ಕಲಬುರಗಿ: ನಿನ್ನ ಹೆಂಡತಿಯನ್ನು ಕಂಟ್ರೋಲ್ ಮಾಡುವುದಕ್ಕೆ ಆಗದಿದ್ದರೆ ಓಡಿ ಹೋಗುತ್ತಾಳೆ ಎಂದು ಹೇಳುವ ಮೂಲಕ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ, ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಅವರು ತಿರುಗೇಟು ನೀಡಿದ್ದಾರೆ.
Advertisement
ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವ ಪಕ್ಷದಲ್ಲಿ ಶಿಸ್ತು ಇರುವುದಿಲ್ಲವೋ, ಯಾವ ಪಕ್ಷದಲ್ಲಿ ನಾಯಕತ್ವ ಇರುವುದಿಲ್ಲವೋ, ಆ ಪಕ್ಷ ಪ್ರಜಾಪ್ರಭುತ್ವದಲ್ಲಿ ಉಳಿಯಲ್ಲ. ಮಹಾರಾಷ್ಟ್ರದಲ್ಲಿ ಸಿಎಂ ಸ್ಥಾನಕ್ಕಾಗಿ ಠಾಕ್ರೆ ಮಗ ಹಿಂದೂತ್ವವನ್ನೇ ಮಾರಾಟ ಮಾಡಿದರು. ಶಿವಸೇನೆ ಶಾಸಕರನ್ನು ಹೈಜಾಕ್ ಮಾಡಲಾಗಿದೆ. ನಿನ್ನ ಹೆಂಡತಿಯನ್ನ ಕಂಟ್ರೋಲ್ ಮಾಡುವುದಕ್ಕೆ ಆಗದಿದ್ದರೆ ಓಡಿಹೋಗುತ್ತಾಳೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ನಾನು ಡ್ಯಾನ್ಸ್ ಕಲಿತಿಲ್ಲ, ಬೇರೆಯವರನ್ನು ಕುಣಿಸೋದನ್ನು ಚೆನ್ನಾಗಿ ಕಲಿತಿದ್ದೇನೆ: ಲಕ್ಷ್ಮೀ ಹೆಬ್ಬಾಳ್ಕರ್
Advertisement
Advertisement
ನರೇಂದ್ರ ಮೋದಿಯವರನ್ನು ಕೊಲ್ಲಬೇಕು ಅಂತ ಸಾಕಷ್ಟು ಭಯೋತ್ಪಾದಕು ಸಂಚು ರೂಪಿಸಿದ್ದಾರೆ. ಹೈದ್ರಾಬಾದ್‍ನಲ್ಲಿ ಮೋದಿಯವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗಿದೆ. ಆದರೆ ದೇಶದ 135 ಕೋಟಿ ಜನರ ಆಶೀರ್ವಾದ ಎಲ್ಲಿಯವರೆಗೆ ಇರುತ್ತದೆಯೋ, ಅಲ್ಲಿಯವರೆಗೂ ಮೋದಿಯವರ ಒಂದು ಕೂದಲು ಕಿತ್ತುಕೊಳ್ಳುವುದಕ್ಕೆ ಆಗುವುದಿಲ್ಲ. ಮೋದಿ ಕೇವಲ ಭಾರತದ ಪ್ರಧಾನಿಯಲ್ಲ. ಮೋದಿಯವರನ್ನು ವಿಶ್ವದ ನಾಯಕ ಅಂತಾ ಒಪ್ಪಿಕೊಳ್ಳಲಾಗಿದೆ. ಮೋದಿಯವರನ್ನು ಮುಸ್ಲಿಮರು ಸಹ ನರೇಂದ್ರ ಮೋದಿ ಎಂದು ಹೇಳುವುದಿಲ್ಲ. ಬದಲಾಗಿ ಮೋದಿಯವರನ್ನು ನರೇಂದ್ರ ಭಾಯ್ ಅಂತ ಕರೆಯುತ್ತಾರೆ. ಮೋದಿಯವರನ್ನು ಕೊಲ್ಲುತ್ತೇನೆ ಎನ್ನುವುದು ಕನಸಿನ ಮಾತು. ಮೋದಿಯವರಿಂದ ವಿಶ್ವದಲ್ಲಿ ಭಾರತಕ್ಕೆ ಹೆಚ್ಚಿನ ಗೌರವ ಸಿಕ್ಕಿದೆ. ಅವರ ಜೀವಕ್ಕೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎನ್ನುವುದು ಜನ ಮನವರಿಕೆ ಮಾಡಿಕೊಳ್ಳಲಿ. ಪೊಲೀಸರು ತಮ್ಮ ಪ್ರಾಣದ ಹಂಗನ್ನು ತೊರೆದು ಮೋದಿಯವರಿಗೆ ಭದ್ರತೆ ಒದಗಿಸುತ್ತಿದ್ದಾರೆ. ಆದರೆ ಎಚ್ಚರಿಕೆಯಿಂದ ಇರಬೇಕು ಎಂದು ನಮ್ಮ ಪೊಲೀಸರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಾಜ್ ಮಹಲ್ ನಿರ್ಮಾಣದಿಂದ ಪೆಟ್ರೋಲ್ ಬೆಲೆ ಏರಿಕೆ: ಓವೈಸಿ ವ್ಯಂಗ್ಯ
Advertisement
ಹರ್ಷ ಮತ್ತು ಕನ್ಹಯ್ಯಲಾಲ್ ಕೊಲೆ ಪ್ರಕರಣ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಸಿದ್ದರಾಮಯ್ಯನವರು ಹರ್ಷನ ಕೊಲೆ ಎಂದಿಗೂ ಖಂಡನೆ ಮಾಡಿಲ್ಲ. ಮುಸಲ್ಮಾನರನ್ನು ವೈಭವಿಕರಿಸುವ ನಾಟಕವನ್ನು ಹಿಂದೂ ಸಂಘಟನೆಗಳು ಸ್ಥಗಿತಗೊಳಿಸಿವೆ. ಇದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರು ಖಂಡಿಸಿದ್ದರು. 75 ವರ್ಷಗಳಿಂದ ಹಿಂದೂ ಧರ್ಮಕ್ಕೆ ಆಗುತ್ತಿರುವ ಅನ್ಯಾಯವನ್ನು ಸಹಿಸಿಕೊಂಡಿದ್ದೇವು. ಮಹ್ಮದ್ ಪೈಗಂಬರ್‍ರನ್ನು ಅಪಮಾನ ಮಾಡಿದ್ದಕ್ಕೆ ಇಡೀ ವಿಶ್ವದೆಲ್ಲೆಡೆ ಮುಸಲ್ಮಾನರು ಪ್ರತಿಭಟನೆ ಮಾಡಿದ್ದರು. ಇದೀಗ ಕಾಳಿದೇವಿ ಬಾಯಲ್ಲಿ ಸಿಗರೇಟು ಇಟ್ಟಿದ್ದರ ಬಗ್ಗೆ ಯಾಕೆ ಖಂಡನೆ ವ್ಯಕ್ತವಾಗುತ್ತಿಲ್ಲ. ಈ ವಿಚಾರಕ್ಕೆ ಸಿದ್ದರಾಮಯ್ಯನವರು ಯಾಕೆ ಖಂಡಿಸಿಲ್ಲ? ಸೋನಿಯಾ ರಾಹುಲ್ ಯಾಕೆ ಪ್ರತಿಕ್ರಿಯೆ ನೀಡಿಲ್ಲ? ನಮ್ಮ ರಕ್ತ ಕುದಿಯಲ್ಲವಾ ಎಂದು ಪ್ರಶ್ನಿಸಿದ್ದಾರೆ.
ಆಗಸ್ಟ್ 3 ರಂದು ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾವಾಗ ವ್ಯಕ್ತಿಗಳು ರಿಜೆಕ್ಟ್ ಲಿಸ್ಟ್‍ನಲ್ಲಿ ಹೋಗುತ್ತಾರೋ, ಅದಕ್ಕೆ ನಾವು ಬದುಕಿದ್ದೇವೆ ಅಂತ ತೋರಿಸಿಕೊಳ್ಳುವುದಕ್ಕೆ ಇಂತಹ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ. ಇದು ಸ್ವಯಂಪ್ರೇರಿತವಾಗಿ ಆಚರಿಸಿಕೊಳ್ಳುತ್ತಿರುವ ಕಾರ್ಯಕ್ರಮವಾಗಿದ್ದು, ರಾಜ್ಯವಲ್ಲದೇ ಇಡೀ ದೇಶದಲ್ಲಿ ಕಾಂಗ್ರೆಸ್ ರಿಜೆಕ್ಟೆಡ್ ಗ್ರೂಪ್‍ನಲ್ಲಿ ಹೋಗಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನ ಮನೆಗೆ ಕಳುಹಿಸಿದ್ದಾರೆ. ಮುಸ್ಲಿಮರಿಗೆ ಅಲ್ಹಹುಕ್ಬರ್ ಹೇಗೆ ಮುಖ್ಯವೋ, ಹಾಗೇ ಸಿದ್ದರಾಮಯ್ಯಗೆ ಜಮೀರ್‍ಹುಕ್ಬರ್ ಮುಖ್ಯವಾಗಿದ್ದಾರೆ. ಮುಸಲ್ಮಾನರು ಇರುವ ಕ್ಷೇತ್ರದಲ್ಲಿಯೇ ಸಿದ್ದರಾಮಯ್ಯ ಸ್ಪರ್ಧಿಸಲಿ, ಕಾಂಗ್ರೆಸ್ ಇವಾಗ ಇರುವಷ್ಟು ಸೀಟ್‍ಗಳನ್ನು ಕೂಡ ಗೆಲ್ಲಲ್ಲ ಎಂದು ವ್ಯಂಗ್ಯವಾಡಿದ್ದಾರೆ.