ರ ವರೆಗೆ ಭಾರತ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಒಂದು ವೇಳೆ ಮೊದಲ ಪಂದ್ಯದಲ್ಲೇ ಆಸ್ಟ್ರೇಲಿಯಾ ತಂಡವನ್ನ ಸೋಲಿಸಿದ್ರೆ ಅಥವಾ 2-1 ಅಂತರದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದರೂ ಭಾರತ ನಂ.1 ಸ್ಥಾನಕ್ಕೆ ಜಿಗಿಯಲಿದೆ. ಒಂದು ವೇಳೆ ಆಸೀಸ್ ವಿರುದ್ಧ ಸರಣಿ ಸೋತರೆ ಫಲಿತಾಂಶ ಬದಲಾವಣೆಯಾಗುವ ಸಾಧ್ಯತೆಗಳೂ ಇವೆ.
ಬಲಿಷ್ಠ ಬೌಲಿಂಗ್ ಹಾಗೂ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಟೀಂ ಇಂಡಿಯಾ ಈ ಬಾರಿ ಏಷ್ಯಾಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನವನ್ನೇ ತೋರಿದೆ. ಬಾಂಗ್ಲಾದೇಶದ ವಿರುದ್ಧ ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯದಲ್ಲಿ ಸೋತಿದ್ದು ಬಿಟ್ಟರೆ ಉಳಿದೆಲ್ಲ ಪಂದ್ಯಗಳಲ್ಲೂ ಭರ್ಜರಿ ಜಯವನ್ನೇ ಸಾಧಿಸಿದೆ. ಫೈನಲ್‌ನಲ್ಲಿ ಸಿರಾಜ್, ಹಾರ್ದಿಕ್ ಪಾಂಡ್ಯ ಹಾಗೂ ಜಸ್ಪ್ರೀತ್ ಬುಮ್ರಾ ಬೌಲಿಂಗ್ ದಾಳಿಯಿಂದ ಶ್ರೀಲಂಕಾ ತಂಡವನ್ನ ಕೇವಲ 50 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿತ್ತು. 10 ವಿಕೆಟ್‌ಗಳ ಜಯದೊಂದಿಗೆ 8ನೇ ಬಾರಿಗೆ ಏಷ್ಯಾಕಪ್ ಚಾಂಪಿಯನ್ ಪಟ್ಟವನ್ನ ಗೆದ್ದುಕೊಂಡಿತ್ತು.
Web Stories