– ಮುಂದಿನ 6 ದಿನ ದೆಹಲಿಗೆ ಎಲ್ಲೋ ಅಲರ್ಟ್
– ಭಾನುವಾರ ರಾತ್ರಿ 1.4 ಡಿಗ್ರಿ ಕನಿಷ್ಠ ತಾಪಮಾನ ದಾಖಲು
ನವದೆಹಲಿ: ಉತ್ತರ ಭಾರತ (North India) ಪ್ರವಾಸ ಮಾಡುವ ಯೋಜನೆಯಲ್ಲಿದ್ದರೆ ಕೆಲ ದಿನಗಳ ಕಾಲ ನಿಮ್ಮ ಪ್ರವಾಸ ಮುಂದೂಡುವುದು ಒಳಿತು. ತೀವ್ರ ಶೀತಗಾಳಿಯಿಂದ ದೆಹಲಿ (Delhi) ಮತ್ತು ಸುತ್ತಮುತ್ತಲಿನ ರಾಜ್ಯಗಳಲ್ಲಿ ಉಷ್ಣಾಂಶ ಕುಸಿದಿದ್ದು ಭಾರೀ ಮಂಜು (Fog) ಮತ್ತು ಚಳಿ (Cold) ಆವರಿಸಿಕೊಂಡಿದೆ.
Advertisement
Advertisement
ಭಾನುವಾರ ರಾತ್ರಿ 1.4 ಡಿಗ್ರಿ ಕನಿಷ್ಠ ತಾಪಮಾನ ದೆಹಲಿಯಲ್ಲಿ ದಾಖಲಾಗಿದ್ದು ಈ ಋತುವಿನ ಅತ್ಯಂತ ಕಡಿಮೆ ತಾಪಮಾನ ಎಂದು ಕೇಂದ್ರ ಹವಾಮಾನ ಇಲಾಖೆ ಹೇಳಿದೆ. ಸೋಮವಾರದಿಂದ ಮುಂದಿನ 6 ದಿನಗಳವರೆಗೆ ದೆಹಲಿಯಲ್ಲಿ ಎಲ್ಲೋ ಅಲರ್ಟ್ ನೀಡಲಾಗಿದೆ. ಮೊದಲ 3 ದಿನಗಳಲ್ಲಿ ತಾಪಮಾನವು 2-3 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ನಂತರದ 3 ದಿನ ದಟ್ಟ ಮಂಜು ಆವರಿಸಿಕೊಳ್ಳಲಿದೆ ಎಂದು ಎಚ್ಚರಿಸಲಾಗಿದೆ. ಇದನ್ನೂ ಓದಿ: ಸಚಿವ ಸುಧಾಕರ್‌ರನ್ನ ಹಾಡಿ ಹೊಗಳಿದ ರಮ್ಯಾ: ಕೈಗೆ ನಟಿ ಬೈ ಹೇಳಿ ಬಿಜೆಪಿ ಸೇರ್ಪಡೆ?
Advertisement
ಹವಾಮಾನ ಇಲಾಖೆಯ ಪ್ರಕಾರ, ಹಿಮಾಲಯದಿಂದ ವಾಯುವ್ಯ ಭಾರತದ ಬಯಲು ಪ್ರದೇಶದತ್ತ ವಾಯುವ್ಯ ಮಾರುತಗಳು ಬೀಸುತ್ತಿದ್ದು, ಮುಂದಿನ 2 ದಿನಗಳಲ್ಲಿ ಕನಿಷ್ಠ ತಾಪಮಾನವು 2-4 ಡಿಗ್ರಿಗಳಷ್ಟು ಕುಸಿಯುವ ಸಾಧ್ಯತೆಯಿದೆ. ಇದರ ಪರಿಣಾಮ ಉತ್ತರ ಭಾರತದ ಹಲವು ರಾಜ್ಯಗಳಲ್ಲೂ ಉಷ್ಣಾಂಶ ಕನಿಷ್ಠ ಮಟ್ಟದಲ್ಲಿರಲಿದೆ.
Advertisement
ತಾಪಮಾನ ಕುಸಿದ ಹಿನ್ನಲೆ ಉತ್ತರ ರೈಲ್ವೆ ಪ್ರದೇಶದಲ್ಲಿ 30ಕ್ಕೂ ಹೆಚ್ಚು ರೈಲುಗಳು ತಡವಾಗಿ ಓಡುತ್ತಿವೆ ಎಂದು ಭಾರತೀಯ ರೈಲ್ವೆ ತಿಳಿಸಿದೆ. ಇನ್ನು ವಿಮಾನಗಳ ಹಾರಾಟದಲ್ಲೂ ವ್ಯತ್ಯಯವಾಗಿದೆ. ಇದನ್ನೂ ಓದಿ: ಏಕಕಾಲಕ್ಕೆ 72 ಕ್ಷೇತ್ರ ನಿರ್ವಹಿಸುವ ರಿಮೋಟ್ ಮತಯಂತ್ರ ಪ್ರದರ್ಶನ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k