ನವದೆಹಲಿ: ಭಾರತ-ಶ್ರೀಲಂಕಾ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಶ್ರೀಲಂಕಾ ಆಟಗಾರರು ಮಾಲಿನ್ಯ ಕಾರಣ ನೀಡಿ ಆಟಕ್ಕೆ ತಡೆ ಮಾಡಿರುವುದು ಅಂತರಾಷ್ಟ್ರೀಯ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಪಂದ್ಯದ ವೇಳೆ ಲಂಕಾ ಆಟಗಾರರು ತೋರಿದ ವರ್ತನೆಗೆ ಟೀಂ ಇಂಡಿಯಾ ನಾಯಕ ತಮ್ಮದೇ ಶೈಲಿಯಲ್ಲಿ ಟಾಂಗ್ ನೀಡಿರುವ ವಿಡಿಯೋ ವೈರಲ್ ಆಗಿದೆ.
ಪಂದ್ಯದ ಎರಡನೇ ದಿನವಾದ ಭಾನುವಾರ ಮಧ್ಯಾಹ್ನದ ವಿರಾಮದ ವೇಳೆ ಮಾಸ್ಕ್ ಧರಿಸಿ ಮೈದಾನಕ್ಕೆ ಬಂದ ಲಂಕಾ ಆಟಗಾರರು ವಾತಾವರಣದಲ್ಲಿ ಹೆಚ್ಚಿನ ವಾಯಮಾಲಿನ್ಯ ಇದ್ದು, ಪಂದ್ಯವನ್ನು ಸ್ಥಗಿತಗೊಳಿಸಲು ಅಂಪೈರ್ ಗೆ ಮನವಿ ಮಾಡಿದ್ದರು. ಈ ವೇಳೆ ದ್ವಿಶತಕ ಸಿಡಿಸಿ ದಾಖಲೆ ಸೃಷ್ಟಿಸಿದ್ದ ಕೊಹ್ಲಿ ಲಂಕಾ ಆಟಗಾರರ ವರ್ತನೆ ಬೇಸರಗೊಂಡರು.
Advertisement
Advertisement
ಅಂಪೈರ್ ಗಳ ನಿರ್ಧಾರದಂತೆ ಪಂದ್ಯ ಮುಂದುವರಿಸಿದರೂ ಪಂದ್ಯದ 123ನೇ ಹಾಗೂ 127ನೇ ಓವರ್‍ನಲ್ಲಿ ಬೌಲಿಂಗ್ ಮಾಡುತ್ತಿದ್ದ ಲಂಕಾ ವೇಗಿಗಳಾದ ಲಹಿರು ಗಮನೆ ಹಾಗೂ ಲಕ್ಮಲ್ ಮೈದಾನದಿಂದ ಹೊರ ನಡೆದರು. ಇದರಿಂದಾಗಿ ಲಂಕಾ ತಂಡದಲ್ಲಿ ಓರ್ವ ಆಟಗಾರನ ಕೊರತೆ ಎದುರಾಯಿತು. ಈ ವೇಳೆ ಪದೇ ಪದೇ ಅಂಪೈರ್ ಬಳಿ ತೆರಳಿದ ಲಂಕಾ ನಾಯಕ ದಿನೇಶ್ ಚಂಡಿಮಾಲ್ ಪಂದ್ಯಕ್ಕೆ ಅಡ್ಡಿ ಪಡಿಸಿ ಚರ್ಚೆ ನಡೆಸಿದರು. ಅಲ್ಲದೇ ಎರಡು ತಂಡದ ಕೋಚ್ ಗಳು ಆನ್ ಫೀಲ್ಡ್‍ನಲ್ಲಿದ್ದ ಆಂಪೈರ್ ಗಳಾದ ನಿಗೆಲ್ ಲಾಂಗ್ ಮತ್ತು ಜೋಯಲ್ ವಿಲ್ಸನ್ಸ್ ಅವರ ಬಳಿ ಬಂದು ಸಮಾಲೋಚನೆ ನಡೆಸಿದರು. ನಂತರ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಅವರು ಮೈದಾನದಿಂದ ಹೋರ ನಡೆಯುತ್ತಿದಂತೆ ನಾಯಕ ವಿರಾಟ್ ಕೊಹ್ಲಿ 7 ವಿಕೆಟ್ ನಷ್ಟಕ್ಕೆ 536 ರನ್ ಗಳಿಸಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ನಿರ್ಧಾರ ಪ್ರಕಟಿಸಿದರು. ಇದನ್ನೂ ಓದಿ: ಡಬಲ್ ಸೆಂಚುರಿ ಮೆಷಿನ್ ಕೊಹ್ಲಿಯಿಂದ ವಿಶ್ವದಾಖಲೆ!
Advertisement
Advertisement
ಟೀಂ ಇಂಡಿಯಾ ಇನ್ನಿಂಗ್ಸ್ ಡಿಕ್ಲೇರ್ ನಿರ್ಧಾರ ಪ್ರಕಟಿಸಿದ ನಂತರ ಮೈದಾನಕ್ಕೆ ಇಳಿದ ಕೊಹ್ಲಿ ಬಾಯ್ಸ್ ಮಾಸ್ಕ್ ಧರಿಸದೇ ಬೌಲಿಂಗ್ ಮಾಡಿ ಆಟ ಮುಂದುವರೆಸಿದರು. 140 ವರ್ಷಗಳ ಕ್ರೀಡಾ ಇತಿಹಾಸದಲ್ಲಿ ಇಂತಹ ಘಟನೆ ಇದೇ ಮೊದಲ ಬಾರಿ ನಡೆದಿದ್ದು, ಲಂಕಾ ಆಟಗಾರರ ವರ್ತನೆ ಹಲವು ಸಂಶಯಗಳಿಗೆ ಕಾರಣವಾಗಿದೆ. ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ಹಿನ್ನೆಲೆಯಲ್ಲಿ ಲಂಕಾ ಆಟಗಾರರು ಪೆವಿಲಿಯನ್ ಹೋಗುತ್ತಿದ್ದಾಗ ಸ್ಟೇಡಿಯಂನಲ್ಲಿದ್ದ ಪ್ರೇಕ್ಷಕರು “ಲೂಸರ್ಸ್, ಲೂಸರ್ಸ್” ಎಂದು ಕರೆದು ಚೇಡಿಸುತ್ತಿದ್ದರು.
ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯ ರೋಚಕ ಡ್ರಾ ಗೊಂಡರೆ, ನಾಗ್ಪುರದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಭಾರತ ದಾಖಲೆಯ ಜಯ ಗಳಿಸುವ ಮೂಲಕ ಸರಣಿಯಲ್ಲಿ 1-0 ಅಂತರದ ಮುನ್ನಡೇ ಸಾಧಿಸಿದ್ದು, ಮೂರನೇ ಪಂದ್ಯದಲ್ಲಿ ಗೆಲುವು ಪಡೆಯುವ ಮೂಲಕ ಸರಣಿ ಜಯಿಸುವ ಗುರಿ ಹೊಂದಿದೆ.
https://twitter.com/Im_Virat_Kohli/status/937233820205461504
Yesterday was nothing but drama by SriLankan team to defame Delhi, they knew they are on the way to a big loss: Rajan Thakur, Spectator at Kotla ground #INDvSL pic.twitter.com/wK06Q8nIt7
— ANI (@ANI) December 4, 2017