ಬೆಂಗಳೂರು: ಸಿದ್ದರಾಮಯ್ಯ ಮುಖ್ಯಮಂತ್ರಿಯಾದ್ರೆ ನಾನು ಸಚಿವನಾಗುತ್ತೇನೆ. ಆಮೇಲೆ ನಾನು ಗಿನ್ನಿಸ್ ರೆಕಾರ್ಡ್ ಲೆವೆಲ್ ಕೆಲಸ ಮಾಡುತ್ತೇನೆ ಅಂತ ಶಾಸಕ ಜಮೀರ್ ಅಹಮದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚಾಮರಾಜಪೇಟೆಯಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಅಗೋದನ್ನ ಯಾರಿಂದಲೂ ತಡೆಯೋಕೆ ಆಗಲ್ಲ. ಸಿದ್ದರಾಮಯ್ಯ ಸಿಎಂ ಅದ್ರೇ ನಿಮ್ಮ ಬಚ್ಚಾ ಜಮೀರ್ ಮಂತ್ರಿ ಅಗೋದನ್ನ ಯಾರಿಂದಲೂ ತಡೆಯೋಕೆ ಅಗಲ್ಲ ಅಂತ ಹೇಳಿದ್ದಾರೆ.
ಸಿದ್ದರಾಮಯ್ಯ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡೇ ಮಾಡ್ತೀವಿ. ಅವರನ್ನು ಗೆಲ್ಲಿಸುವ ಮೂಲಕ ಮತ್ತೆ ಅಧಿಕಾರ ನಡೆಸುತ್ತೇವೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ್ರೆ ನಾನು ಮಂತ್ರಿ ಆಗೇ ಆಗ್ತೀನಿ. ಆಮೇಲೆ ಇದೆ ನೋಡಿ ಆಟ. ಮಿನಿಸ್ಟರ್ ಆಗಿ ಏನೆಲ್ಲ ಕೆಲಸ ಮಾಡ್ತಿನಿ ಅಂದ್ರೆ ನನ್ನ ಹೆಸರು ಗಿನ್ನಿಸ್ ಬಕ್‍ನಲ್ಲಿ ರೆಕಾರ್ಡ್ ಆಗುತ್ತೆ ಅಂತ ಹೇಳಿದ್ರು.
https://www.youtube.com/watch?v=x8bg1m2yIaQ