ರಾಯಚೂರು: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (KRP) ಸ್ಥಾಪನೆ ಬಳಿಕ ಮೊದಲ ಬಾರಿಗೆ ರಾಯಚೂರಿನ ಸಿಂಧನೂರಿನಲ್ಲಿ ಬಹಿರಂಗ ಸಮಾವೇಶ ನಡೆಸಿದ ಮಾಜಿ ಸಚಿವ ಜನಾರ್ದನ ರೆಡ್ಡಿ (Janardhana Reddy) ರಾಜ್ಯದಲ್ಲಿನ ರಾಷ್ಟ್ರೀಯ ಪಕ್ಷಗಳು ತಲೆ ಬಾಗುವಂತೆ ಮಾಡುತ್ತೇನೆ ಎಂದು ಸವಾಲ್ ಹಾಕಿದ್ದಾರೆ.
Advertisement
ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ಎರಡೂ ಪಕ್ಷಗಳೂ ನನ್ನ ಗುರಿ. ಅದಕ್ಕಾಗಿ ಹಿಂದುಳಿದ 18 ರಿಂದ 20 ಜಿಲ್ಲೆಗಳಲ್ಲಿ ನಮ್ಮ ಅಭ್ಯರ್ಥಿಗಳನ್ನ ಕಣಕ್ಕಿಳಿಸುತ್ತೇವೆ. ನನ್ನ ಮಗಳು ತನ್ನೆಲ್ಲಾ ಕೆಲಸಗಳನ್ನ ಬಿಟ್ಟು ರಾಜಕೀಯಕ್ಕೆ ಬಂದಿದ್ದಾಳೆ. ಪಕ್ಷವನ್ನ ಬಲ ಪಡಿಸಲು ತನ್ನೆಲ್ಲಾ ಕೆಲಸಗಳನ್ನ ಬಿಟ್ಟು ವಿದೇಶದಿಂದ ಬಂದಿದ್ದಾಳೆ. ನಮ್ಮ ಕುಟುಂಬದಿಂದ ಯರ‍್ಯಾರು ಚುನಾವಣೆಗೆ ಸ್ಪರ್ಧಿಸುತ್ತಾರೆ ಅನ್ನೋದನ್ನ ಶೀಘ್ರದಲ್ಲೇ ಬಹಿರಂಗ ಪಡಿಸುತ್ತೇನೆ ಎಂದು ಹೇಳಿದ್ದಾರೆ. ಇನ್ನೂ ಓದಿ: ರಾಜಕೀಯ ಮರು ಪ್ರವೇಶ ಖಚಿತ – ನನ್ನ ಜೊತೆ ಯಾರು ಇರ್ತಾರೆ, ಯಾರು ಬರ್ತಾರೆ ಡಿ.25ಕ್ಕೆ ತಿಳಿಸುತ್ತೇನೆ: ಜನಾರ್ದನ ರೆಡ್ಡಿ
Advertisement
Advertisement
ಅಪವಾದ ಹೊರಲು ಸಿದ್ಧನಿರಲಿಲ್ಲ:
ನಮ್ಮ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವವರೆಗೆ ನಾನು ನಿದ್ರಿಸುವುದಿಲ್ಲ. 2018 ರಲ್ಲಿಯೇ ಹೊಸ ಪಕ್ಷ ಮಾಡುವ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಆದರೆ ಅಂದು ಬಿಜೆಪಿ ಯಡಿಯೂರಪ್ಪರನ್ನ (BS Yediyurappa) ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ನಾನು ಪಾರ್ಟಿ ಮಾಡಿದ್ದರೆ ಯಡಿಯೂರಪ್ಪನವರಿಗೆ ಅಡ್ಡ ಬಂದ ಎನ್ನುವ ಅಪವಾದ ಬರುತ್ತಿತ್ತು. ನಾನು ಆ ಅಪವಾದ ಹೊರಲು ನಾನು ಸಿದ್ಧನಿರಲಿಲ್ಲ ಎಂದು ಮನಬಿಚ್ಚಿ ಮಾತನಾಡಿದ್ದಾರೆ. ಇನ್ನೂ ಓದಿ: ಯಾರೇ ಬಂದ್ರು ಹಳೆಮೈಸೂರು ಭಾಗದಲ್ಲಿ ಜೆಡಿಎಸ್‍ನ್ನು ಅಲ್ಲಾಡಿಸಲು ಆಗಲ್ಲ: ನಿಖಿಲ್ ಕುಮಾರಸ್ವಾಮಿ
Advertisement
ನನಗಿನ್ನೂ ಸಣ್ಣ ವಯಸ್ಸು:
ನನಗಿನ್ನೂ ಸಣ್ಣ ವಯಸ್ಸು 5 ವರ್ಷ ಕಾದು ನೋಡೋಣ ಎಂದು ಹೊಸಪಕ್ಷ ಮಾಡಿದ್ದೇನೆ. ನಾನು ಜನರನ್ನ ನಂಬಿ ರಾಜಕೀಯಕ್ಕೆ ಬಂದಿದ್ದೇನೆ. ಪ್ರಾದೇಶಿಕ ಪಕ್ಷಗಳಿಗೆ ನಮ್ಮ ಭಾಗದ ಜನರ ದುಃಖ ದುಮ್ಮಾನಗಳು ತಿಳಿದಿರುತ್ತವೆ. ಜನರ ಮನೆ ಬಾಗಿಲಿಗೆ ಹೋಗಿ ಕೆಲಸ ಮಾಡುವ ಗುರಿಯನ್ನು ನಮ್ಮ ಪಕ್ಷ ಹೊಂದಿದೆ. ಸಿಂಧನೂರು ಸೇರಿ ಹಲವಾರು ಕ್ಷೇತ್ರದ ಅಭ್ಯರ್ಥಿಗಳನ್ನ ಒಂದೆರಡು ವಾರದಲ್ಲಿ ಘೋಷಣೆ ಮಾಡ್ತೇನೆ ಎಂದು ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k