ಇಸ್ಲಾಮಾಬಾದ್: ಪಾಕಿಸ್ತಾನದ(Pakistan) ಮಾಜಿ ಪ್ರಧಾನಿ, ಪಾಕಿಸ್ತಾನ್ ತೆಹ್ರಿಕ್-ಎ-ಇನ್ಸಾಫ್(PTI) ಮುಖ್ಯಸ್ಥ ಇಮ್ರಾನ್ ಖಾನ್(Imran Khan) ಅವರು ಶನಿವಾರ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ(Airplane) ತಾಂತ್ರಿಕ ದೋಷ ಉಂಟಾಗಿ ತುರ್ತು ಭೂಸ್ಪರ್ಶ(Emergency Landing) ಮಾಡಿರುವುದಾಗಿ ವರದಿಯಾಗಿದೆ.
ಇಮ್ರಾನ್ ಖಾನ್ ಇದ್ದ ವಿಮಾನ ಟೇಕ್ ಆಫ್ ಆದ ತಕ್ಷಣವೇ ತಾಂತ್ರಿಕ ದೋಷವನ್ನು ಅನುಭವಿಸಿ ಇಸ್ಲಾಮಾಬಾದ್‌ಗೆ ವಾಪಸ್ ಆಗಿದೆ. ಸದ್ಯ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಪಿಟಿಐ ನಾಯಕ ಅಜರ್ ಮಶ್ವಾನಿ ತಿಳಿಸಿದ್ದಾರೆ. ಇದನ್ನೂ ಓದಿ: ಲಕ್ನೋ ಅಗ್ನಿ ದುರಂತ – ನಿರ್ಲಕ್ಷ್ಯವಹಿಸಿದ 15 ಅಧಿಕಾರಿಗಳನ್ನು ಅಮಾನತುಗೊಳಿಸಿದ ಯೋಗಿ
Advertisement
Advertisement
ಇಮ್ರಾನ್ ಖಾನ್ ಅವರು ಪಾಕಿಸ್ತಾನದ ಪಂಜಾಬ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲು ವಿಮಾನದಲ್ಲಿ ಹೊರಟಿದ್ದರು. ಆದರೆ ವಿಮಾನ ಹಾರಾಟ ಪ್ರಾರಂಭಿಸುತ್ತಿದ್ದಂತೆಯೇ ಅದರಲ್ಲಿ ಕೆಲವು ತಾಂತ್ರಿಕ ದೋಷ ಕಂಡುಬಂದಿದೆ ಎನ್ನಲಾಗಿದೆ. ತಕ್ಷಣವೇ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ್ದರಿಂದ ಅದರಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಇಂಡೋನೇಷ್ಯಾದಲ್ಲಿ 7.6 ತೀವ್ರತೆಯ ಭೂಕಂಪ- ಸುನಾಮಿ ಎಚ್ಚರಿಕೆ
Advertisement
ವಿಮಾನ ತುರ್ತು ಭೂಸ್ಪರ್ಶ ಮಾಡಿದ ಬಳಿಕ ಇಮ್ರಾನ್ ಖಾನ್ ಅವರು ರಸ್ತೆಯ ಮೂಲಕ ಪಂಜಾಬ್‌ಗೆ ತೆರಳಿದರು ಎಂದು ಮಶ್ವಾನಿ ಹೇಳಿದ್ದಾರೆ. ಈ ತಿಂಗಳ ಆರಂಭದಲ್ಲಿ ಇಸ್ಲಾಮಾಬಾದ್‌ನಲ್ಲಿ ಇಮ್ರಾನ್ ಖಾನ್ ಅವರ ಭದ್ರತಾ ಬೆಂಗಾವಲು ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದ್ದಾಗಿ ವರದಿಯಾಗಿತ್ತು. ಸದ್ಯ ಘಟನೆಯಲ್ಲಿ ಅವರಿಗೆ ಯಾವುದೇ ಗಾಯಗಳಾಗಿರಲಿಲ್ಲ.