ಬೆಂಗಳೂರು: ನಮ್ಮ ಸಮೀಕ್ಷೆಯ ಪ್ರಕಾರ ಕರ್ನಾಟಕ ಚುನಾವಣೆಯಲ್ಲಿ(Karnataka Election) ನಾವು 136 ಕ್ಷೇತ್ರ ಗೆಲ್ಲುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumr) ಹೇಳಿದ್ದಾರೆ.
ಪ್ರೆಸ್ ಕ್ಲಬ್‌ನಲ್ಲಿ ಕರ್ನಾಟಕ ಚುನಾವಣೆ, ವೋಟರ್ ಐಡಿ ಹಗರಣ, ಪ್ರಸ್ತುತ ರಾಜಕೀಯ ವಿಚಾರದ ಬಗ್ಗೆ ಡಿಕೆಶಿ ಮಾತನಾಡುತ್ತಿದ್ದರು. ಕಾಂಗ್ರೆಸ್‌ಗೆ 136 ಸ್ಥಾನ ಸಿಗಲಿದೆ. ಬಿಜೆಪಿಗೆ 66 -70 ಸ್ಥಾನ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
ಪ್ರೆಸ್ ಕ್ಲಬ್ ಆಫ್ ಬೆಂಗಳೂರಿನ ಸದಸ್ಯರೊಡನೆ ಸಂವಾದ ನಡೆಸಿದೆ. ಶ್ರೀ @PriyankKharge, ಪ್ರೆಸ್ ಕ್ಲಬ್ ಅಧ್ಯಕ್ಷರಾದ ಶ್ರೀ ಶ್ರೀಧರ ಆರ್, ಪ್ರಧಾನ ಕಾರ್ಯದರ್ಶಿ ಶ್ರೀ ಮಲ್ಲಪ್ಪ ಬಿ.ಪಿ ಮತ್ತು ಇತರ ಸದಸ್ಯರ ಉಪಸ್ಥಿತಿಯಲ್ಲಿ ಪ್ರಸಕ್ತ ವಿದ್ಯಮಾನ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತುಕತೆ ನಡೆಸಲಾಯಿತು. pic.twitter.com/dWtjdYaFv9
— DK Shivakumar (@DKShivakumar) December 15, 2022
Advertisement
ಕುಮಾರಸ್ವಾಮಿ(Kumarasswamy) ಜೊತೆ ಎಷ್ಟು ಅಂತಾ ಕುಸ್ತಿ ಮಾಡಲಿ? ಆ ವೇಳೆ ಅವಾಗ ಏನೋ ಹುಡುಗ ಇದ್ದೆ. ಕುಸ್ತಿ ಮಾಡಿದ್ದೆವು. ಈಗ ಕೂದಲು ಎಲ್ಲಾ ಬೆಳ್ಳಗೆ ಅಗಿದೆ. ಈವಾಗ ಕುಸ್ತಿ ಮಾಡೋಕೆ ಆಗುತ್ತಾ? ಆದರೆ ಅವರ ವಿರುದ್ದ ಸೈದ್ಧಾಂತಿಕವಾಗಿ ಕುಸ್ತಿ ಮಾಡುತ್ತೇನೆ ಎಂದು ಹೇಳಿ ಡಿಕೆಶಿ ನಕ್ಕಿದ್ದಾರೆ. ಇದನ್ನೂ ಓದಿ: ಮಗನಿಂದಲೇ ತಾಯಿಗೆ ಮಹಾಮೋಸ – ಮಂಚದ ಮೇಲೆ ಮಲಗಿಸಿಕೊಂಡು ಕೋರ್ಟ್‍ಗೆ ಕರೆತಂದ ಮಗಳು
Advertisement
Advertisement
ಆಪರೇಷನ್ ಕಮಲಕ್ಕೆ ಒಳಗಾದ ಕೆಲ ಶಾಸಕರು,ಮರಳಿ ಕಾಂಗ್ರೆಸ್ ಸೇರುತ್ತಾರಾ ಎಂಬ ಪ್ರಶ್ನೆಗೆ, ಅದನ್ನ ಈಗ ಹೇಳಲು ಆಗಲ್ಲ. ಸಂಕ್ರಾಂತಿ ಬರಲಿ ಗೊತ್ತಾಗುತ್ತದೆ. ಗುಟ್ಟು ಗುಟ್ಟಾಗಿಯೇ ಇರುತ್ತದೆ ಎಂದು ಡಿಕೆಶಿ ಮಾರ್ಮಿಕ ಉತ್ತರ ನೀಡಿದರು.
ಸಿದ್ದರಾಮಯ್ಯ(Siddaramaiah) ಜೊತೆಗಿನ ಕಿತ್ತಾಟದ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಗ್ರೆಸ್ ಪಾರ್ಟಿ ಅವರವರ ಭಾವನೆಯನ್ನು ವಿಶ್ವಾಸ ವ್ಯಕ್ತಪಡಿಸುವುದಕ್ಕೆ ಅಡ್ಡಿ ಪಡಿಸುವುದಿಲ್ಲ. ಸಿದ್ದರಾಮಯ್ಯ ನಾನು ಕಿತ್ತಾಟ ಮಾಡಿದ ಸಣ್ಣ ಉದಾಹರಣೆ ತೋರಿಸಿ ನೋಡೋಣ. ನಿಮಗೆ ಬೇಕು ಎಂಬ ಕಾರಣಕ್ಕೆ ಸಿಎಂ ವಿಚಾರ ಮಾತನಾಡುತ್ತೀರಿ ಎಂದು ಮಾಧ್ಯಮಗಳನ್ನೇ ಡಿಕೆಶಿ ದೂರಿದರು.