ಬಳ್ಳಾರಿ: ನಾನು ಕರ್ನಾಟಕದ ಜನರ ಸೇವೆ ಮಾಡುವ, ಜನರ ಹಿತ ಕಾಯುವ ನಿಯತ್ತಿನ ನಾಯಿ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ.
ಜಿಲ್ಲೆಯಲ್ಲಿಂದು ವಿವಿಧ ಕಾಮಗಾರಿಗಳಿಗೆ ಸಿಎಂ ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ಇದೇ ವೇಳೆ ವಿಮ್ಸ್ ಆಸ್ಪತ್ರೆಯ ಆವರಣದಲ್ಲಿ 400 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದ್ದಾರೆ. ಇದನ್ನೂ ಓದಿ: 1,337 ಕೋಟಿ ಪೈಕಿ ಶೇ.10 ರಷ್ಟು ದಂಡವನ್ನು ಠೇವಣಿ ಇಡಿ – ಗೂಗಲ್‌ಗೆ NCALT ಆದೇಶ
Advertisement
Advertisement
ನಿಯತ್ತಿನ ಪಾಠ ಹೇಳಿದ ಸಿಎಂ: ಇವತ್ತು ಪ್ರಾಮಾಣಿಕವಾಗಿ, ನಿಯತ್ತಾಗಿ ಕೆಲಸ ಮಾಡುವ ಅವಶ್ಯಕತೆಯಿದೆ. ಅದಕ್ಕೆ ಅನ್ವಯವಾಗುವಂತೆ ಹಲವು ಪ್ರಾಣಿಗಳನ್ನ ನೋಡಿದ್ದೇವೆ. ಒಂದೊಂದು ಪ್ರಾಣಿಗಳಲ್ಲೂ ಒಂದೊಂದು ಗುಣವನ್ನ ಕಂಡುಕೊಂಡಿದ್ದೇವೆ. ಉದಾಹರಣೆಗೆ ನಾಯಿ (Dog). ನಾಯಿ ಅತ್ಯಂತ ನಿಯತ್ತಿನ ಪ್ರಾಣಿ. ತನ್ನ ಸಾಕುವ ಮಾಲೀಕನಿಗೆ ನಿಯತ್ತಾಗಿರುತ್ತೆ. ಮನೆಯ ಯಜಮಾನನ ಕಡೆಯವರು ಬಂದ್ರೆ ಬಾಲ ಅಲ್ಲಾಡಿಸುತ್ತೆ. ಆದ್ರೆ ಮನೆಗೆ ಕನ್ನ ಹಾಕುವರು, ಕಳ್ಳರು ಬಂದ್ರೆ ಯಾವುದೇ ಕಾರಣಕ್ಕೂ ಬಿಡಲ್ಲ ಎಂದು ನಿಯತ್ತಿನ ಪಾಠ ಹೇಳಿದ್ದಾರೆ.
Advertisement
Advertisement
ನಾನು ನಿಯತ್ತಿನ ನಾಯಿ, ತೋಳ ಅಲ್ಲ: ಇವತ್ತು ನಾನು ಕರ್ನಾಟಕದ ಜನತೆಯ ಸೇವೆ ಮಾಡುವ ನಿಯತ್ತಿನ ನಾಯಿ, ಜನರ ಹಿತ ಕಾಯುವ ನಿಯತ್ತಿನ ನಾಯಿ ಎಂದು ಹೇಳಿಕೊಳ್ಳಲು ಇಚ್ಚಿಸುತ್ತೇನೆ. ಕಳ್ಳತನ ಮಾಡಲು ಬಂದವರನ್ನ ಒಳಗಡೆ ಬಿಡದ ನಾಯಿಯೇ ಹೊರತು ಅಧಿಕಾರ ಸಿಕ್ಕಿದೆ ಅಂತಾ ಜನರನ್ನು ತಿನ್ನುವ ತೋಳ ಅಲ್ಲ. ಕೆಲವು ತೋಳಗಳು ನಮ್ಮ ನಡುವೆಯೇ ಇವೆ. ನಾಯಿ ವೇಷದಲ್ಲಿ ತೋಳಗಳೂ ಇವೆ. ಅವು ಯಾವೆಂದು ಜನರಿಗೆ ಗೊತ್ತಿದೆ ಎಂದು ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಕೆಂಪೇಗೌಡ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ನನ್ನ ಶರ್ಟ್ ತೆಗೆದು ನಿಲ್ಲಿಸಿದ್ದಾರೆ: ಯುವತಿಯ ಆರೋಪ
