ಬೆಂಗಳೂರು: ನಗರದಲ್ಲಿಯ ರೆಸ್ಟೋರೆಂಟ್‍ನಲ್ಲಿ ಕುಡಿಯುವ ನೀರಿನ ಬೆಲೆ ಪೆಟ್ರೋಲ್‍ಗಿಂತಲೂ ಹೆಚ್ಚಿದೆ. ಈ ರೆಸ್ಟೋರೆಂಟ್‍ನಲ್ಲಿ 1 ಲೀಟರ್ ಕುಡಿಯುವ ನೀರಿಗೆ ಬರೋಬ್ಬರಿ 99 ರೂ. ಪಡೆಯಲಾಗುತ್ತದೆ.
ಬೆಂಗಳೂರಿನ ಸೆಂಟ್ ಮಾರ್ಕ್ಸ್ ರೋಡ್‍ನಲ್ಲಿರೋ ದಿ ಓಪನ್ ಬಾಕ್ಸ್ ರೆಸ್ಟೋರೆಂಟ್‍ನಲ್ಲಿ 1 ಲೀಟರ್ ಕುಡಿಯುವ ನೀರಿಗೆ ಜಿಎಸ್‍ಟಿ ಸರ್ವಿಸ್ ಟ್ಯಾಕ್ಸ್ ಸೇರಿಸಿ ಬರೋಬ್ಬರಿ 116 ರೂಪಾಯಿ ಪಡೆಯಲಾಗುತ್ತಿದೆ. ರೆಸ್ಟೋರಂಟ್‍ಗೆ ಊಟ ಮಾಡಲು ಹೋಗಿದ್ದ ಗ್ರಾಹಕ ತೇಜಸ್ ಅನ್ನೋರು ವಾಟರ್ ಬಾಟಲ್ ಆರ್ಡರ್ ಮಾಡಿದ್ರು. ಆದ್ರೆ ರೆಸ್ಟೋರೆಂಟ್‍ನೋರು 19 ರೂಪಾಯಿಯ ಬಾಟಲ್‍ಗೆ 99 ರೂಪಾಯಿ ಬಿಲ್ ಹಾಕಿದ್ದಾರೆ.
Advertisement
Advertisement
Advertisement
ಇದರಿಂದ ಅಚ್ಚರಿಗೊಂಡ ತೇಜಸ್ ಒಂದು ಬಾಟಲ್ 99 ರೂ. ಬೆಲೆ ಹಾಕೋದು ಎಂದು ರೆಸ್ಟೋರೆಂಟ್ ಸಿಬ್ಬಂದಿಯನ್ನ ಪ್ರಶ್ನಿಸಿದ್ದಾರೆ. ಅದಕ್ಕೆ ಅವರು ಮದ್ಯ ಕೂಡಾ ಎಂಆರ್‍ಪಿಗಿಂತ ಜಾಸ್ತಿ ರೇಟ್‍ಗೆ ಕೊಡ್ತೀವಲ್ಲಾ ಅದೇ ರೀತಿ ಇದೂ ಕೂಡಾ ರೇಟ್ ಜಾಸ್ತಿ ಹಾಕಿದ್ದೇವೆ. ನಾವು ಎಲ್ಲವನ್ನೂ ಲೀಗಲ್ ಆಗಿಯೇ ಮಾಡುತ್ತಿದ್ದೇವೆ. ನಮ್ಮ ಬಳಿ ಕೋರ್ಟ್ ಆರ್ಡರ್ ಕೂಡಾ ಇದೆ ಅಂತ ಅವಾಜ್ ಹಾಕಿದ್ದಾರೆ.
Advertisement
ತೇಜಸ್ ಇದೀಗ ಗ್ರಾಹಕರ ನ್ಯಾಯಾಲಯದಲ್ಲಿ ದೂರು ನೀಡಲು ಮುಂದಾಗಿದ್ದಾರೆ.