ಕೋಲಾರ: ಬಡವರ ಹಸಿವು ನೀಗಿಸಲು ಸರ್ಕಾರ ಕೊಡುತ್ತಿರುವ ಅನ್ನಭಾಗ್ಯ ಯೋಜನೆಯ ಅಕ್ಕಿ ಜಿಲ್ಲೆಯ ಬಂಗಾರಪೇಟೆಯ ಕಾಳಸಂತೆಯಲ್ಲಿ ರಾಜಾರೋಷವಾಗಿ ಮಾರಾಟವಾಗುತ್ತಿದೆ.
ಮಾರಾಟವಾದ ಅಕ್ಕಿಯು ಅಕ್ರಮವಾಗಿ 15ಕ್ಕೂ ಹೆಚ್ಚು ರೈಸ್ ಮಿಲ್ಗಳನ್ನು ಸೇರುತ್ತಿವೆ. ಹಲವು ಬಾರಿ ದಾಳಿ ನಡೆದರೂ ದಂಧೆ ಮಾತ್ರ ನಿಂತಿಲ್ಲ. ಈ ಹಿಂದೆ ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ 2017ರಲ್ಲಿ ಟನ್ಗಟ್ಟಲೆ ಪಡಿತರ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಸೀಜ್ ಮಾಡಿದ್ದರು. ಇದನ್ನೂ ಓದಿ: ಅಮೆರಿಕಾದ ಶಾಲೆಯಲ್ಲಿ ಶೂಟೌಟ್-18 ವಿದ್ಯಾರ್ಥಿಗಳು ಸೇರಿ 21 ಮಂದಿ ದುರ್ಮರಣ
Advertisement
Advertisement
ಕಳೆದ ವರ್ಷ ಪಿಆರ್ಎಸ್ ಆಗ್ರೋಟೆಕ್ ರೈಸ್ ಮಿಲ್ ಮೇಲೆ ದಾಳಿ ಮಾಡಿ, ಸುಮಾರು 8,497 ಕ್ವಿಂಟಾಲ್ನಷ್ಟು ಅಂದರೆ 1 ಕೋಟಿ 7 ಲಕ್ಷ ಮೌಲ್ಯದ ಅಕ್ರಮ ಪಡಿತರ ಅಕ್ಕಿಯನ್ನು ಹರಾಜು ಮಾಡಿದ್ದರು. ಕೋರ್ಟ್ ಆದೇಶದಂತೆ ಕೆಲ ರೈಸ್ಮಿಲ್ಗಳಿಗೆ ಬೀಗ ಹಾಕಲಾಗಿದೆ. ಆದರೂ ಕೆಲ ಮಿಲ್ ಮಾಲೀಕರು ಭಯಪಡದೇ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಖರೀದಿ ಮಾಡುತ್ತಿದ್ದಾರೆ. ಇದನ್ನೂ ಓದಿ: ಮಂಗಳೂರು ದರ್ಗಾ ವಿವಾದ – ಇಂದು ತಾಂಬೂಲ ಪ್ರಶ್ನೆ, ಪೊಲೀಸ್ ಬಂದೋಬಸ್ತ್
Advertisement
Advertisement
ಬಂಗಾರಪೇಟೆ ತಾಲೂಕಿನಲ್ಲಿ 14 ರೈಸ್ ಮಿಲ್ಗಳಿದ್ದು, 3 ಮಿಲ್ಗಳು ಸ್ಟಾಪ್ ಆಗಿವೆ. ಉಳಿದಂತೆ ಬಹುತೇಕ ಮಿಲ್ಗಳಲ್ಲಿ ಸರ್ಕಾರ ಬಡವರಿಗೆ ಕೊಡುವ ಅಕ್ಕಿಯೇ ಸಿಗುತ್ತಿದೆ. ಬಂಗಾರಪೇಟೆ ತಹಶೀಲ್ದಾರ್ ದಯಾನಂದ್ ಮಾತ್ರ ಎಂದಿನಿಂತೆ ಕ್ರಮ ತೆಗೆದುಕೊಳ್ಳುತ್ತೇವೆ. ಕಡಿವಾಣ ಹಾಕ್ತೀವಿ ಎಂದು ಆಶ್ವಾಸನೆ ನೀಡುತ್ತಲೇ ಬಂದಿದ್ದಾರೆ.