CinemaDistrictsKarnatakaLatestMain PostSandalwood

‘ಗುರು’ ಹೆಸರು ‘ಯುವ’ ರಾಜಕುಮಾರ್ ಬದಲಾಗಿದ್ದು ಹೇಗೆ? : ನಾಮಬಲ ನಂಬಿಕೆಯ ಡಾ.ರಾಜ್ ಕುಟುಂಬ

ಹೊಂಬಾಳೆ ಫಿಲ್ಮ್ಸ್ ಮೂಲಕ ಇಂದು ಸಿನಿಮಾ ಜಗತ್ತಿಗೆ ಲಾಂಚ್ ಆಗಿರುವ ಯುವ ರಾಜ್ ಕುಮಾರ್, ಈ ಮೊದಲು ಗುರು ಎಂದೇ ಗುರುತಿಸಿಕೊಂಡಿದ್ದರು. ಇವತ್ತಿಗೂ ಡಾ.ರಾಜ್ ಕುಟುಂಬದಲ್ಲಿ ಇವರನ್ನು ಕರೆಯುವುದು ಗುರು ಅಂತಾನೆ. ಆದರೆ, ಯುವ ರಾಜ್ ಕುಮಾರ್ ಎಂದು ಹೆಸರು ಬದಲಾಯಿಸಿಕೊಂಡಿದ್ದಕ್ಕೆ ಕಾರಣವೂ ಇದೆ.  ಇದನ್ನೂ ಓದಿ : ಹೊಂಬಾಳೆ ಫಿಲ್ಮ್ಸ್‌ನಿಂದ ಯುವರಾಜ್ ಕುಮಾರ್ ಲಾಂಚ್: ನಿನ್ನೆಯೇ ಬ್ರೇಕ್ ಮಾಡಿತ್ತು ಪಬ್ಲಿಕ್ ಟಿವಿ

ಡಾ.ರಾಜ್ ಕುಟುಂಬದಲ್ಲಿ ಹೆಸರನ್ನು ಬದಲಾಯಿಸಿಕೊಂಡಿರುವುದು ಇದೇ ಮೊದಲೇನೂ ಅಲ್ಲ. ಸ್ವತಃ ಡಾ.ರಾಜ್ ಕುಮಾರ್ ಅವರೇ ತಮ್ಮ ಮೂಲ ಹೆಸರು ಮುತ್ತುರಾಜ್ ಎಂದಿದ್ದನ್ನು ರಾಜ್ ಕುಮಾರ್ ಆಗಿ ಬದಲಾದರು. ಅದನ್ನು ಅವರೇ ಮಾಡಿಕೊಳ್ಳದಿದ್ದರೆ, ಸಿನಿಮಾಗಾಗಿ ರಾಜ್ ಕುಮಾರ್ ಎಂದು ಬದಲಾಯಿತು. ಇದನ್ನೂ ಓದಿ : ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ

ಆನಂತರ ಡಾ.ರಾಜ್ ಹಿರಿಯ ಪುತ್ರ, ನಟ ಶಿವರಾಜ್ ಕುಮಾರ್ ಹೆಸರು ಕೂಡ ಸಿನಿಮಾಗಾಗಿಯೇ ಬದಲಾಯಿತು. ನಾಗರಾಜು ಶಿವ ಪುಟ್ಟಸ್ವಾಮಿ ಎಂದಿದ್ದ ಜನ್ಮನಾಮವನ್ನು ಶಿವರಾಜ್ ಕುಮಾರ್ ಆಗಿ ಬದಲಾಯಿಸಿಕೊಂಡರು ಶಿವಣ್ಣ. ಈಗ  ಇದೇ ಹೆಸರಿನಿಂದಲೇ ಅವರು ಫೇಮಸ್. ಇದನ್ನೂ ಓದಿ : ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ

ಆನಂತರ ಪುನೀತ್ ಅವರ ಸರದಿ. ಅಪ್ಪು ಜನ್ಮನಾಮ ಲೋಹಿತ್‍. ಹಿರಿಕರೊಬ್ಬರು ಲೋಹಿತ್ ಹೆಸರಿನವರಿಗೆ ಅಲ್ಪಾಯುಷ್ಯವೆಂದು ತಿಳಿಸಿ, ಪುನೀತ್ ಎಂದು ಹೆಸರನ್ನು ಬದಲಾಯಿಸಿದರು. ಅಪ್ಪು ಸಿನಿಮಾದಿಂದಾಗಿ ಪ್ರೀತಿಯಿಂದಲೇ ಅವರನ್ನು ಬಹುತೇಕರು ಅಪ್ಪು ಎಂದೇ ಕರೆದು ಅಭಿಮಾನಿಸುತ್ತಿದ್ದರು. ಇದನ್ನೂ ಓದಿ : ಮಸಾಜ್ ಪಾರ್ಲರ್ ಹುಡುಗಿ ಪಾತ್ರದಲ್ಲಿ ಅದಿತಿ ಪ್ರಭುದೇವ್

ಇದೀಗ ಗುರು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಈ ಕುರಿತು ಅವರು ಸಂದರ್ಶನವೊಂದರಲ್ಲಿ ಹೇಳುತ್ತಾ, ‘ನಮ್ಮ ಕುಟುಂಬದಲ್ಲಿ ಹೆಸರು ಬದಲಾಯಿಸಿಕೊಂಡಿರುವುದು ಇದೇ ಮೊದಲೇನೂ ಅಲ್ಲ. ನನ್ನ ಜನ್ಮನಾಮದ ಬಗ್ಗೆ ವಿಚಾರಿಸಿದಾಗ ‘ಯ’ ಅಕ್ಷರ ಅದೃಷ್ಟವೆಂದು ಹೇಳಿದರು. ಹಾಗಾಗಿ ಯುವರಾಜ್ ಎಂದು ಬದಲಾಯಿಸಲಾಯಿತು’ ಎಂದಿದ್ದರು.

Leave a Reply

Your email address will not be published.

Back to top button