ಕಳೆದೆರಡು ವರ್ಷಗಳಲ್ಲಿ ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಹಲವಾರು ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಿವೆ. ಭಾರತೀಯ ಸಿನಿಮಾದಲ್ಲಿ ದಕ್ಷಿಣ ಭಾರತದ ಪುಷ್ಪಾ, RRR ಮತ್ತು ಕೆಜಿಎಫ್-2 ಸಿನಿಮಾಗಳ ಯಶಸ್ಸು ಬಾಲಿವುಡ್ ಮಂದಿಯಲ್ಲಿ ಅಭದ್ರತೆಯನ್ನು ಸೃಷ್ಟಿಸಿದೆ ಎಂಬ ಮಾತು ಬಿ’ಟೌನ್‍ನಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ಹಿನ್ನೆಲೆ ಮಾಧ್ಯಮಗಳು ಬಾಲಿವುಡ್ ಸ್ಟಾರ್ ನವಾಜುದ್ದೀನ್ ಸಿದ್ದಿಕಿ ಅವರನ್ನು ಪ್ರಶ್ನೆ ಮಾಡಿದ್ದಕ್ಕೆ ಖಡಕ್ ಉತ್ತರ ಕೊಟ್ಟಿದ್ದಾರೆ.
ಸಿನಿಮಾ ಯಶಸ್ಸು ಮತ್ತು ವೈಫಲ್ಯದ ಬಗ್ಗೆ ಮುಕ್ತವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ನವಾಜುದ್ದೀನ್ ಸಿದ್ದಿಕಿ, ಒಂದು ಸಿನಿಮಾ ಉತ್ತಮವಾಗಿ ಕಾರ್ಯನಿರ್ವಹಿಸಿದಾಗ ಪ್ರತಿಯೊಬ್ಬರೂ ಸೇರಿಕೊಳ್ಳುತ್ತಾರೆ. ಅದನ್ನು ಬಹುಶಃ ಅರ್ಹತೆಗಿಂತ ಹೆಚ್ಚು ಹೊಗಳುತ್ತಾರೆ. ಹಾಗೆಯೇ ಒಂದು ಚಲನಚಿತ್ರವು ಹಿಟ್ ಆಗದಿದ್ದರೆ, ಅದೇ ಜನರು ಅದನ್ನು ಅರ್ಹತೆಗಿಂತ ಹೆಚ್ಚು ಟೀಕಿಸುತ್ತಾರೆ ಎಂದು ನೇರವಾಗಿ ಹೇಳಿದ್ದಾರೆ. ಇದನ್ನೂ ಓದಿ: ಪ್ಯಾನ್ ಇಂಡಿಯಾ’ – ಸಿನಿಮಾಗಳಿಗೆ ಅಗೌರವ ತೋರುವ ಪದ, ಇದನ್ನು ತೆಗೆದುಹಾಕಬೇಕು: ಸಿದ್ಧಾರ್ಥ್
ಇದು ಫ್ಯಾಷನ್‍ನಂತೆ, ಈಗ ಬಾಲಿವುಡ್ ಚಿತ್ರವು ದೊಡ್ಡ ಹಿಟ್ ಆಗಿದ್ದರೆ ಈ ಎಲ್ಲ ಮಾತುಕತೆಗಳು ಬದಲಾಗುತ್ತವೆ. ಇದು ಕೇವಲ ಪ್ರವೃತ್ತಿ ಎಂದು ನಾನು ಭಾವಿಸುತ್ತೇನೆ. ಇದರಲ್ಲಿ ಅಭದ್ರತೆಯ ಮಾತು ಬರುವುದಿಲ್ಲ ಎಂದು ಉತ್ತರಿಸಿದರು.
ನವಾಜುದ್ದೀನ್ ‘ಟಿಕು ವೆಡ್ಸ್ ಶೇರು’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಕಂಗನಾ ರಣಾವತ್ ಅವರ ನಿರ್ಮಾಣ ಸಂಸ್ಥೆ ಮಣಿಕರ್ಣಿಕಾ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಇದು ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.