ಇದೇ ವೇಳೆ ಬಳ್ಳಾರಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾತನಾಡಿದ ಸಿಎಂ, ಜಿಲ್ಲೆಯ ಅಭಿವೃದ್ಧಿ ವೇಗವಾಗಿ ಸಾಗುತ್ತಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಜಿಂದಾಲ್ ಸಂಸ್ಥೆ (Jindal Steel Power) ಸಹಯೋಗದಲ್ಲಿ 400 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಆಗುತ್ತಿದೆ. ಅಲ್ಲದೆ, ಬಳ್ಳಾರಿ (Bellary) ಹಾಗೂ ರಾಯಚೂರು (Raichur) ಭಾಗದಲ್ಲಿ ಅಪೌಷ್ಟಿಕತೆ ಸಮಸ್ಯೆ ಕಾಡುತ್ತಿರುವುದು ಗಮನಕ್ಕೆ ಬಂದಿದೆ. ಮಕ್ಕಳ ಅಪೌಷ್ಟಿಕತೆ ನಿವಾರಣೆ ಮಾಡಲು ಸರ್ಕಾರ ಯೋಜನೆ ರೂಪಿಸಿದ್ದು, ಪೌಷ್ಟಿಕ ಆಹಾರವನ್ನು ಸರ್ಕಾರವೇ ಕೊಡುತ್ತಿದೆ ಎಂದು ಅಭಯ ನೀಡಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) `ನಾಯಿ ಮರಿ’ ಪದ ಬಳಸಿ ಟೀಕೆ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ, ಅದಕ್ಕೆ ಜನರೇ ತಕ್ಕ ಉತ್ತರ ಕೊಡ್ತಾರೆ. ಆ ಹೇಳಿಕೆ ಸಿದ್ದರಾಮಯ್ಯ ಅವರ ವ್ಯಕ್ತಿತ್ವ ತೋರಿಸುತ್ತದೆ. ನಾಯಿ ನಿಯತ್ತಿನ ಪ್ರಾಣಿ. ನಾನು ಜನರಿಗೆ ನಿಯತ್ತಾಗಿ ಕೆಲಸ ಮಾಡುತ್ತಿರುವೆ. ಜನರ ಪರವಾಗಿಯೇ ನಿಯತ್ತನ್ನ ಉಳಿಸಿಕೊಂಡು ಹೋಗುವೆ. ಅವರಂತೆ ಸಮಾಜ ಒಡೆಯುವ ಕೆಲಸ ಮಾಡಲ್ಲ. ಸೌಭಾಗ್ಯ ಕೊಡುತ್ತೇವೆ ಅಂತಾ ದೌರ್ಭಾಗ್ಯ ಕೊಟ್ಟಿಲ್ಲ. ಸುಳ್ಳು ಹೇಳೋ ಕೆಲಸ ಮಾಡಲ್ಲ. ಬೇಕಿದ್ರೆ ಸಿದ್ದರಾಮಯ್ಯ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲ್ ಹಾಕಿದ್ದಾರೆ.
ಬೆಳಗಾವಿಯಲ್ಲಿ (Belagavi Session) 15 ದಿನ ಸದನ ನಡೆಯಿತು. ಅಲ್ಲಿ ಚರ್ಚೆ ಮಾಡಲ್ಲ. ಅದಕ್ಕಿಂತಾ ಪವಿತ್ರ ವೇದಿಕೆ ಬೇಕಿತ್ತಾ? ಅಲ್ಲಿ ಏನೂ ಮಾತನಾಡದೇ ಹೊರಗೆ ರಾಜಕೀಯವಾಗಿ ಹೇಳಿಕೆ ನೀಡುತ್ತಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k