ಮೈಸೂರು ದಸರಾ (Dasara) ಉತ್ಸವಕ್ಕೆ ದಿನಗಣನೆ ಶುರುವಾಗಿದೆ. ವಿಶ್ವವಿಖ್ಯಾತ ಮೈಸೂರು ದಸರಾವನ್ನು ಸಂಗೀತ ನಿರ್ದೇಶಕ ಡಾ. ಹಂಸಲೇಖ (Hamsalekha) ಉದ್ಘಾಟಿಸಲಿದ್ದಾರೆ. ದಸರಾ ಹಂಸಲೇಖ ಉದ್ಘಾಟನೆ ಮಾಡುವ ಬಗ್ಗೆ ಸಿಎಂ ಸಿದ್ಧರಾಮಯ್ಯ (Cm Siddaramaih) ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ, ನಾದಬ್ರಹ್ಮ ಹಂಸಲೇಖ ಸಂತಸ ವ್ಯಕ್ತಪಡಿಸಿದ್ದಾರೆ.
Advertisement
ದಸರಾ ಹಬ್ಬ ಸಮೀಪಿಸುತ್ತಿದೆ. ದಸರಾ ಉತ್ಸವಕ್ಕೆ ಕೌಂಟ್ ಡೌನ್ ಶುರುವಾಗಿದೆ. ಇದೆಲ್ಲದರ ನಡುವೆ ದಸರಾ ಉದ್ಘಾಟಿಸುವ ಅವಕಾಶ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಸಿಕ್ಕಿದೆ. ಈ ವಿಚಾರವಾಗಿ ಹಂಸಲೇಖ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಾನು ಕಲಾ ಪ್ರತಿನಿಧಿ ಆಗಿದ್ದೇನೆ. ಎಲ್ಲರ ಪರವಾಗಿ ನಾನು ದಸರಾ ದೀಪ ಹಚ್ಚುತ್ತೇನೆ. ದಸರಾ ಉತ್ಸವಕ್ಕೆ ಹಾಡನ್ನ ಮಾಡೋಕೆ ಈಗ ಆಸೆ ಉಕ್ಕುತ್ತಾ ಇದೆ. ಬದುಕಿದು ಕನ್ನಡ ಭಿಕ್ಷೆ. ಇಲ್ಲಿ ಸಮರಸವೇ ನಮ್ಮ ರಕ್ಷೆ ಎಂದು ಸಾಲುಗಳನ್ನ ಹಂಸಲೇಖ ಮಾಧ್ಯಮದ ಮುಂದೆ ಹೇಳಿದ್ದರು. ಈ ಮೂಲಕ ತಮ್ಮ ಖುಷಿಯನ್ನ ವ್ಯಕ್ತಪಡಿಸಿದ್ದರು. ಇದನ್ನೂ ಓದಿ:ಒಂಟಿಯಾಗಿರುವುದು ಉತ್ತಮ ಎಂದ ದರ್ಶನ್- ಕಿಚ್ಚನ ಜೊತೆ ಮತ್ತೆ ಒಂದಾಗಲ್ವಾ ದಚ್ಚು?
Advertisement
Advertisement
ಮೈಸೂರು ದಸರಾ (Mysuru Dasara) ಉದ್ಘಾಟಿಸುವ ಬಗ್ಗೆ ಸಿಎಂ ನನಗೆ ಕರೆ ಮಾಡಿ ಹೇಳಿದ್ದರು. ನೀವು ಅವಿರೋಧ ಆಗಿ ಆಯ್ಕೆ ಆಗಿದ್ದೀರಾ ಅಂತ ಸಿ.ಎಂ ಹೇಳಿದ ಮೇಲೆ ನಾನು ಒಪ್ಪಿಕೊಂಡೆ ಎಂದು ಹಂಸಲೇಖ ಮಾತನಾಡಿದರು.
Advertisement
ಕಳೆದ ವರ್ಷ ನನಗೆ ಆರೋಗ್ಯದಲ್ಲಿ ಏರುಪೇರಾಗಿತ್ತು. ಅಂದು ನನಗೆ ಸಿಎಂ ಸಿದ್ಧರಾಮಯ್ಯ- ಡಿಸಿಎಂ ಶಿವಕುಮಾರ್ ಅವರು ಒಳ್ಳೆಯದು ಬಯಸಿದರು. ಅವರಿಗೆ ನನ್ನ ಧನ್ಯವಾದಗಳು. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂದು ಹಂಸಲೇಖ ಹೆಮ್ಮೆಯಿಂದ ಮಾತನಾಡಿದ್ದರು. ರಾಜ್ಯದಲ್ಲಿ ಹಲವು ಸಿದ್ದಾಂತಗಳಿವೆ. ಆದರೆ ಕನ್ನಡ ಅಂತ ಹೇಳಿದ ತಕ್ಷಣ ಎಲ್ಲರೂ, ಎಲ್ಲಾ ಪಕ್ಷದವರು ಒಂದಾಗಬೇಕು ಎಂದು ಹಂಸಲೇಖ ಮಾತನಾಡಿದ್ದರು.
ಅಂದ್ಹಾಗೆ ಮೈಸೂರಿನ ದಸರಾ ಉತ್ಸವ ಅಕ್ಟೋಬರ್‌ನಲ್ಲಿ ನಡೆಯಲಿದ್ದು, ನಾದಬ್ರಹ್ಮ ಹಂಸಲೇಖ ಅವರು ಕೂಡ ಈ ವರ್ಷ ಸಮಾರಂಭದ ಭಾಗವಾಗಲಿದ್ದಾರೆ.