ಲಕ್ನೋ: ಉತ್ತರ ಪ್ರದೇಶದ ಪೊಲೀಸ್ ಒಬ್ಬ ಲಂಚವನ್ನು ತೆಗೆದುಕೊಳ್ಳುವ ಬಗ್ಗೆ ಸಮರ್ಥಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ನಡೆದ ‘ಪೊಲೀಸ್ ಕೀ ಪಾಠ ಶಾಲಾ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿರುವ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಬಹಿರಂಗವಾಗಿ ಈ ಹೇಳಿಕೆಯನ್ನು ನೀಡಿದ್ದಾರೆ. ಇದನ್ನೂ ಓದಿ: ಆಕಾಶದಲ್ಲಿ ಅಚ್ಚರಿ – ಏನಿದು ಸ್ಟಾರ್‌ಲಿಂಕ್ ಉಪಗ್ರಹಗಳು? ದರ ಎಷ್ಟು? ನೆಟ್ ಹೇಗೆ ಸಿಗುತ್ತೆ?
Advertisement
Video from “Police ki pathshala” in UP’s Unnao
Police department is still the most honest department. If police takes money, it gets the job done. Other department keep dilly-dallying.
Video credit: @sanjayjournopic.twitter.com/mUHovttVsx
— Piyush Rai (@Benarasiyaa) December 20, 2021
Advertisement
ಪೊಲೀಸ್ ಇಲಾಖೆಯವರು ಲಂಚವನ್ನು ತೆಗೆದುಕೊಂಡು ಯಾವುದೇ ಕೆಲಸವಾಗಿರಲಿ ಪರಿಣಾಮಕಾರಿಯಾಗಿ ನಿರ್ವಹಿಸುತ್ತಾರೆ. ಆದರೆ ಬೇರೆ ಇಲಾಖೆಯ ಜನ ಲಂಚ ತೆಗೆದುಕೊಂಡರೂ ಸಹ ಯಾವುದೇ ಕೆಲಸ ಮಾಡಿಕೊಡುವದಿಲ್ಲ. ಕೊರೊನಾ ಸಾಂಕ್ರಾಮಿಕ ರೋಗವಿದ್ದರೂ ಸಹ ತಮ್ಮ ಜೀವವನ್ನು ಲೆಕ್ಕಿಸದೇ ಸಾಮಾನ್ಯಕ್ಕಿಂತ ಹೆಚ್ಚಿನ ಕೆಲಸ ಮಾಡಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಐಪಿಎಲ್ 2022 ಹರಾಜು – 5 ವಿದೇಶಿ ವಿಕೆಟ್ ಕೀಪರ್‌ಗಳ ಮೇಲೆ ಫ್ರಾಂಚೈಸಿಗಳ ಕಣ್ಣು
Advertisement
Advertisement
ಪೊಲೀಸ್ ಭಾಷಣದ ಈ ವೀಡಿಯೋವು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿದೆ. ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿದ ಉನ್ನಾವೋ ಪೊಲೀಸ್ ಸಂಪೂರ್ಣ ವಿಷಯದ ಬಗ್ಗೆ ತನಿಖೆ ನಡೆಸಿ ವರದಿಯನ್ನು ನೀಡುವಂತೆ ಜಿಲ್ಲಾಡಳಿತ ಸೂಚಿಸಿದೆ ಎಂದು ಟ್ವೀಟ್ ಮಾಡಿದೆ.