ನವದೆಹಲಿ: ಫ್ರಾನ್ಸ್‌ನಿಂದ 114 ರಫೇಲ್ (Rafale) ಯುದ್ಧ ವಿಮಾನ ಖರೀದಿ ಡೀಲ್ ಬೆನ್ನಲ್ಲೇ ಭಾರತ (India) ಸರ್ಕಾರ ರಷ್ಯಾದಿಂದ (Russia) ರಕ್ಷಣಾ ಖರೀದಿಗೆ ಸಜ್ಜಾಗಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯ ರಕ್ಷಣಾ ಸ್ವಾಧೀನ ಮಂಡಳಿ (DAC) ರಷ್ಯಾದಿಂದ 10,000 ಕೋಟಿ ರೂ. ಅಂದಾಜು ವೆಚ್ಚದಲ್ಲಿ 288 ಹೆಚ್ಚುವರಿ ಎಸ್-400 (S-400) ನೆಲದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ(Surface-to-Air Missiles ) ಖರೀದಿಸಲು ಅನುಮೋದನೆ ನೀಡಿದೆ. ಸಭೆ 120 ಅಲ್ಪ-ಶ್ರೇಣಿಯ ಕ್ಷಿಪಣಿಗಳು ಮತ್ತು 168 ದೀರ್ಘ-ಶ್ರೇಣಿಯ ಕ್ಷಿಪಣಿ ಖರೀದಿಗೆ ಒಪ್ಪಿಗೆ ಸಿಕ್ಕಿದೆ.
2018 ರಲ್ಲಿ ಭಾರತ ರಷ್ಯಾದೊಂದಿಗೆ 5 ಎಸ್-400 ಟ್ರಯಾಂಫ್ ವಾಯು ರಕ್ಷಣಾ ವ್ಯವಸ್ಥೆ ಖರೀದಿಸಲು 5.43 ಬಿಲಿಯನ್ ಡಾಲರ್ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದದ ಅನ್ವಯ 3 ಈಗಾಗಲೇ ಭಾರತದ ಬತ್ತಳಿಕೆಗೆ ಬಂದಿದ್ದರೆ ಜೂನ್ ಮತ್ತು ನವೆಂಬರ್‌ನಲ್ಲಿ ಇನ್ನೆರಡು ಸೇರ್ಪಡೆಯಾಗಲಿದೆ.
ಎಸ್-400 ವಾಯು ರಕ್ಷಣಾ ವ್ಯವಸ್ಥೆಯನ್ನು ಭಾರತ ಸುದರ್ಶನ ಚಕ್ರ ಎಂದು ಕರೆದಿದೆ. ಇದು 400 ಕಿ.ಮೀ ವ್ಯಾಪ್ತಿಯಲ್ಲಿ ಶತ್ರುಗಳ ಕ್ಷಿಪಣಿ, ಡ್ರೋನ್ ಮತ್ತು ವಿಮಾನಗಳನ್ನು ಪತ್ತೆಹಚ್ಚಿ ನಾಶಪಡಿಸುವ ಸಾಮರ್ಥ್ಯ ಹೊಂದಿದೆ. ಇದನ್ನೂ ಓದಿ: ರಕ್ಷಣಾ ಒಪ್ಪಂದ; ‘5 ಡೆಡ್ಲಿ ವೆಪನ್ಸ್’- ರಷ್ಯಾದ ಶಸ್ತ್ರಾಸ್ತ್ರಗಳು ಭಾರತದ ಮಿಲಿಟರಿ ಶಕ್ತಿಯ ಬೆನ್ನೆಲುಬಾಗಿದ್ದು ಹೇಗೆ?

ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ಎಸ್-400 ಶಕ್ತಿ ಅನಾವರಣಗೊಂಡಿತ್ತು. ಪಾಕ್ ಹಾರಿಸಿದ ಕ್ಷಿಪಣಿಗಳನ್ನು ಆಗಸದಲ್ಲೇ ಎಸ್-400ನಿಂದ ಹಾರಿಸಿದ್ದ ಕ್ಷಿಪಣಿಗಳು ಧ್ವಂಸ ಮಾಡಿತ್ತು.
ಪಾಕ್ ವಿರುದ್ಧದ ಹೋರಾಟದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಕ್ಕೆ ವಾಯುಸೇನೆ ಇನ್ನು 5 ಎಸ್400 ಮತ್ತು ಪ್ಯಾಂಟ್ಸಿರ್ ಅಲ್ಪ-ಶ್ರೇಣಿಯ ವಾಯು ರಕ್ಷಣಾ ವ್ಯವಸ್ಥೆಗೆ ಬೇಡಿಕೆ ಇಟ್ಟಿದೆ.
ಕಾಮಿಕೇಜ್ ಡ್ರೋನ್‌ಗಳನ್ನು ಎದುರಿಸಲು ಪ್ಯಾಂಟ್ಸಿರ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಎಸ್-400 ಮತ್ತು ಪ್ಯಾಂಟ್ಸಿರ್ ವಾಯು ರಕ್ಷಣೆಯನ್ನು ನಿಯೋಜಿಸಿದರೆ ಗಡಿಯಾಚೆಗಿನ ಎಲ್ಲಾ ಬೆದರಿಕೆಗಳನ್ನು ತಟಸ್ಥಗೊಳಿಸಬಹುದಾಗಿದೆ. ಇದನ್ನೂ ಓದಿ: ಪಾಕ್ ಮಿಸೈಲ್‌ಗಳಿಂದ ಭಾರತ ರಕ್ಷಿಸಿದ S-400 ‘ಸುದರ್ಶನ ಚಕ್ರ’- ಏನಿದರ ವಿಶೇಷತೆ?

ಭಾರತವು S-400 ದೀರ್ಘ-ಶ್ರೇಣಿಯ ಕ್ಷಿಪಣಿಯನ್ನು ಬಳಸಿಕೊಂಡು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ್ದಲ್ಲಿದ್ದ Airborne Warning and Control System (AWACS) ಹೊಡೆದು ಹಾಕಿತ್ತು. 314 ಕಿ.ಮೀ ದೂರದಲ್ಲಿ ಜಾಗಕ್ಕೆ ಕ್ಷಿಪಣಿ ದಾಳಿ ಮಾಡಿ AWACS ವಿಮಾನ ಹೊಡೆದು ಹಾಕಿದ್ದು ಪಾಕಿಗೆ ಭಾರೀ ನಷ್ಟವಾಗಿತ್ತು.
ಆಪರೇಷನ್ ಸಿಂಧೂರದಿಂದ ಪೆಟ್ಟು ತಿಂದ ಪಾಕಿಸ್ತಾನ ಈಗ ತನ್ನ ಕಾರ್ಯಾಚರಣೆಯ ವಿಮಾನಗಳನ್ನು ಅಫ್ಘಾನಿಸ್ತಾನ ಮತ್ತು ಇರಾನ್ ಬಳಿಯ ಪಶ್ಚಿಮ ವಲಯದಲ್ಲಿರುವ ವಾಯುನೆಲೆಗಳಿಗೆ ಮರುಸ್ಥಾಪಿಸಿದೆ ಎಂದು ವರದಿಯಾಗಿದೆ.

