ಜಮೈಕಾ: ಯುಎಇ ಮತ್ತು ಓಮನ್‍ನಲ್ಲಿ ಅಕ್ಟೋಬರ್-ನವೆಂಬರ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟ್ರೋಫಿಯ ಆನ್‍ಲೈನ್ ವಿಶ್ವದರ್ಶನಕ್ಕೆ ವೆಸ್ಟ್ ಇಂಡೀಸ್ ತಂಡದ ಆಲ್‍ರೌಂಡರ್ ಕಾರ್ಲೋಸ್ ಬ್ರಾಥ್‍ವೈಟ್ ಚಾಲನೆ ನೀಡಿದ್ದಾರೆ.
Advertisement
ಪ್ರತಿವರ್ಷ ವಿಶ್ವಕಪ್‍ಗೂ ಮುನ್ನ ಟ್ರೋಫಿಯನ್ನು ವಿಶ್ವದಾದ್ಯಂತ ಪ್ರದರ್ಶನ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾದಿಂದಾಗಿ ಟ್ರೋಫಿಗೆ ವಿಶ್ವ ಪ್ರವಾಸ ಸಾಧ್ಯವಾಗುತ್ತಿಲ್ಲ. ಇದರ ಬದಲಾಗಿ ಆನ್‍ಲೈನ್ ವಿಶ್ವಪ್ರದರ್ಶನವನ್ನು ಐಸಿಸಿ ಹಮ್ಮಿಕೊಂಡಿದೆ. ಇದನ್ನೂ ಓದಿ: ಟಿ20 ವಿಶ್ವಕಪ್ ಒಂದೇ ಗುಂಪಿನಲ್ಲಿ ಭಾರತ, ಪಾಕಿಸ್ತಾನ
Advertisement
Advertisement
ಈ ಬಾರಿಯ ವಚ್ರ್ಯುವಲ್ ಯಾತ್ರಾ ಕಾರ್ಯಕ್ರಮಕ್ಕೆ ಬ್ರಾಥ್‍ವೈಟ್ ಚಾಲನೆ ನೀಡಿದರು. ಬ್ರಾಥ್‍ವೈಟ್ 2016ರಲ್ಲಿ ನಡೆದ ಟಿ20 ವಿಶ್ವಕಪ್‍ನಲ್ಲಿ ವೆಸ್ಟ್ ಇಂಡೀಸ್ ತಂಡದ ಗೆಲುವಿನ ರೂವಾರಿಯಾಗಿದ್ದರು. ಹಾಗಾಗಿ ಈ ಬಾರಿ ಅವರ ಮೂಲಕ ಆನ್‍ಲೈನ್ ಯಾತ್ರೆಗೆ ಚಾಲನೆ ಕೊಡಿಸಲಾಯಿತು. ಈ ಸಂದರ್ಭ ಮಾತನಾಡಿದ ಬ್ರಾಥ್‍ವೈಟ್, ಈ ಟ್ರೋಫಿಯೊಂದಿಗೆ ನನಗೆ ಹಲವು ನೆನಪುಗಳು ಉಳಿದಿದುಕೊಂಡಿದೆ. ನನ್ನ ಕ್ರಿಕೆಟ್ ಬದುಕಿನ ಮಹಾಸಂಭ್ರಮದ ಕ್ಷಣ ಈ ಟ್ರೋಫಿಯಲ್ಲಿ ಕಾಣಸಿಕ್ಕಿದೆ. ಈ ಟ್ರೋಫಿಯ ಯಾತ್ರೆ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಎಂದರು.
Advertisement
The ICC Men’s T20 World Cup 2021 Trophy Tour begins in the West Indies!
The 2016 champions will be out to retain the crown they won in such dramatic fashion ????
Which @windiescricket star will make the world ???????????????????????????????? ???????????? ???????????????? this time around?#T20WorldCup pic.twitter.com/8kka6EhLt2
— T20 World Cup (@T20WorldCup) August 20, 2021
ಐಸಿಸಿಯು ಆಯೋಜನೆ ಮಾಡಿರುವ ಆನ್‍ಲೈನ್ ಟ್ರೋಫಿಯ ವಿಶ್ವದರ್ಶನದಲ್ಲಿ ವಿಶ್ವದ ಪ್ರತಿಯೊಂದು ದೇಶಕ್ಕೆ ಸಾಗುವ ಅವಕಾಶ ಕೂಡಿ ಬರಲಿ ಎಂದು ಐಸಿಸಿ ಶುಭಕೋರಿದೆ. ಈ ಟ್ರೋಫಿಯು ತ್ರೀಡಿ ಮೂಲಕ ವಚ್ರ್ಯುವಲ್ ಯಾತ್ರೆ ಸಾಮಾಜಿಕ ಜಾಲತಾಣದಲ್ಲಿ ಕಾಣಸಿಗಲಿದೆ. ಇದನ್ನೂ ಓದಿ: ಸಚಿನ್, ಗಂಗೂಲಿ 2007ರ ಟಿ20 ವಿಶ್ವಕಪ್ ಆಡದಂತೆ ಒಪ್ಪಿಸಿದ್ದು ದ್ರಾವಿಡ್: ಟೀಂ ಇಂಡಿಯಾ ಮಾಜಿ ಕೋಚ್
Mark your calendars ????
Get ready for the 2021 ICC Men’s #T20WorldCup bonanza ????
— ICC (@ICC) August 17, 2021
2021ರ ಟಿ20 ವಿಶ್ವಕಪ್ ಈ ಬಾರಿ ಭಾರತದಲ್ಲಿ ನಡೆಸಲು ಐಸಿಸಿ ತೀರ್ಮಾನಿಸಿತ್ತು. ಆದರೆ ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದರಿಂದಾಗಿ ಟೂರ್ನಿಯನ್ನು ಯುಎಇ ಮತ್ತು ಓಮನ್‍ನಲ್ಲಿ ಅಕ್ಟೋಬರ್ 17ರಿಂದ ನವೆಂಬರ್ 14ರ ವರೆಗೆ ನಡೆಸಲು ಐಸಿಸಿ ನಿರ್ಧರಿಸಿದೆ.