ಚೆನ್ನೈ: ವಿಶ್ವಕಪ್ ಕ್ರಿಕೆಟ್‌ನಲ್ಲಿ (World Cup Criket) ಬಾಂಗ್ಲಾದೇಶದ (Bangladesh) ವಿರುದ್ಧ ನ್ಯೂಜಿಲೆಂಡ್ (New Zealand) 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಸತತ ಮೂರು ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ 6 ಅಂಕ ಸಂಪಾದಿಸುವ ಮೂಲಕ ಮೊದಲ ಸ್ಥಾನಕ್ಕೆ ಏರಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ 9 ವಿಕೆಟ್ ನಷ್ಟಕ್ಕೆ 245 ರನ್ ಗಳಿಸಿತು. ಸುಲಭದ ಸವಾಲನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಇನ್ನೂ 43 ಎಸೆತಗಳು ಬಾಕಿ ಇರುವಂತೆಯೇ 2 ವಿಕೆಟ್ ನಷ್ಟಕ್ಕೆ 248 ರನ್ ಚಚ್ಚಿ ಗೆಲುವಿನ ನಗೆ ಬೀರಿತು. ಇದನ್ನೂ ಓದಿ: 7-0 ದಾಖಲೆ ಬಗ್ಗೆ ಚಿಂತೆಯಿಲ್ಲ, ಈ ಬಾರಿ ಮುರಿಯುತ್ತೇವೆ: ಅಜಂ ವಿಶ್ವಾಸ
Advertisement
Advertisement
ನ್ಯೂಜಿಲೆಂಡ್ ಪರವಾಗಿ ಕಾನ್ವೆ 45 ರನ್ (59 ಎಸೆತ, 3 ಬೌಂಡರಿ) ಹೊಡೆದು ಔಟಾದರೆ ನಾಯಕ ಕೇನ್ ವಿಲಿಯಮ್ಸನ್ 78 ರನ್(107 ಎಸೆತ, 8 ಬೌಂಡರಿ, 1 ಸಿಕ್ಸರ್) ಹೊಡೆದು ಗಾಯಾಳಾಗಿ ನಿವೃತ್ತರಾದರು.
Advertisement
ಡ್ಯಾರೆಲ್ ಮಿಷೆಲ್ ಔಟಾಗದೇ 89 ರನ್ (67 ಎಸೆತ, 6 ಬೌಂಡರಿ, 4 ಸಿಕ್ಸರ್) ಹೊಡೆದರೆ ಗ್ಲೇನ್ ಫಿಲಿಪ್ಸ್ ಔಟಾಗದೇ 16 ರನ್ ಹೊಡೆದು ಜಯವನ್ನು ತಂದುಕೊಟ್ಟರು.
Advertisement
ಬಾಂಗ್ಲಾ 56 ರನ್ ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಶಕೀಬ್ ಉಲ್ ಹಸನ್ ಮತ್ತು ಮುಷ್ಫಿಕರ್ ರಹೀಂ ಐದನೇ ವಿಕೆಟಿಗೆ 108 ಎಸೆತಗಳಲ್ಲಿ 96 ರನ್ ಜೊತೆಯಾಟವಾಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು.
ನಾಯಕ ಶಕಿಬುಲ್ ಹಸನ್ 40 ರನ್ (51 ಎಸೆತ, 3 ಬೌಂಡರಿ, 2 ಸಿಕ್ಸರ್), ಮುಷ್ಫಿಕರ್ ರಹೀಂ 66 ರನ್ (75 ಎಸೆತ, 6 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು.
ಲೂಕಿ ಫರ್ಗ್ಯೂಸನ್ 3 ವಿಕೆಟ್ ಪಡೆದರೆ ಟ್ರೆಂಟ್ ಬೌಲ್ಟ್ , ಮ್ಯಾಟ್ ಹೆನ್ರಿ ತಲಾ 2 ವಿಕೆಟ್ ಪಡೆದರು.
Web Stories