ಬೆಂಗಳೂರು: ನನ್ನ ಮಗನನ್ನು ನಾನೇ ಪೊಲೀಸರಿಗೆ ಸರೆಂಡರ್ ಮಾಡಿಸ್ತೇನೆ. ನಿನ್ನೆ ರಾತ್ರಿ ಮಗ ಆತನ ಅಮ್ಮನಿಗೆ ಕರೆ ಮಾಡಿದ್ದನು. ಈ ವೇಳೆ ನಾನೇ ಸರೆಂಡರ್ ಆಗುವಂತೆ ಹೇಳಿದ್ದಾಗಿ ಶಾಂತಿನಗರ ಕ್ಷೇತ್ರದ ಶಾಸಕ ಹ್ಯಾರಿಸ್ ಹೇಳಿದ್ದಾರೆ.
ಯುವಕನ ಮೇಲೆ ರೆಸ್ಟೊರೆಂಟ್ ನಲ್ಲಿ ಹಲ್ಲೆ ನಡೆಸಿದ ಬಳಿಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ತಲೆಮರೆಸಿಕೊಂಡಿದ್ದನು. ಈ ಕುರಿತು ಇದೀಗ ಹ್ಯಾರಿಸ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನನ್ನ ಮಗ ಫೋನ್ ಸ್ವಿಚ್ ಆಫ್ ಮಾಡ್ಕೊಂಡಿದ್ದನು. ನಿನ್ನೆ ರಾತ್ರಿ ಅವ್ನ ಅಮ್ಮನಿಗೆ ಫೋನ್ ಮಾಡಿದ್ದನು. ಆಗ ಸರೆಂಡರ್ ಆಗುವಂತೆ ನಾನೇ ಮಗನಿಗೆ ಹೇಳಿದ್ದೇನೆ ಅಂದಿದ್ದಾರೆ.
- Advertisement 2
ಗೂಂಡಾಗಿರಿ ನಡೆಸಿ ಹಲವು ಗಂಟೆಗಳೇ ಕಳೆದ್ರೂ ಅರೆಸ್ಟ್ ಆಗದ ಮಹಮ್ಮದ್ ನಲಪಾಡ್ ಇದೀಗ ಅಶೋಕ ನಗರ ಸ್ಟೇಷನ್ ಪೊಲೀಸರು ಮನೆಗೆ ಬರ್ತಿದ್ದಂತೆ ಶಾಸಕರು ಕಥೆ ಕಟ್ಟಿದ್ದಾರೆ. ಶಾಸಕನ ರೌಡಿ ಮಗನ ಚೇಲಾಗಳನ್ನಷ್ಟೇ ಅರೆಸ್ಟ್ ಮಾಡಿ ಬೆಂಗಳೂರು ಪೊಲೀಸ್ರ ನಾಟಕಾವಾಡ್ತಿದ್ದಾರಾ?. ಅಲ್ಲದೇ ಶಾಸಕರಿಗೆ ಮಗ ಎಲ್ಲಿದ್ದಾನೆ ಅನ್ನೋದು ಗೊತ್ತಿದೆ ಅದ್ಮೇಲೆ ಅರೆಸ್ಟ್ ಮಾಡೋಕೆ ಪೊಲೀಸರಿಗೇನು? ಸರೆಂಡರ್ ಮೂಲಕ ಮಹಮ್ಮದ್ ನಲಪಾಡ್ ಬಚಾವ್ ಮಾಡೋಕೆ ಪೊಲೀಸ್ರ ಕುತಂತ್ರ ಹೂಡ್ತಿದ್ದಾರಾ ಎಂಬ ಅನುಮಾನಗಳು ಹುಟ್ಟಿವೆ. ಇದನ್ನೂ ಓದಿ: ನಲಪಾಡ್ ಹಲ್ಲೆ ಕೇಸ್ ಸಿಸಿಬಿಗೆ- ದಿನ ಕಳೆದ್ರೂ ಹ್ಯಾರಿಸ್ ಪುತ್ರನ ಬಂಧಿಸದ ಖಾಕಿ
- Advertisement 3
- Advertisement 4
