ನವದೆಹಲಿ: ಮಕ್ಕಳು ಬೆಳಿಗ್ಗೆ 7 ಗಂಟೆಗೆ ಶಾಲೆಗೆ ಹೋಗಬಹುದು ಅನ್ನೋದಾದ್ರೆ ನ್ಯಾಯಾಧೀಶರು, ವಕೀಲರೇಕೆ ತಮ್ಮ ದಿನವನ್ನು 9 ಗಂಟೆಗೆ ಪ್ರಾರಂಭಿಸಬಾರದು ಎಂದು ನ್ಯಾಯಮೂರ್ತಿ ಯು.ಯು.ಲಲಿತ್ ಹೇಳಿದ್ದಾರೆ.
ಮುಂದಿನ ಆಗಸ್ಟ್ ತಿಂಗಳಿನಲ್ಲಿ ಮುಖ್ಯ ನ್ಯಾಯಮೂರ್ತಿಯಾಗಲಿರುವ ಲಲಿತ್ ಅವರಿದ್ದ ತ್ರಿಸದಸ್ಯ ಪೀಠವು ಇಂದು ನಿಗದಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿಯೇ ಕುಳಿತು ವಿಚಾರಣೆ ಆರಂಭಿಸಿತು. ಸಾಮಾನ್ಯವಾಗಿ ನ್ಯಾಯಾಲಯವು ಬೆಳಿಗ್ಗೆ 10:30ಕ್ಕೆ ತನ್ನ ವಿಚಾರಣೆ ಪ್ರಾರಂಭಿಸುತ್ತದೆ. ಆದರೆ ನ್ಯಾ. ಯು.ಯು.ಲಲಿತ್ ಇಂದು ಬೆಳಿಗ್ಗೆ 9:30ಕ್ಕೆ ಪ್ರಕರಣದ ವಿಚಾರಣೆ ಪ್ರಾರಂಭಿಸಿದರು. ಇದನ್ನೂ ಓದಿ: ಲಿಪ್‍ಸ್ಟಿಕ್, ಕಾಸ್ಟ್ಲಿ ಮೊಬೈಲ್ ತಗೋತಿರಾ, ಫೀಸ್ ಕಟ್ಟೋಕೆ ಆಗಲ್ವಾ?- ವಿವಿ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿನಿಯರು
Advertisement
Advertisement
ವಿಚಾರಣೆ ಆರಂಭಿಸಿದ ಬಗ್ಗೆ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಹರ್ಷ ವ್ಯಕ್ತಪಡಿಸಿದರು. ಈ ವೇಳೆ ಯು.ಯು.ಲಲಿತ್ `ಮಕ್ಕಳು ಬೆಳಿಗ್ಗೆ 7 ಗಂಟೆಯಿಂದಲೇ ಶಾಲೆಗೆ ಹೋಗಬಹುದಾದರೆ ನ್ಯಾಯಾಧೀಶರು ಹಾಗೂ ವಕೀಲರು ತಮ್ಮ ದಿನವನ್ನು ಏಕೆ 9 ಗಂಟೆಗೆ ಪ್ರಾರಂಭಿಸಬಾರದು? ಎಂದು ಪ್ರಶ್ನಿಸಿದರು.
Advertisement
ನ್ಯಾಯಮೂರ್ತಿ ಲಲಿತ್, ನ್ಯಾ. ಎಸ್.ರವೀಂದ್ರ ಭಟ್, ನ್ಯಾ. ಸುಧಾಂಶು ಧುಲಿಯಾ ಅವರಿದ್ದ ತ್ರಿಸದಸ್ಯ ಪೀಠದಲ್ಲಿ 2ನೇ ದರ್ಜೆಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ರೋಹಟಗಿ, 9.30 ಈ ಸಮಯ ನ್ಯಾಯಾಲಯದ ಚಟುವಟಿಕೆಗಳನ್ನು ಪ್ರಾರಂಭಿಸಲು ಸೂಕ್ತ ಸಮಯ ಎಂದು ಹೇಳಿದರು. ಇದನ್ನೂ ಓದಿ: ಅಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್‌ಗೆ ಮತ್ತೊಂದು ಪ್ರಕರಣದಲ್ಲಿ ಜಾಮೀನು
Advertisement
ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿ ಲಲಿತ್ ಅವರು ನಾವು 9 ಗಂಟೆಗೆ ಕೋರ್ಟ್ನಲ್ಲಿ ಕುಳಿತುಕೊಳ್ಳಬೇಕು ಎಂದು ಶಾಲಾ ಮಕ್ಕಳನ್ನು ಉದಾಹರಣೆ ನೀಡಿದರು. ಇದನ್ನೂ ಓದಿ: ಟೀ ಶರ್ಟ್ ವಿಚಾರಕ್ಕೆ ಲವರ್ಸ್ ಕಿತ್ತಾಟ – ಮೆಟ್ರೋದಲ್ಲೇ ಬಾಯ್ ಫ್ರೆಂಡ್ ಕೆನ್ನೆಗೆ ಬಾರಿಸಿದ್ಲು
ಹೇಗಿರಬೇಕು ವಿಚಾರಣೆ?: ವಾರದಲ್ಲಿ 5 ದಿನಗಳವರೆಗೆ, ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ಬೆಳಿಗ್ಗೆ 10.30ಕ್ಕೆ ಪ್ರಕರಣಗಳ ವಿಚಾರಣೆಯನ್ನು ಪ್ರಾರಂಭಿಸುತ್ತಾರೆ. ಸಂಜೆ 4ರ ವರೆಗೆ ಕುಳಿತುಕೊಳ್ಳುತ್ತಾರೆ. ಮಧ್ಯಾಹ್ನ 1 ರಿಂದ 2ರ ವರೆಗೆ ಒಂದು ಗಂಟೆಯ ಊಟದ ವಿರಾಮ ತೆಗೆದುಕೊಳ್ಳುತ್ತಾರೆ. ಆದ್ದರಿಂದ ಇನ್ನು ಮುಂದೆ ಸುದೀರ್ಘ ವಿಚಾರಣೆ ಅಗತ್ಯವಿಲ್ಲದಿದ್ದಾಗ ಸುಪ್ರೀಂ ಕೋರ್ಟ್ ಬೆಳಿಗ್ಗೆ 9 ಗಂಟೆಗೇ ಪ್ರಾರಂಭವಾಗಬೇಕು. 11.30ಕ್ಕೆ ಅರ್ಧಗಂಟೆ ವಿರಾಮಕ್ಕಾಗಿ ಎದ್ದೇಳಬೇಕು. ತೀರ್ಪುಗಾರರು ಮತ್ತೆ ವಿಚಾರಣೆ ಪ್ರಾರಂಭಿಸಿ ಮಧ್ಯಾಹ್ನ 2 ಗಂಟೆಗೆ ಮುಕ್ತಾಗೊಳಿಸಬೇಕು. ಇದರಿಂದ ಸಂಜೆ ವೇಳೆ ಹೆಚ್ಚಿನ ಕೆಲಸ ಮಾಡಲು ಸಮಯ ಸಿಗುತ್ತದೆ ಎಂದು ಲಲಿತ್ ಸಲಹೆ ನೀಡಿದರು.
ಯು.ಯು.ಲಲಿತ್ ಮುಂದಿನ ಆಗಸ್ಟ್ 27ರಂದು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಆಗಲಿದ್ದಾರೆ. ಹಾಲಿ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದು, ನವೆಂಬರ್ 8ರ ಮಾತ್ರವೇ ಅಧಿಕಾರದಲ್ಲಿ ಇರುಲಿದ್ದಾರೆ.