ನವದೆಹಲಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈ ಹಿಂದೆ ಸಚಿವರಾಗಿದ್ದ ವೇಳೆ ಅಧಿಕಾರದ ಪ್ರಭಾವ ಬಳಿಕ ಲೆಕ್ಕಕ್ಕೆ ಸಿಗದಷ್ಟು ಹಣವನ್ನು ಬೆಂಗಳೂರಿನಿಂದ ದೆಹಲಿಗೆ ವರ್ಗಾವಣೆ ಮಾಡಿದ್ದಾರೆ ಎಂದು ಇಡಿ ಇತ್ತೀಚೆಗೆ ಕೋರ್ಟ್‍ಗೆ ಸಲ್ಲಿಸಿದ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಿದೆ.
ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್ ವಿರುದ್ಧ ಇಡಿ ಅಧಿಕಾರಿಗಳು ದೆಹಲಿಯಲ್ಲಿರುವ ವಿಶೇಷ ನ್ಯಾಯಾಲಯಕ್ಕೆ ಜಾರ್ಜ್‍ಶೀಟ್ ಸಲ್ಲಿಕೆ ಮಾಡಿದ್ದರು. ಈ ದೋಷಾರೋಪ ಪಟ್ಟಿಯ ಕೆಲವು ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ಅಕ್ರಮ ಹಣ ವರ್ಗಾವಣೆಗೆ ಡಿ.ಕೆ. ಶಿವಕುಮಾರ್ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಕ್ಯಾಬಿನೆಟ್ ಸಚಿವರಾಗಿದ್ದ ವೇಳೆ ಪ್ರಭಾವ ಬಳಸಿ ದೊಡ್ಡ ಪ್ರಮಾಣದ ಹಣ ವರ್ಗಾವಣೆ ಮಾಡಿದ್ದಾರೆ. ಲೆಕ್ಕಕ್ಕೆ ಸಿಗದಷ್ಟು ಹಣ ಬೆಂಗಳೂರಿನಿಂದ ದೆಹಲಿಗೆ ವರ್ಗಾವಣೆಯಾಗಿದೆ. ಇತರೆ ಸಹ ಆರೋಪಿಗಳ ಜೊತೆ ಸೇರಿ ಕಳಂಕಿತ ಹಣವನ್ನು ವರ್ಗಾವಣೆ ಮಾಡಲಾಗಿದೆ ಎಂದು ಉಲ್ಲೇಖಿಸಿದೆ. ಇದನ್ನೂ ಓದಿ: ಸುವರ್ಣಸೌಧದ ಎದುರು ಶಾವಿಗೆ ಒಣಹಾಕಿದ ಪ್ರಕರಣ – ಗುತ್ತಿಗೆದಾರನಿಗೆ ನೋಟಿಸ್
Advertisement
Advertisement
ದಾಳಿಯ ವೇಳೆ ಆರೋಪಿಗಳ ಮನೆಯಲ್ಲಿ 8.59 ಕೋಟಿ ಹಣ ಸಿಕ್ಕಿದ್ದು, ಇದಕ್ಕೆ ಯಾವುದೇ ಲೆಕ್ಕಪತ್ರ ಮೂಲಗಳಿಲ್ಲ, ಇದು ಸಣ್ಣ ಪ್ರಮಾಣದ ಹಣವಷ್ಟೇ, ಇನ್ನು ದೊಡ್ಡ ಪ್ರಮಾಣದ ಹಣ ಲಭ್ಯವಾಗಿಲ್ಲ, ಇತರೆ ಆರೋಪಿಗಳ ಮನೆಯಲ್ಲೂ ಲೆಕ್ಕಕ್ಕೆ ಸಿಗದ ಹಣ ಲಭ್ಯವಾಗಿದೆ. ಆರೋಪಿಗಳ ವ್ಯವಸ್ಥಿತ ಸಂಚು ರೂಪಿಸಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎಂದು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಸೋನಿಯಾ, ರಾಹುಲ್ ಗಾಂಧಿಗೆ ಇಡಿ ಸಮನ್ಸ್
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೋರ್ಟ್ ಸಮನ್ಸ್ ಜಾರಿ ಮಾಡಿದ್ದು, ಜುಲೈ 1ರಂದು ಡಿ.ಕೆ. ಶಿವಕುಮಾರ್, ಸಚಿನ್ ನಾರಾಯಣ್, ಸುನೀಲ್ ಕುಮಾರ್ ಶರ್ಮಾ, ರಾಜೇಂದ್ರ ಮತ್ತು ಆಂಜನೇಯಗೆ ವಿಚಾರಣೆ ಹಾಜರಾಗಲು ವಿಶೇಷ ನ್ಯಾಯಾಲಯ ಸೂಚಿಸಿದೆ.