ಕ್ಯಾನ್ಬೆರಾ: ಟಿ20 ವಿಶ್ವಕಪ್‌ಗೂ (T20 WorldCup) ಮುನ್ನ ಸೋಮವಾರ ಭಾರತ (Team India) ಮತ್ತು ಆಸ್ಟ್ರೇಲಿಯಾ (Australia) ಅಭ್ಯಾಸ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 6 ರನ್‌ಗಳ ರೋಚಕ ಜಯ ಸಾಧಿಸಿತು.
Advertisement
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಮ್ಯಾಜಿಕ್ ಫೀಲ್ಡಿಂಗ್, ಮೊಹಮ್ಮದ್ ಶಮಿಯ ಮಾರಕ ಬೌಲಿಂಗ್ ದಾಳಿ ಹಾಗೂ ಸೂರ್ಯಕುಮಾರ್ ಯಾದವ್ (Suryakumar Yadav) ಹಾಗೂ ಕೆ.ಎಲ್ ರಾಹುಲ್‌ರ (KL Rahul) ಭರ್ಜರಿ ಬ್ಯಾಂಟಿಂಗ್ ಪ್ರದರ್ಶನ ಟೀಂ ಇಂಡಿಯಾ (Team India) ಗೆಲುವಿಗೆ ಕಾರಣವಾಯಿತು. ಆದರೆ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ (Mitchell Starc) ಅವರು ಎಸೆದ ಬಾಲ್ ಸೂರ್ಯಕುಮಾರ್ ಯಾದವ್ ಅವರ ಹೆಲ್ಮೆಟ್‌ಗೆ ತಗುಲಿ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಇದನ್ನೂ ಓದಿ: ಡೇಟಿಂಗ್ ಬಗ್ಗೆ ಯುವತಿಗೆ ಅಡ್ವೈಸ್ ಕೊಟ್ಟ ಜೋ ಬೈಡೆನ್ – ವೀಡಿಯೋ ವೈರಲ್
Advertisement
Advertisement
ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅದ್ಭುತ ಆಟ ಪ್ರದರ್ಶಿಸಿದರು. 33 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡಂತೆ 50 ರನ್ ಗಳಿಸಿದರು. ಇದನ್ನೂ ಓದಿ: ದಾದಾ ಪರ ದೀದಿ ಬ್ಯಾಟಿಂಗ್ – ICC ಚುನಾವಣೆಗೆ ಅವಕಾಶ ಕೊಡುವಂತೆ ಮೋದಿಗೆ ಪತ್ರ
Advertisement
ಸೂರ್ಯಕುಮಾರ್ ಯಾದವ್ ಯಾವಾಗಲೂ ವಿಕೆಟ್ ಹಿಂದಿನಿಂದ ರನ್ ಗಳಿಸುವುದರಲ್ಲಿ ಫೇಮಸ್. ಹಾಗೆಯೇ ಇನ್ನಿಂಗ್ಸ್‌ನ 19ನೇ ಓವರ್‌ನಲ್ಲಿ, ಅವರು ಮಿಚೆಲ್ ಸ್ಟಾರ್ಕ್ ಅವರ 5ನೇ ಎಸೆತವನ್ನು ಬೌಂಡರಿಗೆ ಅಟ್ಟುವ ಪ್ರಯತ್ನ ಮಾಡಿದರು. ಈ ವೇಳೆ ಚೆಂಡು ನೇರವಾಗಿ ಅವರ ಹೆಲ್ಮೆಟ್‌ಗೆ ಬಿದ್ದಿತು. ಹೀಗಾಗಿ ಸ್ವಲ್ಪ ಸಮಯದವರೆಗೆ ಪಂದ್ಯವನ್ನು ನಿಲ್ಲಿಸಲಾಯಿತು. ಆದರೆ ಸೂರ್ಯಕುಮಾರ್ ಯಾದವ್ ಗಾಯದಿಂದ ಪಾರಾಗಿದ್ದಾರೆ. ಇದಾದ ಬಳಿಕ ವೈದ್ಯಕೀಯ ಸಿಬ್ಬಂದಿ ಮೈದಾನಕ್ಕೆ ಬಂದು ತಪಾಸಣೆ ನಡೆಸಿದ ಬಳಿಕ ಮತ್ತೆ ಇನ್ನಿಂಗ್ಸ್ ಮುಂದುವರಿಯಿತು.