ಕೋಲಾರ: ಮುಂದಿನ ವಿಧಾನಸಭಾ ಚುನಾವಣೆ ತಯಾರಿಯಲ್ಲಿರುವ ಜೆಡಿಎಸ್ ಪಂಚರತ್ನ ಮೂಲಕ ರಣಕಹಳೆ ಮೊಳಗಿಸಿದೆ. ಚಿನ್ನದ ನಾಡು, ರಾಜ್ಯದ ಮೂಡಣ ದಿಕ್ಕು ಕೋಲಾರದಿಂದಲೇ ಯಾತ್ರೆ ಆರಂಭಿಸಿದೆ. ಪ್ರಾದೇಶಿಕ ಪಕ್ಷಕ್ಕೆ ಆಶೀರ್ವಾದ ಮಾಡಿದ್ರೆ ಚಿನ್ನದ ಗಣಿ ಪ್ರದೇಶದಲ್ಲಿ ಹಳೇ ವೈಭವ ಮರುಕಳಿಸಲಿದೆ ಅನ್ನೋ ಘೋಷಣೆಯನ್ನ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಮಾಡಿದ್ದಾರೆ.
ಕೋಲಾರದಲ್ಲಿ (Kolara) ಈ ಹಿಂದೆ ಐದು ಕ್ಷೇತ್ರಗಳಲ್ಲಿ ಹಿಡಿತ ಹೊಂದಿದ್ದ ಜೆಡಿಎಸ್ (JDS) ಇತ್ತೀಚೆಗೆ ತನ್ನ ಬಲ ಕುಸಿತದಿಂದ ನೇಪತ್ಯಕ್ಕೆ ಸರಿದಿದೆ. ಈ ಮಧ್ಯೆ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿರುವ ಜೆಡಿಎಸ್ ಪಂಚರತ್ನ ಯಾತ್ರೆ ಆರಂಭಿಸಿದೆ. ಅದರಂತೆ ಇತ್ತೀಚೆಗೆ ಕೋಲಾರದ ಕೆಜಿಎಫ್‌ನಲ್ಲಿ ಮತ್ತೆ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಅಭ್ಯರ್ಥಿ ಹುಡುಕಾಟದಲ್ಲಿದ್ದಾರೆ ದಳಪತಿಗಳು. ಕೆಜಿಎಫ್ ಕ್ಷೇತ್ರದಲ್ಲಿ ಹಿಂದೆ ದಿವಂಗತ ಭಕ್ತವತ್ಸಲಂ ಎರಡು ಭಾರಿ ಜೆಡಿಎಸ್ ಶಾಸಕರಾಗಿ ಆಯ್ಕೆಯಾಗಿದ್ದವರು. ಇದನ್ನೂ ಓದಿ: ಸಿದ್ದರಾಮಯ್ಯ ಯಾವತ್ತು ಕೂಡ ಸತ್ಯ ಒಪ್ಪಿಕೊಳ್ಳಲ್ಲ : ಆರಗ ಜ್ಞಾನೇಂದ್ರ
Advertisement
Advertisement
ಆದ್ರೆ ಅವರ ನಿಧನದ ನಂತರ ಕ್ಷೇತ್ರದಲ್ಲಿ ಜೆಡಿಎಸ್‌ಗೆ ನಾಯಕನಿಲ್ಲದೆ ಹಿನ್ನಡೆಯಾಗಿದೆ. ಪರಿಣಾಮ ಈ ಬಾರಿ ಚುನಾವಣಾ ದೃಷ್ಟಿಯಿಂದ ಇತ್ತೀಚೆಗೆ ಕೆಜಿಎಫ್‌ಗೆ ಆಗಮಿಸಿದ್ದ ಹೆಚ್‌ಡಿಕೆ, ಕೆಜಿಎಫ್ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನ ಗೆಲ್ಲಿಸಿಕೊಡುವಂತೆ ಮನವಿ ಮಾಡಿದ್ದಾರೆ. ಜೆಡಿಎಸ್ ಟಿಕೆಟ್ ಅಭ್ಯರ್ಥಿ ಯಾರೆಂದು ಘೋಷಣೆ ಮಾಡದೆ ಈ ಬಾರಿ ಜೆಡಿಎಸ್‌ಗೆ ಅಧಿಕಾರ ಕೊಟ್ಟಿದ್ದೇ ಆದಲ್ಲಿ ಸ್ತ್ರೀಶಕ್ತಿ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
