ಸಂಗೀತ ಕ್ಷೇತ್ರದ ದಂತಕಥೆ, ಹಿರಿಯ ಸಂಗೀತ ನಿರ್ದೇಶಕ ಇಳಯರಾಜ ಅವರು ರಾಜ್ಯಸಭೆ ಸದಸ್ಯರಾಗಿ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎನ್ನುವ ಸುದ್ದಿ ತಮಿಳು ನಾಡಿನಲ್ಲಿ ಹರಿದಾಡುತ್ತಿದೆ. ಮೊನ್ನೆಯಷ್ಟೇ ಇಳಯರಾಜ ಅವರು ಮೋದಿ ಅವರನ್ನು ಡಾ.ಅಂಬೇಡ್ಕರ್ ಗೆ ಹೋಲಿಸಿರುವ ಬೆನ್ನಲ್ಲೇ ಇಂಥದ್ದೊಂದು ಸುದ್ದಿ ದಟ್ಟವಾಗಿದೆ. ಇದನ್ನೂ ಓದಿ : ‘ಗುರು’ ಹೆಸರು ‘ಯುವ’ ರಾಜಕುಮಾರ್ ಬದಲಾಗಿದ್ದು ಹೇಗೆ? : ನಾಮಬಲ ನಂಬಿಕೆಯ ಡಾ.ರಾಜ್ ಕುಟುಂಬ
Advertisement
ಅಂಬೇಡ್ಕರ್ ಪುಸ್ತಕ ಕುರಿತಾಗಿ ಮುನ್ನುಡಿ ಬರೆದಿರುವ ಇಳಯರಾಜ ಅವರು ‘ಪ್ರಧಾನಿ ನರೇಂದ್ರ ಮೋದಿ ಅವರು ಅಂಬೇಡ್ಕರ್ ಆಶಯಗಳನ್ನು ಈಡೇರಿಸುತ್ತಿದ್ದಾರೆ’ ಎಂದು ಬರೆದಿದ್ದರು. ಈ ಮಾತು ಟೀಕೆಗೂ ಗುರಿ ಆಗಿತ್ತು. ಈ ಬರಹದ ಹಿಂದಿರುವ ಉದ್ದೇಶ ರಾಜ್ಯಸಭೆಗೆ ಸೇರುವುದೇ ಆಗಿದೆ ಎಂಬ ಚರ್ಚೆ ಕೂಡ ತಮಿಳು ನಾಡಿನಲ್ಲಿ ನಡೆದಿದೆ. ಅದಕ್ಕೆ ಪುಷ್ಠಿ ಕೊಡುವಂತೆ ಹಲವು ಘಟನೆಗಳು ಕೂಡ ಆ ನಾಡಿನಲ್ಲಿ ನಡೆಯುತ್ತಿವೆ. ಹಾಗಾಗಿ ಇಳಯರಾಜ ಅವರು ಬಿಜೆಪಿ ಮೂಲಕ ರಾಜಕಾರಣ ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ : ಹೊಂಬಾಳೆ ಫಿಲ್ಮ್ಸ್‌ನಿಂದ ಯುವರಾಜ್ ಕುಮಾರ್ ಲಾಂಚ್: ನಿನ್ನೆಯೇ ಬ್ರೇಕ್ ಮಾಡಿತ್ತು ಪಬ್ಲಿಕ್ ಟಿವಿ
Advertisement
Advertisement
ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯ ಸ್ವಾಮಿ ಅವರ ಅಧಿಕಾರವಧಿ ಸದ್ಯದಲ್ಲೇ ಮುಗಿಯಲಿದೆ. ಇದೇ ಸ್ಥಾನಕ್ಕೆ ಸಂಗೀತ ಕ್ಷೇತ್ರದಿಂದ ಇಳಯರಾಜ ಅವರನ್ನು ಕಳುಹಿಸುತ್ತಾರೆ ಎನ್ನುವ ಮಾಹಿತಿ ಇದೆ. ಆದರೆ, ಈ ಕುರಿತು ಅಧಿಕೃತವಾಗಿ ಇನ್ನೂ ಮಾಹಿತಿ ಬಂದಿಲ್ಲ. ಸದ್ಯದಲ್ಲೇ ಅಧಿಕೃತವಾಗಿ ಬಿಜೆಪಿ ಹೇಳಲಿದೆ ಎಂದೂ ಹೇಳಲಾಗುತ್ತಿದೆ.