ನವದೆಹಲಿ: ನಿಮ್ಮ ವೈಯಕ್ತಿಕ ಖಾತೆ ಸಂಖ್ಯೆಯನ್ನು (PAN) ಆಧಾರ್‌ನೊಂದಿಗೆ (Aadhaar) ಇಲ್ಲಿಯವರೆಗೆ ಲಿಂಕ್ (Link) ಮಾಡಿಸದೇ ಹೋಗಿದ್ದಲ್ಲಿ, ಈ ಕೂಡಲೇ ಮಾಡಿಸಿಕೊಳ್ಳಿ. ಏಕೆಂದರೆ, ನೀವು ಲಿಂಕ್ ಮಾಡಿಸದೇ ಹೋದಲ್ಲಿ ಕೆಲವೇ ದಿನಗಳಲ್ಲಿ ನಿಮ್ಮ ಪ್ಯಾನ್ ನಿಷ್ಕ್ರಿಯವಾಗಲಿದೆ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ನೀಡಿದ ಸಲಹೆಯಲ್ಲಿ, 2023ರ ಮಾರ್ಚ್ 31 ರ ಒಳಗಾಗಿ ಪ್ಯಾನ್ ಅನ್ನು ಆಧಾರ್ ಜೊತೆ ಲಿಂಕ್ ಮಾಡಿಲ್ಲವೆಂದರೆ ಅದು ಏಪ್ರಿಲ್ 1 ರಿಂದ ನಿಷ್ಕ್ರಿಯವಾಗಲಿದೆ ಎಂದು ತಿಳಿಸಿದೆ. ಈ ಕ್ರಮದಿಂದ ನಿಮ್ಮ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮವೂ ಬೀರುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.
Advertisement
Advertisement
ಆದಾಯ ತೆರಿಗೆ ಕಾಯಿದೆ, 1961ರ ಪ್ರಕಾರ ವಿನಾಯಿತಿ ವರ್ಗದ ಅಡಿಯಲ್ಲಿ ಬರದ ಎಲ್ಲಾ ಪ್ಯಾನ್ ಹೊಂದಿದವರು 2023ರ ಮಾರ್ಚ್ 31ರ ಒಳಗಡೆ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಲಿಂಕ್ ಮಾಡದೇ ಹೋದ ಪಾನ್‌ಗಳು ಮುಂದಿನ ಏಪ್ರಿಲ್ 1 ರಿಂದ ನಿಷ್ಕ್ರಿಯವಾಗಲಿದೆ. ಇದು ಕಡ್ಡಾಯ ಹಾಗೂ ಅವಶ್ಯಕವಾಗಿದ್ದು, ಲಿಂಕ್ ಮಾಡಲು ತಡ ಮಾಡಬೇಡಿ ಎಂದು ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದೆ.
Advertisement
ಲಿಂಕ್ ಯಾಕೆ?
ಆದಾಯ ತೆರಿಗೆ ಇಲಾಖೆ ಪ್ಯಾನ್ ಹೊಂದಿರುವವರ ಎಲ್ಲಾ ವಹಿವಾಟುಗಳನ್ನು ಇಲಾಖೆಯೊಂದಿಗೆ ಗುರುತಿಸಲು ಈ ಕ್ರಮವನ್ನು ಕೈಗೊಂಡಿದೆ. ಇದರಲ್ಲಿ ತೆರಿಗೆ ಪಾವತಿ, ಟಿಡಿಎಸ್/ಟಿಸಿಎಸ್ ಕ್ರೆಡಿಟ್‌ಗಳು, ಆದಾಯ, ನಿರ್ದಿಷ್ಟ ವಹಿವಾಟುಗಳು ಪತ್ರ ವ್ಯವಹಾರಗಳು ಸೇರಿವೆ. ಪ್ಯಾನ್ ಹೊಂದಿರುವವರ ಮಾಹಿತಿಗಳನ್ನು ಸುಲಭವಾಗಿ ಪಡೆಯಲು ಹಾಗೂ ಅವರ ವಿವಿಧ ರೀತಿಯ ಹೂಡಿಕೆಗಳು, ಸಾಲ, ಇತರ ವ್ಯಾಪಾರ ಚಟುವಟಿಕೆಗಳ ಹೊಂದಾಣಿಕೆಯನ್ನು ಅರಿತುಕೊಳ್ಳಲು ಸಾಧ್ಯವಾಗಲಿದೆ.
Advertisement
ಲಿಂಕ್‌ಗೆ ಶುಲ್ಕ ಎಷ್ಟು?
ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಪ್ಯಾನ್‌ನೊಂದಿಗೆ ಆಧಾರ್ ಲಿಂಕ್ ಮಾಡುವ ಗಡುವನ್ನು 2022ರ ಮಾರ್ಚ್ 31 ರಿಂದ 2023 ಮಾರ್ಚ್ 31ರ ವರೆಗೆ ವಿಸ್ತರಿಸಿದೆ. ನೀವು 31 ಮಾರ್ಚ್ 2023ರ ವರೆಗೆ ಆಧಾರ್ ಅನ್ನು ಪ್ಯಾನ್‌ನೊಂದಿಗೆ ಲಿಂಕ್ ಮಾಡಬಹುದು. ಲಿಂಕ್ ಮಾಡುವ ವೇಳೆ ನೀವು ಶುಲ್ಕವನ್ನು ಪಾವತಿಸಬೇಕಾಗುತ್ತದೆ. 2022 ಜೂನ್ 30ರ ವರೆಗೆ ಶುಲ್ಕ 500ರೂ. ಇದ್ದು, 2022 ಜುಲೈ 1ರಿಂದ ಶುಲ್ಕ 1,000 ರೂ. ಆಗಿದೆ. ಇದನ್ನೂ ಓದಿ: 2022ರಲ್ಲಿ ದಾಖಲೆಯ ಡ್ರಿಂಕ್ ಅಂಡ್ ಡ್ರೈವ್ ಕೇಸ್ ದಾಖಲು
ಲಿಂಕ್ ಹೇಗೆ?
ಈ ಕೆಳಗಿನ ಪ್ರಕ್ರಿಯೆಯ ಮೂಲಕ ನೀವು ನಿಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬಹುದು:
* ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ತೆರೆಯಿರಿ – https://incometaxindiaefiling.gov.in/
* ಅದರ ಮೇಲೆ ನೋಂದಾಯಿಸಿ (ಈಗಾಗಲೇ ಮಾಡದಿದ್ದರೆ). ನಿಮ್ಮ ಪ್ಯಾನ್ ನಿಮ್ಮ ಬಳಕೆದಾರ ಐಡಿ (ಯೂಸರ್ ಐಡಿ) ಆಗಿರುತ್ತದೆ.
* ಬಳಕೆದಾರ ಐಡಿ, ಪಾಸ್‌ವರ್ಡ್ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಲಾಗ್ ಇನ್ ಮಾಡಿ.
* ಪಾಪ್-ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ, ನಿಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಕೇಳುತ್ತದೆ. ಇಲ್ಲದಿದ್ದರೆ, ಮೆನು ಬಾರ್‌ನಲ್ಲಿ ‘ಪ್ರೊಫೈಲ್ ಸೆಟ್ಟಿಂಗ್ಸ್’ಗೆ ಹೋಗಿ ಮತ್ತು ‘ಲಿಂಕ್ ಆಧಾರ್’ ಕ್ಲಿಕ್ ಮಾಡಿ.
* ಪ್ಯಾನ್ ವಿವರಗಳ ಪ್ರಕಾರ ಹೆಸರು ಹುಟ್ಟಿದ ದಿನಾಂಕ ಮತ್ತು ಲಿಂಗದಂತಹ ವಿವರಗಳನ್ನು ಈಗಾಗಲೇ ನಮೂದಿಸಲಾಗಿದೆ.
* ನಿಮ್ಮ ಆಧಾರ್‌ನಲ್ಲಿ ನಮೂದಿಸಲಾದ ಪ್ಯಾನ್ ವಿವರಗಳನ್ನು ಪರದೆಯ ಮೇಲೆ ಪರಿಶೀಲಿಸಿ. ಏನಾದದೂ ತಪ್ಪುಗಳು ಕಂಡುಬಂದಲ್ಲಿ ನೀವು ಅದರಲ್ಲಿರುವ ದಾಖಲೆಗಳನ್ನು ನಮೂದಿಸಿ ಸರಿಪಡಿಸಬೇಕಾಗುತ್ತದೆ.
* ವಿವರಗಳು ಹೊಂದಾಣಿಕೆಯಾದರೆ, ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ‘ಲಿಂಕ್ ನವ್’ ಬಟನ್ ಅನ್ನು ಕ್ಲಿಕ್ ಮಾಡಿ.
* ನಿಮ್ಮ ಆಧಾರ್ ನಿಮ್ಮ ಪ್ಯಾನ್‌ಗೆ ಯಶಸ್ವಿಯಾಗಿ ಲಿಂಕ್ ಆಗಿದ್ದರೆ, ನಿಮಗೆ ಸಂದೇಶದ ಮೂಲಕ ಮಾಹಿತಿಯನ್ನು ತಿಳಿಸಲಿದೆ.
* ನಿಮ್ಮ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡಲು ನೀವು https://www.utiitsl.com/ OR https://www.egov-nsdl.co.in/ ಗೆ ಭೇಟಿ ನೀಡಬಹುದು.
ಆಫ್‌ಲೈನ್ ಲಿಂಕ್ ಹೇಗೆ?
* ನೀವು ಆನ್‌ಲೈನ್ ಬದಲು ಆಫ್‌ಲೈನ್ ಲಿಂಕ್ ಮಾಡಲು ಬಯಸಿದರೆ, ಎನ್‌ಎಸ್‌ಡಿಎಲ್ ಕಚೇರಿಗೆ ಭೇಟಿ ನೀಡಿ.
* ಅಧಿಕಾರಿಗಳ ಬಳಿ ಸಂಬಂಧಿತ ಅರ್ಜಿಯನ್ನು ಕೇಳಿ.
* ಅರ್ಜಿಯಲ್ಲಿ ತಿಳಿಸಲಾದ ಅಗತ್ಯ ಮಾಹಿತಿಗಳನ್ನು ನಮೂದಿಸಿ ಹಾಗೂ ಕೇಳಲಾದ ದಾಖಲೆಗಳನ್ನು ಲಗತ್ತಿಸಿ.
* ನೀವು ಅರ್ಜಿಯನ್ನು ಅಧಿಕಾರಿಗಳಿಗೆ ಸಲ್ಲಿಸಿದ ಬಳಿಕ ಅವರು ಪರಿಶೀಲನೆ ನಡೆಸಿ, ಆಧಾರ್ ಹಾಗೂ ಪ್ಯಾನ್ ಕಾರ್ಡ್‌ಗಳನ್ನು ಲಿಂಕ್ ಮಾಡುತ್ತಾರೆ. ಇದನ್ನೂ ಓದಿ: ಗಡಿ ವಿಚಾರದಲ್ಲಿ ಮತ್ತೆ ಕ್ಯಾತೆ ಮುಂದುವರಿಸಿದ MESನಿಂದ ನಾಡದ್ರೋಹಿ ಘೋಷಣೆ