Advertisement
ಇನ್ನೂ ಹೆಚ್ಚಾಗಿ ನಗರ ಭಾಗದಲ್ಲಿಯೇ ಮತದಾರರಿದ್ದು, ಅದರಲ್ಲೂ ತಮಿಳು ಭಾಷಿಗರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇದೆ. ಹೀಗಾಗಿ ತಮಿಳು ಭಾಷಿಗರ ಮನಗೆಲ್ಲುವ ಅಭ್ಯರ್ಥಿಯನ್ನೆ ಆಯ್ಕೆ ಮಾಡಬೇಕಾದ ಅನಿವಾರ್ಯತೆ ಎಲ್ಲ ಪಕ್ಷಗಳಿಗೂ ಇದೆ. ಮಾತ್ರವಲ್ಲದೆ ಗ್ರಾಮೀಣ ಭಾಗ ಅಂದ್ರೆ ಬೇತಮಂಗಲ ಹಾಗೂ ಕ್ಯಾಸಂಬಳ್ಳಿ ಹೋಬಳಿಯಲ್ಲಿ ರೈತಾಪಿ ವರ್ಗ ಹೆಚ್ಚಾಗಿದ್ದು. ಎರಡೂ ವರ್ಗಗಳ ಮತದಾರರನ್ನು ಸೆಳೆಯಬಲ್ಲ ಅಭ್ಯರ್ಥಿಯನ್ನ ಆಯ್ಕೆ ಮಾಡುವ ನಿಟ್ಟಿನಲ್ಲಿ ಉದ್ಯಮಿ ರಮೇಶ್ ಬಾಬು ತಮ್ಮ ಬೆಂಬಲಿಗರೊಂದಿಗೆ ನಗರದಲ್ಲಿ ಪಂಚರತ್ನ ಸಮಾವೇಶ ಆಯೋಜಿಸಿದ್ರೆ, ವಕೀಲ ಸುರೇಶ್ ಎಂಬುವವರು ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದು ಬೆಂಬಲಿಗರು ಒತ್ತಾಯ ಮಾಡಿದ್ದಾರೆ. ಹಾಗಾಗಿ ಇಲ್ಲಿ ಅಭ್ಯರ್ಥಿ ಯಾರೆಂದು ಘೋಷಣೆ ಮಾಡದೆ, ಒಂದು ಭಾರಿ ಪ್ರಾದೇಶಿಕ ಪಕ್ಷಕ್ಕೆ ಆದ್ಯತೆ ನೀಡಿದ್ದೇ ಆದಲ್ಲಿ ಕೆಜಿಎಫ್ ಗತ ವೈಭವವನ್ನ ಮರುಕಳಿಸುವಂತೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಕೆಪಿಸಿಸಿ ಕಾರ್ಯಾಧ್ಯಕ್ಷರ ಎದುರೇ ಕಾರ್ಯಕರ್ತರ ಕಿತ್ತಾಟ
Advertisement
ಕೆಜಿಎಫ್‌ನ ತಮಿಳು ಹಾಗೂ ಕಾರ್ಮಿಕ ವಲಯದ ಮೇಲೆ ಕಣ್ಣಿಟ್ಟಿರುವ ಹೆಚ್‌ಡಿಕೆ, ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ಕೆಜಿಎಫ್ ಗತ ವೈಭವದ ಭರವಸೆ ನೀಡಿದ್ದಾರೆ.