ಬೆಂಗಳೂರು: ಲಿಪ್‍ಸ್ಟಿಕ್ ಹಾಕೋತೀರಾ ಫೀಸ್ ಕಟ್ಟೋಕೆ ಆಗೊಲ್ವಾ..?, ಕಾಸ್ಟ್ಲಿ ಮೊಬೈಲ್ ಬಳಸುತ್ತೀರಾ? ಫೀಸ್ ಯಾಕೆ ಕಟ್ಟೊಲ್ಲ ಅಂತ ಪ್ರಶ್ನಿಸಿದ ಮಹಾರಾಣಿ ವಿವಿ ವಿರುದ್ಧ ವಿದ್ಯಾರ್ಥಿನಿಯರು ಆಕ್ರೋಶ ಹೊರಹಾಕಿದ್ದಾರೆ.
Advertisement
ಲಿಪ್‍ಸ್ಟಿಕ್ ಹಾಕೋತೀರಾ ಫೀಸ್ ಕಟ್ಟೋಕೆ ಆಗೊಲ್ವಾ ಅಂತಾರೆ. ಕಾಸ್ಟ್ಲಿ ಮೊಬೈಲ್ ಯೂಸ್ ಮಾಡ್ತೀರ ಫೀಸ್ ಯಾಕೆ ಕಟ್ಟೊಲ್ಲ ಅಂತಿದ್ದಾರೆ. ಅದನ್ನೆಲ್ಲ ಮಾತಾಡೋಕೆ ಅವ್ರು ಯಾರು?. ಬಂದ್, ಪ್ರೊಟೆಸ್ಟ್ ಅಂತ ಹೋದ್ರೆ ಟಿಸಿ ಕೊಡ್ತೀನಿ ಅಂತ ಬೆದರಿಸ್ತಿದ್ದಾರೆ. ಎಲ್ಲರನ್ನೂ ಕ್ಲಾಸ್ ರೂಂ ಒಳಗೆ ಕೂಡಿ ಹಾಕಿದ್ದಾರೆ. ಕಾಲೇಜು ಇದ್ದಿದ್ದು, ಈಗ ವಿವಿ ಮಾಡಿಕೊಂಡಿದ್ದು ಇವರೇ. ಕಾಲೇಜು ಇದ್ದಾಗಲೇ ಫೀಸ್ ಕಡಿಮೆ ಕಡಿಮೆ ಇತ್ತು. ವಿವಿ ಆದ್ಮೇಲೆ ಏಕಾಏಕಿ 1,800 ರೂ. ಹೆಚ್ಚಳ ಮಾಡಿದ್ದಾರೆ. 900 ರೂ. ಇತ್ತು ವಿವಿ ಆಗಿದೆ ಅಂತ ಇಷ್ಟು ಜಾಸ್ತಿ ಮಾಡಿದ್ರೆ ಹೇಗೆ ಫೀಸ್ ಕಟ್ಟೋದು ಎಂದು ಪ್ರಶ್ನಿಸಿದರು.
Advertisement
Advertisement
ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿದ್ದನ್ನು ವಿರೋಧಿಸಿ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಬಂದ್‍ಗೆ ವಿದ್ಯಾರ್ಥಿಗಳು ಕರೆ ಕೊಟ್ಟಿದ್ದಾರೆ. ಇಂದು ತರಗತಿ ಬಹಿಷ್ಕರಿಸಿ ವಿದ್ಯಾರ್ಥಿನಿಯರು ಬಂದ್ ಗೆ ಮುಂದಾಗಿದ್ದರು. ಆದರೆ ಈ ವೇಳೆ ಬೆದರಿಸಿ ತರಗತಿಗೆ ಹಾಜರಾಗುವಂತೆ ಒತ್ತಡ ಹಾಕಿದ್ದಾರೆ. ಒತ್ತಾಯಪೂರ್ವಕರಾಗಿ ತರಗತಿಗೆ ಹಾಜರಾಗುವಂತೆ ಹೇಳಿದ್ದಾರೆ. ಅಲ್ಲದೆ ಪ್ರತಿಭಟನೆಯಲ್ಲಿ ಭಾಗಿಯಾದ್ರೆ ಇಂಟರ್ನಲ್ಸ್ ಕಡಿತಗೊಳಿಸುವ ಬೆದರಿಕೆ ಹಾಕಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಇದನ್ನೂ ಓದಿ: ಟೀ ಶರ್ಟ್ ವಿಚಾರಕ್ಕೆ ಲವರ್ಸ್ ಕಿತ್ತಾಟ – ಮೆಟ್ರೋದಲ್ಲೇ ಬಾಯ್ ಫ್ರೆಂಡ್ ಕೆನ್ನೆಗೆ ಬಾರಿಸಿದ್ಲು
Advertisement
ಬಿಕಾಂ, ಬಿಬಿಎ ಹಾಗೂ ಬಿಎ ವಿದ್ಯಾರ್ಥಿನಿಯರಿಂದ ಶುಲ್ಕ ಕಡಿತಕ್ಕೆ ಆಗ್ರಹಿಸಿರುವ ವಿದ್ಯಾರ್ಥಿನಿಯರು ಕಳೆದ 2 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಈ ಬಗ್ಗೆ ಇಂದು ಮೌಲ್ಯಮಾಪನ ಕುಲಸಚಿವೆ ಅನುರಾಧ ಪ್ರತಿಕ್ರಿಯೆ ನೀಡಿಲ್ಲ. ಯಾವುದೇ ಸಮಸ್ಯೆ ಇಲ್ಲ ಎಂದು ಮಾಧ್ಯಮಗಳ ಕಣ್ಣಿಂದ ತಪ್ಪಿಸಿಕೊಂಡು ಕಛೇರಿ ಒಳಗೆ ಓಡಿಹೋದರು. ಸದ್ಯ 30ಕ್ಕೂ ಹೆಚ್ಚು ಪೊಲೀಸರಿಂದ ಕಾಲೇಜು ಒಳಗೆ ಭದ್ರತೆ ಒದಗಿಸಲಾಗಿದೆ.