ನಿಮ್ಮ ತಂದೆ ಇರಬೇಕಿತ್ತು ನಿನ್ನ ಸಾಧನೆ ನೋಡಲು: ಜಗ್ಗೇಶ್

Public TV
2 Min Read
jaggesh tweet

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ‘ಯಜಮಾನ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ. ಈಗ ಈ ಟೀಸರ್ ಬಗ್ಗೆ ನವರಸನಾಯಕ ಜಗ್ಗೇಶ್ ಅವರು, “ಈ ಸಾಧನೆ ನೋಡಲು ನಿಮ್ಮ ತಂದೆ ಇರಬೇಕಿತ್ತು” ಎಂದು ಟ್ವೀಟ್ ಮಾಡಿದ್ದಾರೆ.

ದರ್ಶನ್ ನಟನೆಯ ಯಜಮಾನ ಚಿತ್ರದ ಟ್ರೈಲರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅಲ್ಲದೇ ಯೂಟ್ಯೂಬ್ ಸಂಸ್ಥೆ ತನ್ನ ಟ್ವಿಟ್ಟರ್ ಖಾತೆಯಲ್ಲಿ, “ಈ ಅತಿಥಿ ಯಾವಾಗಲೂ ಗ್ರ್ಯಾಂಡ್ ಎಂಟ್ರಿ ಪಡೆಯುತ್ತಾರೆ. ಈ ಟ್ರೈಲರ್ ನೋಡಿದ್ದಾಗ ನಿಮಗೆ ಗೊತ್ತಾಗುತ್ತೆ” ಎಂದು ಚಿತ್ರದ ಫೋಟೋಗಳನ್ನು ಹಾಗೂ ಟ್ರೈಲರ್ ಲಿಂಕ್ ಹಾಕಿ ಟ್ವೀಟ್ ಮಾಡಿದೆ. ಇದನ್ನೂ ಓದಿ: ಆನೆ ನಡೆದಿದ್ದೆ ದಾರಿ ಎಂದು ಎದ್ದು ಬಂದ ಯಜಮಾನ..!

ಬಳಿಕ ಜಗ್ಗೇಶ್ ಅವರು ಈ ಟ್ವೀಟ್ ಸ್ಕ್ರೀನ್ ಶಾಟ್ ತೆಗೆದು ತಮ್ಮ ಟ್ವಿಟ್ಟರಿನಲ್ಲಿ ಹಾಕಿ, ಅದಕ್ಕೆ “ಹೃದಯತುಂಬಿ ಬಂತು ಕನ್ನಡ ಚಿತ್ರರಂಗದ ರಹದಾರಿ ಕಂಡು. ಹಾರಲಿ ಏರಲಿ ಕನ್ನಡದ ಬಾವುಟ. ನಾನು ಚಿತ್ರಮಂದಿರದಲ್ಲೇ ನೋಡಿ ಬೆಂಬಲಿಸುವೆ ಯಜಮಾನ. ಇಡೀ ಚಿತ್ರತಂಡಕ್ಕೆ ನನ್ನ ಶುಭಾಶಯಗಳು. ದೇವರು ನಿಮಗೆ ಒಳ್ಳೆಯದು ಮಾಡಲಿ” ಎಂದು ದರ್ಶನ್ ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿ ಶುಭ ಕೋರಿದ್ದಾರೆ. ಇದನ್ನೂ ಓದಿ: ಯೂಟ್ಯೂಬ್ ಟ್ರೆಂಡಿಂಗ್‍ನಲ್ಲಿ ‘ಶಿವನಂದಿ’ ನಂ.1

ಈ ಟ್ವೀಟ್‍ಗೆ ನಟ ದರ್ಶನ್ ಅವರು “ನಿಮ್ಮ ಪ್ರೀತಿ ಹಾಗೂ ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಅಣ್ಣಾ” ಎಂದು ರೀ-ಟ್ವೀಟ್ ಮಾಡಿದ್ದಾರೆ. ಬಳಿಕ ಜಗ್ಗೇಶ್ ಅವರು ಕೂಡ, “ಧನ್ಯವಾದಗಳು ಸಹೋದರ. ತಂದೆಗೆ ತಕ್ಕ ಮಗ. ನಿಮ್ಮ ತಂದೆ ಇರಬೇಕಿತ್ತು ನಿನ್ನ ಸಾಧನೆ ನೋಡಲು. ಸೀನಣ್ಣನ ಆತ್ಮ ಸ್ವರ್ಗದಿಂದಲೇ ನಿನ್ನ ಹರಸುತ್ತಿದೆ. ಅಮ್ಮನಿಗೆ ನನ್ನ ನಮಸ್ಕಾರ ತಿಳಿಸು. ದೇವರು ನಿನಗೆ ಆಶೀರ್ವಾದ ಮಾಡಲಿ” ಎಂದು ರೀ-ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ದರ್ಶನ್ ರಶ್ಮಿಕಾ ಜೋಡಿಯ ಡ್ಯುಯೆಟ್ ಹಾಡು ರಿಲೀಸ್

ರವಿಶಂಕರ್, ಡಾಲಿ ಧನಂಜಯ್, ಠಾಕೂರ್ ಅನುಪ್ ಸಿಂಗ್ ಸೇರಿದಂತೆ ಖಡಕ್ ಖಳನಟರ ದಂಡು ಚಿತ್ರದಲ್ಲಿದ್ದು, ದೇವರಾಜ್, ಸಾಧುಕೋಕಿಲ, ಶಿವರಾಜ್ ಕೆ.ಆರ್ ಪೇಟೆ, ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ರಶ್ಮಿಕಾ ಮಂದಣ್ಣ, ತಾನ್ಯ ಹೋಪ್ ದರ್ಶನ್‍ಗೆ ಜೋಡಿಯಾಗಿದ್ದಾರೆ. ಚಿತ್ರಕ್ಕೆ ಪಿ. ಕುಮಾರ್ ಹಾಗೂ ವಿ.ಹರಿಕೃಷ್ಣ ನಿರ್ದೇಶನವಿದ್ದು, ಶೈಲಜಾ ನಾಗ್ ಹಾಗೂ ಬಿ. ಸುರೇಶ್ ನಿರ್ಮಾಣದಲ್ಲಿ ಸಿನಿಮಾ ಅದ್ಧೂರಿಯಾಗಿ ಮೂಡಿ ಬಂದಿದೆ. ಮಾರ್ಚ್ 1ರಂದು ಚಿತ್ರಮಂದಿರದಲ್ಲಿ ಯಜಮಾನನ ದರ್ಶನವಾಗಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *