ಮಂಗಳೂರು: ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆಹಚ್ಚಿ ಗಡಿಪಾರು ಮಾಡಲು ವ್ಯವಸ್ಥೆ ಮಾಡಲಾಗಿದೆ ಅಂತಾ ಉಪಮುಖ್ಯಮಂತ್ರಿ ಡಾ. ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿ ಸದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಗ್ಲಾ ದೇಶಿಗರು ಅಕ್ರಮವಾಗಿ ರಾಜ್ಯದಲ್ಲಿ ನೆಲೆಸಿರುವ ಮಾಹಿತಿಯಿದೆ. ಇದಲ್ಲದೆ, ಇತರೇ ದೇಶದ ನಿವಾಸಿಗಳೂ ರಾಜ್ಯದಲ್ಲಿ ನೆಲೆಸಿದ್ದರೆ ಅವರನ್ನು ಪತ್ತೆ ಮಾಡಿ ಸಂಬಂಧಿತ ದಾಖಲೆಗಳನ್ನು ಹೊಂದಿಲ್ಲದಿದ್ದರೆ ತಕ್ಷಣವೇ ಏರ್ ಟಿಕೆಟ್ ಮಾಡಿ ಆಯಾ ದೇಶಕ್ಕೆ ಕಳಿಸ್ತಿದ್ದೇವೆ. ಈ ಬಗ್ಗೆ ಅಲ್ಲಿನ ರಾಯಭಾರ ಕಚೇರಿಗಳಿಗೂ ತಿಳಿಸಲಾಗಿದೆ ಅಂತಾ ಹೇಳಿದ್ದಾರೆ. ಇದನ್ನೂ ಓದಿ: ಹಿಂದೂಗಳ ಕಡೆಗಣನೆಯೇ ಕಾಂಗ್ರೆಸ್ ಸೋಲಿಗೆ ಕಾರಣವೆಂದ ಜೆಡಿಎಸ್- ಸಚಿವ ಖಾದರ್ ತಿರುಗೇಟು
Advertisement
Advertisement
ಇದೇ ವೇಳೆ, ಹಿಂದೂಗಳ ಕಡೆಗಣಿಸಿದ್ದರಿಂದ ಕಾಂಗ್ರೆಸ್ಸಿಗೆ ಸೋಲಾಗಿದೆ ಎಂಬ ಜೆಡಿಎಸ್ ಮುಖಂಡ ಬೋಜೇಗೌಡರ ಮಾತಿಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಅದು ಅವರ ಅಭಿಪ್ರಾಯ ಇದ್ದಿರಬಹುದು. ನಮ್ಮ ಪಕ್ಷದ ವತಿಯಿಂದ ಮಾಡಿರುವ ಅನಾಲಿಸಿಸ್ ಬೇರೆಯದ್ದೇ ಇದೆ. ಇನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳೋದಿಲ್ಲ. ಈ ಬಗ್ಗೆ ಈಗಾಗ್ಲೇ ಕೆಪಿಸಿಸಿ ಅಧ್ಯಕ್ಷರು ಸ್ಪಷ್ಟನೆ ನೀಡಿದ್ದಾರೆ ಅಂದ್ರು.
Advertisement
ಬೆಳಗಾವಿಯಿಂದ ಹೆದ್ದಾರಿ ಪ್ರಾಧಿಕಾರದ ಕೆಶಿಪ್ ಕಚೇರಿಗಳನ್ನು ಹಾಸನಕ್ಕೆ ಸ್ಥಳಾಂತರ ಮಾಡಿದ್ರ ಬಗ್ಗೆ ಕಾಂಗ್ರೆಸ್ ಸಚಿವರ ವಿರೋಧ ನಿಲುವಿಗೆ ಪರಮೇಶ್ವರ್ ಸಮಜಾಯಿಷಿ ನೀಡಿದ್ದಾರೆ. ಆಡಳಿತ ಕಾರಣದಿಂದ ಸ್ಥಳಾಂತರ ಮಾಡಿದ್ದಿರಬಹುದು, ಇದರಿಂದ ಉತ್ತರ ಕರ್ನಾಟಕಕ್ಕೆ ಯಾವುದೇ ಅನ್ಯಾಯ ಮಾಡಿದಂತಾಗಲ್ಲ ಅಂತಾ ಸಮರ್ಥನೆ ನೀಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews