ನಾಗ್ಪುರ: ಭಾರತ ಹಾಗೂ ಆಸ್ಟ್ರೇಲಿಯಾ (IND vs AUS) ನಡುವೆ ನಿನ್ನೆ ನಡೆದ ಎರಡನೇ ಟಿ20 (T20) ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ (Jasprit Bumrah) ಕಣಕ್ಕಿಳಿದಿದ್ದರು. ಈ ಪಂದ್ಯದಲ್ಲಿ ಬುಮ್ರಾ ಎಸೆದ ಎರಡು ಅದ್ಭುತ ಯಾರ್ಕರ್‌ಗೆ (Yorker) ಎದುರಾಳಿ ತಂಡದ ಆಟಗಾರರೇ ಶಬ್ಬಾಸ್‍ಗಿರಿ ನೀಡಿ ಬೆರಗಾಗಿದ್ದಾರೆ.
Advertisement
ಗಾಯಾಳುವಾಗಿ ತಂಡದಿಂದ ಹೊರಗುಳಿದಿದ್ದ ಬುಮ್ರಾ ಮತ್ತೆ ಕಂಬ್ಯಾಕ್ ಆಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಕಣಕ್ಕಳಿದ ಬುಮ್ರಾ 4ನೇ ಓವರ್‌ನ 5ನೇ ಎಸೆತದಲ್ಲಿ ಆಸ್ಟ್ರೇಲಿಯಾ ನಾಯಕ ಆರನ್ ಫಿಂಚ್ (Aaron Finch) ಕ್ಲೀನ್ ಬೌಲ್ಡ್ ಆದರು. ಇದು ಯಾರ್ಕರ್ ಎಸೆತವಾಗಿತ್ತು. ಇದನ್ನು ಕಂಡ ಫಿಂಚ್ ಸ್ವತಹಃ ಬುಮ್ರಾಗೆ ಬ್ಯಾಟ್ ತಟ್ಟಿ ಶಬ್ಬಾಸ್‍ಗಿರಿ ನೀಡಿದರು. ಇದನ್ನೂ ಓದಿ: ನನ್ನ ಸ್ಫೋಟಕ ಬ್ಯಾಟಿಂಗ್ ಕಂಡು ನಾನೇ ಶಾಕ್ – ಪಂದ್ಯ ಗೆದ್ದರೂ ಹೀಗೇಕೆ ಅಂದ್ರು ಹಿಟ್‌ಮ್ಯಾನ್?
Advertisement
Advertisement
ಆ ಬಳಿಕ ಬುಮ್ರಾ 6ನೇ ಓವರ್‌ನ 2ನೇ ಎಸೆತವನ್ನೂ ಯಾರ್ಕರ್ ಎಸೆದರು. ಈ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಸ್ಮಿತ್ (Steven Smith) ಆ ಎಸೆತವನ್ನು ಎದುರಿಸಲಾಗದೆ ನಿಯಂತ್ರಣ ಕಳೆದುಕೊಂಡು ನೆಲಕ್ಕುರುಳಿದರು. ಬಳಿಕ ಎದ್ದು ಬೆರಗು ಮೂಡಿಸಿದ ಆ ಎಸೆತವನ್ನು ತಮ್ಮ ಮುಖಭಾವದಲ್ಲಿ ತೋರ್ಪಡಿಸಿದರು. ಇದನ್ನೂ ಓದಿ: ಧೋನಿ ಆಸೆಯಂತೆ ನಡೆಯಲಿದೆ ನಿವೃತ್ತಿ ಪಂದ್ಯ – ಚೆನ್ನೈನಲ್ಲಿ ಐಪಿಎಲ್‍ಗೆ ಗುಡ್ ಬೈ ಹೇಳುವುದು ಖಚಿತ
Advertisement
Jasprit Bumrah's comeback wicket – What a ball, what a bowler, best in the world.pic.twitter.com/QHO5MGuAkJ
— CricketMAN2 (@ImTanujSingh) September 23, 2022
ಪಂದ್ಯದಲ್ಲಿ ಬುಮ್ರಾ 2 ಓವರ್ ಎಸೆದು 23 ರನ್ ನೀಡಿ 1 ವಿಕೆಟ್ ಪಡೆದರು. ಮಳೆಯಿಂದಾಗಿ 8 ಓವರ್‌ಗೆ ಇಳಿಕೆ ಕಂಡಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 91 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ 7.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 92 ಸಿಡಿಸಿ ಜಯ ಸಾಧಿಸಿತು. ರೋಹಿತ್ ಶರ್ಮಾ ಭಾರತದ ಜಯಕ್ಕಾಗಿ ಕೆಚ್ಚೆದೆಯ ಹೋರಾಟ ನಡೆಸಿ 46 ರನ್ (20 ಎಸೆತ, 4 ಬೌಂಡರಿ, 4 ಸಿಕ್ಸ್) ಚಚ್ಚಿ ಮಿಂಚಿದರು. ಇದನ್ನೂ ಓದಿ: ರೋಹಿತ್ ನಾಯಕನ ಆಟ – ಭಾರತಕ್ಕೆ ಜಯ, ಸರಣಿ ಸಮಬಲ
Live Tv
[brid partner=56869869 player=32851 video=960834 autoplay=true]