ಏನಿದು ಘಟನೆ?: ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಯುಬಿ ಸಿಟಿ ರೆಸ್ಟೊರೆಂಟ್ ನಲ್ಲಿ ಊಟ ಮಾಡುವ ವಿಷಯಕ್ಕಾಗಿ ಕಿರಿಕ್ ತೆಗೆದು ಯುವಕನೋರ್ವನ ಮೇಲೆ ಹಲ್ಲೆ ನಡೆಸಿದ್ದಾನೆ. ಉದ್ಯಮಿ ಲೋಕ್ನಾಥ್ ಪುತ್ರ ವಿದ್ವತ್ ಹಲ್ಲೆಗೊಳಗಾದ ಯುವಕನಾಗಿದ್ದು, ಇವರು ಇತ್ತೀಚೆಗೆ ವಿದ್ವತ್ ಸಿಂಗಾಪೂರ್ನಲ್ಲಿ ಪದವಿ ಮುಗಿಸಿ ನಗರಕ್ಕೆ ಆಗಮಿಸಿದ್ದರು. ಶನಿವಾರ ರಾತ್ರಿ ಸುಮಾರು 11 ಗಂಟೆಗೆ ವಿದ್ವತ್ ಊಟಕ್ಕೆಂದು ಯುಬಿ ಸಿಟಿ ರೆಸ್ಟೊರೆಂಟ್ ಗೆ ತೆರಳಿದ್ದರು. ಈ ವೇಳೆ ಊಟ ಮಾಡುವ ವಿಷಯಕ್ಕಾಗಿ ವಿದ್ವತ್ ಮತ್ತು ಮಹಮ್ಮದ್ ನಲಪಾಡ್ ನಡುವೆ ಜಗಳ ನಡೆದಿದೆ. ಈ ಜಗಳ ತಾರಕಕ್ಕೇರಿ ಹ್ಯಾರಿಸ್ ಅವರ ಪುತ್ರ ಮಹಮ್ಮದ್ ಮತ್ತು ಆತನ ಸ್ನೇಹಿತರು ವಿದ್ವತ್ ಮುಖಕ್ಕೆ ಪಂಚ್ ಕೊಟ್ಟು, ಮನಸ್ಸೋ ಇಚ್ಛೆ ಥಳಿಸಿದ್ದಾರೆ.
ಹಲ್ಲೆಗೊಳಗಾದ ವಿದ್ವತ್ ರನ್ನು ನಗರದ ಮಲ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಷ್ಟಕ್ಕೆ ಸುಮ್ಮನಾಗದ ಶಾಸಕರ ಪುತ್ರ ಮತ್ತು ಆತನ ಗ್ಯಾಂಗ್ ಆಸ್ಪತ್ರೆಗೆ ನುಗ್ಗಿ ವಿದ್ವತ್ ಮೇಲೆ ಹಲ್ಲೆ ನಡೆಸಿದ್ದಾರೆ. ಆಸ್ಪತ್ರೆಯಲ್ಲಿದ್ದ ವಿದ್ವತ್ ಸಹೋದರ ಸಾತ್ವಿಕ್ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಇದೀಗ ವಿದ್ವತ್ ಮಲ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡಿಯುತ್ತಿದ್ದಾರೆ. ಈ ಸಂಬಂಧ ಮಹಮ್ಮದ್ ನಲಪಾಡ್ ಹ್ಯಾರಿಸ್ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆ ಪ್ರಮುಖ ಆರೋಪಿಯಾಗಿರುವ ಶಾಸಕರ ಪುತ್ರ ಮಹಮ್ಮದ್ ನಲಪಾಡ್ ಪರಾರಿಯಾಗಿದ್ದಾನೆ.