ಬೆಳಗಾವಿ: ಯಾವುದೇ ಜಾತಿ ಮತ ಪಂಥಗಳಿಂದ ಸ್ವಾಮೀಜಿಗಳಾಗಬಾರದು. ತಮ್ಮ ವಿದ್ವತ್, ಯೋಗ್ಯತೆ ಮೇಲೆ ಸ್ವಾಮೀಜಿಗಳಾಗಬೇಕು. ಬಸವರಾಜ ಬೊಮ್ಮಾಯಿ (Basavarj Bommai) ಸರ್ಕಾರ (Government) ಪುಣ್ಯಕ್ಕೆ ಮತಾಂತರ (Conversion) ನಿಷೇಧ ಜಾರಿಗೆ ತಂದಿದೆ. ಇಲ್ಲವಾದರೆ ಮಠಗಳ ಮುಂಭಾಗದಲ್ಲಿ ಚರ್ಚ್, ಮಸೀದಿ ನಿರ್ಮಾಣ ಆಗುತ್ತಿದ್ದವು ಎಂದು ಕೊಲ್ಲಾಪುರದ ಕನ್ನೇರಿಮಠದ ಪರಮಪೂಜ್ಯ ಕಾಡಸಿದ್ದೇಶ್ವರ ಸ್ವಾಮೀಜಿ (Kadasiddeshwar Sri) ಅಭಿಪ್ರಾಯ ವ್ಯಕ್ತಪಡಿಸಿದರು.
Advertisement
ಕೊಲ್ಲಾಪುರದ ಕನ್ಹೇರಿಮಠದಲ್ಲಿ ನಡೆಯುತ್ತಿರುವ ಸಂತ ಸಮಾವೇಶದಲ್ಲಿ ಮಾತನಾಡಿದ ಅವರು, ಇದು ಸ್ವಾಮೀಜಿಗಳು ಹಾಗೂ ಭಕ್ತರ ಸಮಾವೇಶವಾಗಿದೆ. ಐನೂರಕ್ಕೂ ಹೆಚ್ಚು ಮಠಾಧೀಶರು ಭಾಗಿಯಾಗಿದ್ದಾರೆ. ಮತ್ತಷ್ಟು ಮಠಾಧೀಶರು ಬರುತ್ತಿದ್ದಾರೆ. ಭಕ್ತರ ದೇಣಿಗೆ, ಕಾಣಿಕೆಯಿಂದ ಮಠಗಳು ನಿರ್ಮಾಣ ಆಗಿದ್ದು, ನಾವು ಮಠಗಳ ಮಾಲೀಕರು ಅಲ್ಲ. ವ್ಯವಸ್ಥಾಪಕರು. ಸಂಸ್ಕಾರ ಕೊಡುವ ಕೆಲಸ ಸ್ವಾಮೀಜಿಗಳು ಮಾಡಬೇಕು. ಗುರುಗಳು ಮತ್ತು ಭಕ್ತರ ಅಂತರ ಕಡಿಮೆ ಆಗಬೇಕು. ಗುರುಗಳು ಭಕ್ತರ ಸಮೀಪ ಹೋಗಬೇಕು ಎಂದರು. ಇದನ್ನೂ ಓದಿ: ಪೂರ್ಣ ಬಹಿಷ್ಕಾರಕ್ಕೆ BJP ಎಂಪಿಯಿಂದ ಕರೆ – ಮುಸ್ಲಿಮರ ವಿರುದ್ಧ ಯುದ್ಧ ಸಾರಲಾಗಿದೆ ಎಂದ ಓವೈಸಿ
Advertisement
Advertisement
ನಾವು ಸ್ವಾಮೀಜಿಗಳಾದ ಮೇಲೆ ಪೂರ್ವಾಶ್ರಮ ತೊರೆದು ಭಕ್ತರ ಹತ್ತಿರ ಹೋಗಬೇಕು. ಯಾವುದೇ ಜಾತಿ ಮತ, ಪಂಥಗಳಿಂದ ಸ್ವಾಮೀಜಿಗಳಾಗಬಾರದು. ಜಾತಿಯಿಂದ ಮಠಾಧೀಶರಾಗಬಾರದು. ತಮ್ಮ ವಿದ್ವತ್, ಯೋಗ್ಯತೆ ಮೇಲೆ ಸ್ವಾಮೀಜಿಗಳಾಗಬೇಕು. ನಮ್ಮ ಸ್ವಾಮೀಜಿಗಳು ಮತಾಂತರ ತಡೆಯಬೇಕು. ಇಲ್ಲವಾದ್ರೆ ಧರ್ಮಾಂತರ, ಮತಾಂತರ ಆಗಲ್ಲ ದೇಶಾಂತರ ಶುರುವಾಗುತ್ತದೆ. ನಮ್ಮ ಬೊಮ್ಮಾಯಿ ಸರ್ಕಾರ ಪುಣ್ಯಕ್ಕೆ ಮತಾಂತರ ನಿಷೇಧ ಮಾಡಿದೆ. ಇಲ್ಲವಾದರೆ ಮಠಗಳ ಮುಂಭಾಗದಲ್ಲಿ ಚರ್ಚ್ (Churche), ಮಸೀದಿ (Mosques) ನಿರ್ಮಾಣ ಆಗುತ್ತಿದ್ದವು. ನಾವು ಬೇರೆಯವರನ್ನು ದೂಷಿಸಲ್ಲ, ನಾವೇ ಎಡವಿದ್ದೇವೆ. ಬಿಟ್ಟು ಹೋದವರನ್ನು ವಾಪಸ್ ಕರೆದುಕೊಂಡು ಬಂದು ಅಣ್ಣ ತಮ್ಮಂದಿರಂತೆ ಇರೋಣ ಎಂದು ನುಡಿದರು. ಇದನ್ನೂ ಓದಿ: ಲಕ್ವಾ ಹೊಡೆದ ವೃದ್ಧೆಗೆ ಸ್ಫೂರ್ತಿಯಾಗಿತ್ತು ಬಾದಲ್ ಚಿತ್ರ
Advertisement
ದೇಶದಲ್ಲಿ 50 ಲಕ್ಷ ದೇವಸ್ಥಾನ, 10 ಲಕ್ಷ ಮಠಗಳು, ಆಶ್ರಮಗಳು ಇವೆ. ಒಂದೊಂದು ಮಠದಿಂದ ಒಂದೊಂದು ಗ್ರಾಮ ದತ್ತು ತಗೆದುಕೊಂಡರೆ ದೇಶ ಸುಧಾರಣೆ ತುಂಬಾ ಸುಲಭ ಆಗುತ್ತದೆ. ರೈತರು (Farmers) ಮಠಗಳನ್ನು ಕಟ್ಟುತ್ತಾರೆ, ಮಠಗಳು ಭಕ್ತರಿಗಾಗಿ ಕೆಲಸ ಮಾಡಬೇಕು. ಭಕ್ತರ ಹಿತಕ್ಕಾಗಿ ಏನೇನು ಚಟುವಟಿಕೆ ಮಾಡಬೇಕು ಎಂದು ಆಗಾಗ ಕಾರ್ಯಕ್ರಮ ಮಾಡುತ್ತೇವೆ. ಮಠದಲ್ಲಿ ಯಾತ್ರೆಗಳು ಆಗುವಾಗ ಎತ್ತುಗಳ, ಹಸುಗಳ ಪ್ರದರ್ಶನ ಆಗಬೇಕು. ರೈತರಿಗೆ ಒಳ್ಳೆಯ ಸಸಿಗಳು, ದೇಸಿಯ ಬೀಜಗಳು ಮಠದಿಂದ ಕೊಟ್ರೆ ಒಳ್ಳೆಯ ರೀತಿ ಬೆಳೆಯುತ್ತಾರೆ. ಭಕ್ತರಿಗೆ ಒಳ್ಳೆಯ ಆಹಾರ ಸಿಗಬೇಕು. ನಮ್ಮ ಮಠಗಳು ಇಂತಹ ಪೂರೈಕೆ ಕೇಂದ್ರಗಳು ಆಗಬೇಕು ಎಂದರು.
Live Tv
[brid partner=56869869 player=32851 video=960834 autoplay=true]