ವಾಷಿಂಗ್ಟನ್: ತಣ್ಣಗಾದ ಐಸ್ ಕ್ರೀಂ ಕೊಟ್ಟಿದ್ದಕ್ಕೆ ರೆಸ್ಟೋರೆಂಟ್‍ನಿಂದ ಗ್ರಾಹಕ ಹಣ ವಾಪಾಸ್ ಕೇಳಿರುವ ವಿಚಿತ್ರ ಘಟನೆಯೊಂದು ಸುದ್ದಿಯಾಗಿದೆ.
ಚೀಸ್, ಐಸ್ ಕ್ರೀಂ, ಮಿಲ್ಕ್‍ಶೇಕ್ ಸೇರಿದಂತೆ ಗ್ರಾಹಕನೊಬ್ಬ ಆರ್ಡರ್ ಮಾಡಿದ್ದನು. ಈ ತಿನಿಸುಗಳು ತಣ್ಣಗಾಗಿದೆ, ಹಣ ಮರು ಪಾವತಿಸಿ ಎಂದು ಗ್ರಾಹಕನನ್ನ ಬಳಿ ಕ್ಯಾತೆ ತೆಗೆದಿದ್ದನು ಎಂದು ರೆಸ್ಟೋರೆಂಟ್ ಮಾಲೀಕ ಹಸನ್ ಹಬೀಬ್ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ‘ಬೀಸ್ಟ್’ ಸಿನಿಮಾ ವಿಶೇಷ ಫೋಟೋ ಶೇರ್ ಮಾಡಿದ ಚಿತ್ರತಂಡ
ಇತ್ತೀಚೆಗೆ ಡೆಲಿವರಿ ಸೇವೆ ಬಗ್ಗೆ ಗ್ರಾಹಕರಿಂದ ಅತಿ ಹೆಚ್ಚು ದೂರುಗಳು ಬರುತ್ತಿದ್ದು, ಅವುಗಳಲ್ಲಿ ಕೆಲವು ವಿಚಿತ್ರವಾದ ಪ್ರಕರಣಗಳಾಗಿವೆ. ನಾಲ್ಕು ಮಿಲ್ಕ್‍ಶೇಕ್, ಚೀಸ್‍ಕೇಕ್ ಮತ್ತು ಐಸ್ಕ್ರೀಂ ಅನ್ನು ಆರ್ಡರ್ ಮಾಡಿದ ವ್ಯಕ್ತಿಯೊಬ್ಬರು ಅದಾದ 45 ನಿಮಿಷಗಳ ನಂತರ ಅವರು ಆಹಾರ ತಣ್ಣಗಿರುವ ಕಾರಣ ತಾವು ನೀಡಿದ ಹಣವನ್ನು ಮರುಪಾವತಿ ಮಾಡಬೇಕೆಂದು ದೂರು ನೀಡಿದರು. ಐಸ್‍ಕ್ರೀಂ, ಮಿಲ್ಕ್‍ಶೇಕ್, ಚೀಸ್ ಕೇಕ್ ಎಲ್ಲಾದರೂ ಬಿಸಿಯಾಗಿರುತ್ತದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಯುವಕನ ಜೊತೆಗೆ ವಾಸವಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು
ಕೆಲವೊಮ್ಮೆ ನಾವು ತಪ್ಪುಗಳನ್ನು ಮಾಡುತ್ತೇವೆ. ಟ್ರಾಫಿಕ್‍ನಿಂದಾಗಿ ಅಥವಾ ಇನ್ನಿತರ ಕಾರಣಗಳಿಂದ ಸರಿಯಾದ ಸಮಯದಲ್ಲಿ ಆಹಾರವನ್ನು ಡೆಲಿವರಿ ನೀಡಲು ಆಗುವುದಿಲ್ಲ. ಕೆಲವೊಮ್ಮೆ ನಾವು ಐಟಂಗಳನ್ನು ಕಳೆದುಕೊಳ್ಳುತ್ತೇವೆ ಅಥವಾ ತಪ್ಪು ಐಟಂ ಅನ್ನು ಕಳುಹಿಸುತ್ತೇವೆ. ಆದರೆ ಬದಲಿ ಐಟಂ ಅಥವಾ ಸಂಪೂರ್ಣ ಅರ್ಹ ಮರುಪಾವತಿಯೊಂದಿಗೆ ನಾವು ಅದನ್ನು ಗ್ರಾಹಕರಿಗೆ ಒಪ್ಪಿಸುತ್ತೇವೆ. ಆದರೆ cರು ಹೀಗೆ ವಿಚಿತ್ರವಾದ ಕಾರಣಗಳನ್ನು ನೀಡಿ ಹಣವನ್ನು ಮರುಪಾವತಿ ಮಾಡಲು ದೂರು ನೀಡುವುದು ಇತ್ತೀಚೆಗೆ ಹೆಚ್ಚಾಗಿದೆ. ಐಸ್‌ಕ್ರೀಂ ತಣ್ಣಗಿದೆ ಹಣ ವಾಪಸ್ ಕೊಡಿ ಎಂದು ಹೇಳಿದ್ದು, ಆಶ್ಚರ್ಯವಾಗಿದೆ ಎಂದಿದ್ದಾರೆ.