ಸಿನಿಮಾ ರಿಲೀಸ್ ಆದ ದಿನದಿಂದ ಈವರೆಗೂ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಬಗ್ಗೆ ಒಂದಿಲ್ಲೊಂದು ವಿವಾದ ಕೇಳಿ ಬರುತ್ತಲೇ ಇದೆ. ಅದರಲ್ಲಿ ಈ ಬಾರಿ ಗಂಭೀರವಾದ ಆರೋಪಗಳನ್ನು ಈ ಚಿತ್ರದ ಮೇಲೆ ಹೊರೆಸಲಾಗಿದೆ. ಅದರಲ್ಲೂ ಗೋವಾದಲ್ಲಿ ನಡೆದ ಪ್ರತಿಷ್ಠಿತ ಭಾರತೀಯ ಚಲನಚಿತ್ರ ಚಿತ್ರೋತ್ಸವದಲ್ಲಿ ಮಾಡಿದ ಆರೋಪವೊಂದು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರೋತ್ಸವದ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಸಿನಿಮಾ ನೋಡಿದ್ದ ವಿದೇಶಿ, ಚಿತ್ರ ನಿರ್ದೇಶಕ ನದಾಲ್ ಈ ಸಿನಿಮಾದ ಬಗ್ಗೆ ಹಲವು ಆರೋಪಗಳನ್ನು ಮಾಡಿದ್ದಾರೆ.
Advertisement
ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರಶಸ್ತಿ ವಿಭಾಗದ ಜ್ಯೂರಿಯಾಗಿದ್ದ ಇಸ್ರೇಲಿ ನಿರ್ದೇಶಕ ನದಾಲ್, ಭಾರತದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಕುರಿತು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದು, ಇಂತಹ ಅಶ್ಲೀಲ, ಕೆಟ್ಟ ಸಿನಿಮಾವನ್ನು ನಾನು ಯಾವತ್ತೂ ಜ್ಯೂರಿಯಾಗಿ ನೋಡಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಅವರ ಈ ಮಾತಿಗೆ ಪರ ವಿರೋಧ ಕೂಡ ವ್ಯಕ್ತವಾಗಿದೆ. ನದಾಲ್ ಮಾತಿಗೆ ಕೆಲವರು ಆಕ್ಷೇಪನೆ ವ್ಯಕ್ತ ಪಡಿಸಿದ್ದರೆ, ಬಾಲಿವುಡ್ ನಟಿ ಸ್ವರ ಭಾಸ್ಕರ್ ಇಸ್ರೇಲಿ ನಿರ್ದೇಶಕನ ಪರವಾಗಿ ನಿಂತಿದ್ದಾರೆ. ಇದನ್ನೂ ಓದಿ: ಸಿನಿಮಾ ಸೋಲಿನ ಬೆನ್ನಲ್ಲೇ ಐಟಂ ಡ್ಯಾನ್ಸ್‌ಗೆ ಓಕೆ ಎಂದ ರಶ್ಮಿಕಾ ಮಂದಣ್ಣ
Advertisement
Advertisement
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಸ್ವರ, ‘ಸತ್ಯ ಏನು ಅನ್ನುವುದು ಸ್ಪಷ್ಟವಾಗಿ ಜಗತ್ತಿಗೆ ಅರ್ಥವಾಗಿದೆ’ ಎಂದು ಬರೆದುಕೊಂಡಿದ್ದಾರೆ. ಸ್ವರ ಭಾಸ್ಕರ್ ಮಾತಿಗೂ ಕೆಲವರು ಆಕ್ಷೇಪ ವ್ಯಕ್ತ ಪಡಿಸಿದ್ದರೆ, ಇನ್ನೂ ಕೆಲವರು ಸ್ವರ ಪರವಾಗಿಯೇ ಮಾತನಾಡಿದ್ದಾರೆ. ಹಾಗಾಗಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಮತ್ತೊಂದು ರೌಂಡಿನ ಚರ್ಚೆಗೆ ಕಾರಣವಾಗಿದೆ.
Advertisement
ಇಷ್ಟೆಲ್ಲ ರಾದ್ಧಾಂತ ಆದ ಬೆನ್ನಲ್ಲೇ ಈ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಪ್ರತಿಕ್ರಿಯೆ ನೀಡಿದ್ದು, ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿಯ ಅಂಶಗಳು ಸುಳ್ಳು ಎಂದು ಯಾರಾದರೂ ಸಾಬೀತು ಪಡಿಸಿದರೆ ನಾನು ಸಿನಿಮಾ ರಂಗದಲ್ಲೇ ಇರುವುದಿಲ್ಲ ಎಂದು ಹೇಳಿದ್ದಾರೆ. ಹಾಗಂತ ಬಹಿರಂಗವಾಗಿಯೇ ಅವರು ಆಹ್ವಾನ ನೀಡಿದ್ದಾರೆ.