Connect with us

Bengaluru City

ಆನೆ ನಡೆದಿದ್ದೆ ದಾರಿ ಎಂದು ಎದ್ದು ಬಂದ ಯಜಮಾನ..!

Published

on

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ಯಜಮಾನ ಚಿತ್ರದ `ಶಿವನಂದಿ ನಿಂತ ನೋಡು ಯಜಮಾನ’ ಹಾಡುಗಳು ಮೆರವಣಿಗೆ ಹೊರಟಿರುವ ಹೊತ್ತಲ್ಲಿ ಯೂಟ್ಯೂಬ್ ಅಂಗಳಕ್ಕೆ ಟ್ರೈಲರ್ ಲಗ್ಗೆ ಇಟ್ಟಿದೆ.

`ಆಕಾಶಕ್ಕೆ ತಲೆಕೊಟ್ಟು ಭೂಮಿಗೆ ಬೆವರಿಳಿಸಿ ನಿಯತ್ತಿನಿಂದ ಕಟ್ಟಿರುವ ಸ್ವಂತ ಬ್ರ್ಯಾಂಡೋ’ ಎಂದು ಖಡಕ್ ಡೈಲಾಗ್ ಹೊಡೆಯುತ್ತಾ ದರ್ಶನ್ ಟ್ರೈಲರ್ ನಲ್ಲಿ ಅದ್ಧೂರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಯಜಮಾನರ ನಯಾ ಅವತಾರ, ಭರ್ಜರಿ ಆ್ಯಕ್ಷನ್‍ಗೆ ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ. ಇದನ್ನೂ ಓದಿ: ಯೂಟ್ಯೂಬ್ ಟ್ರೆಂಡಿಂಗ್‍ನಲ್ಲಿ ‘ಶಿವನಂದಿ’ ನಂ.1

ಈ ಚಿತ್ರ ಫ್ಯಾಮಿಲಿ ಎಂಟರ್ ಟೈನ್‍ಮೆಂಟ್ ಆಗಿದ್ದು, ಜಬರ್ದಸ್ತ್ ಆ್ಯಕ್ಷನ್ ಸೀನ್ ಹಾಗೂ ಖಡಕ್ ಡೈಲಾಗ್ ಚಿತ್ರದಲ್ಲಿ ಇದೆ. ಟ್ರೈಲರ್ ಬಿಡುಗಡೆಯಾದ 30 ನಿಮಿಷಕ್ಕೆ 3 ಲಕ್ಷಕ್ಕೂ ಹೆಚ್ಚು ವ್ಯೂ ಪಡೆದುಕೊಂಡಿದೆ. ಯಜಮಾನ ಟ್ರೈಲರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇದನ್ನೂ ಓದಿ: ದರ್ಶನ್ ರಶ್ಮಿಕಾ ಜೋಡಿಯ ಡ್ಯುಯೆಟ್ ಹಾಡು ರಿಲೀಸ್

ರವಿಶಂಕರ್, ಡಾಲಿ ಧನಂಜಯ್, ಠಾಕೂರ್ ಅನುಪ್ ಸಿಂಗ್ ಸೇರಿದಂತೆ ಖಡಕ್ ವಿಲನ್ಸ್ ಗಳ ದಂಡು ಚಿತ್ರದಲ್ಲಿದ್ದು, ದೇವರಾಜ್, ಸಾಧುಕೋಕಿಲ, ಶಿವರಾಜ್ ಕೆ.ಆರ್ ಪೇಟೆ, ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ರಶ್ಮಿಕಾ ಮಂದಣ್ಣ, ತಾನ್ಯ ಹೋಪ್ ದರ್ಶನ್‍ಗೆ ಜೋಡಿಯಾಗಿದ್ದಾರೆ.

ಚಿತ್ರಕ್ಕೆ ಪೋನ್‍ಕುಮಾರ್ ಹಾಗೂ ವಿ.ಹರಿಕೃಷ್ಣ ನಿರ್ದೇಶನವಿದ್ದು, ಶೈಲಜಾ ನಾಗ್ ಹಾಗೂ ಬಿ. ಸುರೇಶ್ ನಿರ್ಮಾಣದಲ್ಲಿ ಸಿನಿಮಾ ಅದ್ಧೂರಿಯಾಗಿ ಮೂಡಿ ಬಂದಿದೆ. ಮಾರ್ಚ್ 01ರಂದು ಚಿತ್ರಮಂದಿರದಲ್ಲಿ ಯಜಮಾನನ ದರ್ಶನವಾಗಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv