ವೆಲ್ಲಿಂಗ್ಟನ್: ಭಾರತ (India) ಹಾಗೂ ನ್ಯೂಜಿಲೆಂಡ್ (New Zealand) ನಡುವಿನ ಮೂರನೇ ಟಿ20 ಪಂದ್ಯದಿಂದ ಕೀವಿಸ್ ನಾಯಕ ಕೇನ್ ವಿಲಿಯಮ್ಸನ್ (Kane Williamson) ಹೊರನಡೆದಿದ್ದಾರೆ. ನಾಯಕನ ಅನುಪಸ್ಥಿತಿಯಲ್ಲಿ ಕಳೆದ ಪಂದ್ಯದ ಹ್ಯಾಟ್ರಿಕ್ ವೀರ ಟಿಮ್ ಸೌಥಿಗೆ (Tim Southee) ನಾಯಕತ್ವದ ಪಟ್ಟ ಕಟ್ಟಲಾಗಿದೆ.
Advertisement
ವಿಲಿಯಮ್ಸನ್ ಮೆಡಿಕಲ್ ಚೆಕಪ್‌ಗೆ ಒಳಗಾಗುವ ಕಾರಣ ಮೂರನೇ ಟಿ20 ಪಂದ್ಯ ಆಡುತ್ತಿಲ್ಲ. ಅವರ ಬದಲಿಗೆ ಟಿಮ್ ಸೌಥಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ನ್ಯೂಜಿಲೆಂಡ್ ಕೋಚ್ ಗ್ಯಾರಿ ಸ್ಟೇಡ್ ತಿಳಿಸಿದ್ದಾರೆ. ಎರಡನೇ ಟಿ20 ಪಂದ್ಯದಲ್ಲಿ ಟಿಮ್ ಸೌಥಿ ಕೊನೆಯ ಓವರ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದರು. ಇದನ್ನೂ ಓದಿ: ಶತಕ ಸಿಡಿಸಿ ಮೆರೆದ ಸೂರ್ಯ – ಕೀವಿಸ್ ಕಿವಿ ಹಿಂಡಿದ ಭಾರತ
Advertisement
Advertisement
ಟೀಂ ಇಂಡಿಯಾ ವಿರುದ್ಧ ನ್ಯೂಜಿಲೆಂಡ್ ತವರಿನಲ್ಲಿ ಮೂರು ಟಿ20 ಪಂದ್ಯಗಳ ಸರಣಿ ಆಡುತ್ತಿದೆ. ಮೊದಲ ಪಂದ್ಯ ಮಳೆಯಿಂದ ರದ್ದಾದರೆ, ಎರಡನೇ ಪಂದ್ಯದಲ್ಲಿ ಭಾರತ 65 ರನ್‍ಗಳ ಭರ್ಜರಿ ಜಯ ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಇದನ್ನೂ ಓದಿ: ಸಿಕ್ಸರ್ ವೀರ ಸೂರ್ಯ Vs ಎಬಿಡಿ – ಇಬ್ಬರಲ್ಲಿ ಯಾರು ಬೆಸ್ಟ್? – ಟ್ವಿಟ್ಟರ್‌ನಲ್ಲಿ ಟ್ರೆಂಡ್
Advertisement
ಕೊನೆಯ ಟಿ20 ಪಂದ್ಯದಿಂದ ಇದೀಗ ಕೇನ್ ವಿಲಿಯಮ್ಸನ್ ಹೊರಗುಳಿದಿದ್ದು, ಸರಣಿಯನ್ನು ಸಮಬಲಗೊಳಿಸಲು ನ್ಯೂಜಿಲೆಂಡ್ ತಂಡ ಹೋರಾಡಬೇಕಾಗಿದೆ. ಇತ್ತ ಭಾರತ ತಂಡ ನಾಯಕನ ಅನುಪಸ್ಥಿತಿಯ ಲಾಭವೆತ್ತಿ ಸರಣಿ ಗೆಲ್ಲುವ ತವಕದಲ್ಲಿದೆ.