– ಭ್ರಷ್ಟಾಚಾರಮುಕ್ತ ಆಡಳಿತ ಕೊಡಿ ಎಂದ ಡಿಸಿಎಂ
ರಾಮನಗರ: ನಾವು ಯಾರನ್ನೂ ಲಂಚ (Bribe) ಕೇಳಿಲ್ಲ, ಲಂಚ ತೆಗೆದುಕೊಳ್ಳುವುದೂ ಇಲ್ಲ. ನೀವೂ ಯಾರೂ ಲಂಚ ತೆಗೆದುಕೊಳ್ಳದೆ ಜನರ ಕೆಲಸ ಮಾಡಬೇಕು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D.K.Shivakumar) ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
Advertisement
ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ನೇತೃತ್ವದಲ್ಲಿ ರಾಮನಗರದಲ್ಲಿ (Ramanagara) ನಡೆದ ಜಿಲ್ಲಾ ಮಟ್ಟದ ಕೆಡಿಪಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಧಿಕಾರಿಗಳಿಗೆ ಹಲವು ಸಲಹೆ ಸೂಚನೆ ನೀಡಿದರು. ಜನರ ಕೆಲಸ ಮಾಡುವ ಸಲುವಾಗಿ ಜನ ನಮಗೂ ನಿಮಗೂ ಅವಕಾಶ ಕೊಟ್ಟಿದ್ದಾರೆ. ಸಮಸ್ಯೆ ಬಗೆಹರಿಯದಿದ್ದಾಗ ಜನರು ರಾಜಕಾರಣಿಗಳ ಹತ್ತಿರ ಬರುತ್ತಾರೆ. ನೀವು ಕಾನೂನು ವಿರುದ್ಧವಾಗಿ ಕೆಲಸ ಮಾಡಬೇಡಿ. ಕಾನೂನು ಚೌಕಟ್ಟಿನಲ್ಲಿ ಜನರ ಕೆಲಸ ಮಾಡಿಕೊಡಿ ಎಂದರು. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಮೊಬೈಲ್ ಬಳಸುತ್ತಿಲ್ಲವಂತೆ!- ಕಾರಣ ಇಲ್ಲಿದೆ
Advertisement
Advertisement
ಜನ ನಮ್ಮನ್ನು ಸುಮ್ಮನೆ ಆಯ್ಕೆ ಮಾಡಿಲ್ಲ. ರಾಜ್ಯದ ಆಡಳಿತದಲ್ಲಿ ಬದಲಾವಣೆ ಮಾಡುತ್ತೇವೆ, ಒಳ್ಳೆಯ ಆಡಳಿತ ಕೊಡುತ್ತೇವೆ ಎಂದು ಸರ್ಕಾರ ತಂದಿದ್ದಾರೆ. ಹಿಂದೆ ಮೈತ್ರಿ ಸರ್ಕಾರ ಇತ್ತು. ಆಮೇಲೆ ಬಿಜೆಪಿ (BJP) ಆಪರೇಷನ್ ಮಾಡಿ ಸರ್ಕಾರ ರಚನೆ ಮಾಡಿತು. ಆದರೆ ಯಾರೂ ಉತ್ತಮ ಆಡಳಿತ ಕೊಡಲಿಲ್ಲ. ಬಿಜೆಪಿ ಅವಧಿಯಲ್ಲಿ ಭ್ರಷ್ಟಾಚಾರ (Corruption) ಜಾಸ್ತಿ ಆಯಿತು. ಇದರಿಂದ ಜನ ರೋಸಿ ಹೋಗಿ ನಮ್ಮನ್ನು ಅಧಿಕಾರದಲ್ಲಿ ಕೂರಿಸಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ಕೇಂದ್ರದ ಅಕ್ಕಿ ಬೇಕಿದ್ದರೆ ನಮ್ಮನ್ನು ಕೇಳಿಯೇ ಘೋಷಣೆ ಮಾಡ್ಬೇಕು: ಪ್ರಲ್ಹಾದ್ ಜೋಶಿ
Advertisement
ನಾನು ಯಾರನ್ನೂ ವರ್ಗಾವಣೆ (Transfer) ಮಾಡುವುದಿಲ್ಲ. ನಿಮ್ಮ ಹತ್ತಿರ ಕೆಲಸ ಹೇಗೆ ಮಾಡಿಸಬೇಕು ಎಂದು ನನಗೆ ಗೊತ್ತಿದೆ. ವರ್ಗಾವಣೆ ಒಂದೇ ಸಮಸ್ಯೆಗೆ ಪರಿಹಾರ ಅಲ್ಲ. ನಮ್ಮ ಅನುಭವದಲ್ಲಿ ಕೆಲಸ ಹೇಗೆ ಮಾಡಿಸಬೇಕೆಂಬುದು ಗೊತ್ತಿದೆ, ಮಾಡಿಸುತ್ತೇನೆ. ಪ್ರತಿಯೊಬ್ಬರು ನಿಮ್ಮ ಸಂಪೂರ್ಣ ಮಾಹಿತಿ ಕೊಡಿ. ಎಲ್ಲಾ ಕಚೇರಿಯಲ್ಲೂ ಬಯೋಮೆಟ್ರಿಕ್ ಸಿಸ್ಟಮ್ ಇರಬೇಕು. ಎಷ್ಟು ಹೊತ್ತಿಗೆ ಆಫೀಸ್‌ಗೆ ಬರುತ್ತೀರಿ, ಹೋಗುತ್ತೀರಿ ಎಂದು ದಾಖಲಾಗಬೇಕು ಎಂದು ಸೂಚನೆ ನೀಡಿದರು. ಇದನ್ನೂ ಓದಿ: ಜುಲೈನಲ್ಲಿ ಮಂಡಿಸೋ ಬಜೆಟ್ ಗಾತ್ರ 30-35 ಸಾವಿರ ಕೋಟಿ ಹೆಚ್ಚಳ ಆಗುತ್ತೆ: ಸಿದ್ದರಾಮಯ್ಯ
ಬೆಸ್ಕಾಂ (BESCOM) ಅಧಿಕಾರಿಗಳು ಸರ್ಕಾರದ ಮಹತ್ವದ ಯೋಜನೆ ಗೃಹಜ್ಯೋತಿ (Gruhajyothi) ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ. ಯರ‍್ಯಾರು ನೋಂದಣಿ ಆಗಿಲ್ಲ ಅದನ್ನು ನೋಂದಣಿ ಮಾಡಿಸಿ. ನೀವೇ ಖುದ್ದಾಗಿ ಭೇಟಿ ನೀಡಿ ನೋಂದಣಿ ಮಾಡಿಸಿ. ಬಿಜೆಪಿಯವರ ಕಾಲದಲ್ಲೇ ವಿದ್ಯುತ್ ದರ ಹೆಚ್ಚಳ ಆಗಿರೋದು. ಆದರೆ ನಮ್ಮ ಸರ್ಕಾರದ ವಿರುದ್ಧ ಅಪಪ್ರಚಾರ ಆಗುತ್ತಿದೆ. ಅದನ್ನು ಜನರಿಗೆ ತಿಳಿಸಬೇಕು. ನನ್ನ ಕನಸಿನ ಯೋಜನೆ ಒಂದಿದೆ. ಎರಡು-ಮೂರು ಪಂಚಾಯಿತಿ ಸೇರಿಸಿ ಒಳ್ಳೆಯ ಶಾಲೆ ಮಾಡಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಅತ್ಯುತ್ತಮ ಶಾಲೆ ನಿರ್ಮಾಣ ಆಗಬೇಕು. ನವೋದಯ ಮಾದರಿಯಲ್ಲಿ ಹಳ್ಳಿ ಮಕ್ಕಳಿಗೆ ಶಿಕ್ಷಣ ಸಿಗಬೇಕು. ಕ್ಲಸ್ಟರ್ ಮಟ್ಟದಲ್ಲಿ ಶಾಲೆ ನಿರ್ಮಾಣ ಆಗಬೇಕು. ಇದು ಇಡೀ ರಾಜ್ಯಕ್ಕೆ ಅನ್ವಯ ಆಗುವ ಹಾಗೆ ಯೋಜನೆ ಮಾಡುತ್ತೇವೆ. ರಾಮನಗರದಲ್ಲಿ ಪ್ರಾಯೋಗಿಕ ಆರಂಭ ಆಗಬೇಕು. ಇದಕ್ಕೆ ಶಿಕ್ಷಣ ಇಲಾಖೆ ಬೇಕಾದ ಸಿದ್ಧತೆ ಮಾಡಿಕೊಳ್ಳಿ ಎಂದು ತಿಳಿಸಿದರು. ಇದನ್ನೂ ಓದಿ: 10 ಕೆಜಿ ಅಕ್ಕಿ ಕೊಡದೇ ಇದ್ರೆ ಸಿದ್ದರಾಮಯ್ಯ ನಂ.1 ಸುಳ್ಳುಗಾರ ಎಂದು ತಿಳಿಸುತ್ತೇವೆ: ಎನ್ ರವಿಕುಮಾರ್
ತಾಲೂಕು ಕಚೇರಿಗಳಲ್ಲಿ ಭ್ರಷ್ಟಾಚಾರದ ಬಗ್ಗೆ ಒಂದು ಬೋರ್ಡ್ ಹಾಕಬೇಕು. ಎಲ್ಲಾದರೂ ಲಂಚ ಕೇಳಿದರೆ ಯಾರನ್ನು ಸಂಪರ್ಕ ಮಾಡಬೇಕು, ಯಾರಿಗೆ ದೂರು ಕೊಡಬೇಕು ಎಂದು ಒಂದು ಬೋರ್ಡ್ ಹಾಕಿ. ಆಡಳಿತದಲ್ಲಿ ಭ್ರಷ್ಟಾಚಾರ ಮುಕ್ತ ಮಾಡಿ. ಜಿಲ್ಲೆಯಲ್ಲಿ ಕ್ರೈಂ ಬಗ್ಗೆ ಪೊಲೀಸ್ ಇಲಾಖೆ ಎಚ್ಚರಿಕೆ ವಹಿಸಿಬೇಕು. ಜಿಲ್ಲೆಯಲ್ಲಿ ಯಾವುದೇ ಪ್ರೈವೆಟ್ ಕ್ಲಬ್ ಇರಬಾರದು. ಮನೆಗಳಲ್ಲಿ, ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಪಾರ್ಟಿ ಮಾಡುವವರ ಮೇಲೆ ಗಮನ ಹರಿಸಬೇಕು. ಮಾದಕ ವಸ್ತುಗಳ ಬಳಕೆಗೆ ಕಡಿವಾಣ ಹಾಕಬೇಕು. ಅಲ್ಲದೇ ಬೆಂಗಳೂರಿನಿಂದ (Bengaluru) ಕಸ ತಂದು ಕನಕಪುರ ರಸ್ತೆ ಪಕ್ಕ ಹಾಕುತ್ತಿದ್ದಾರೆ. ಅದರ ಬಗ್ಗೆ ಗಮನಹರಿಸಿ ಎಲ್ಲಾ ಕಡೆ ಸಿಸಿ ಕ್ಯಾಮರಾ ಅಳವಡಿಕೆ ಮಾಡಿ ಎಂದು ಸೂಚಿಸಿದರು. ಇದನ್ನೂ ಓದಿ: ವಿಶ್ವ ಡ್ರಗ್ಸ್ ನಿಷೇಧ ದಿನ- ಶಾಲಾ ಕಾಲೇಜುಗಳಲ್ಲಿ ಪೊಲೀಸರಿಂದ ಜಾಗೃತಿ ಕಾರ್ಯಕ್ರಮ
ಸರ್ಕಾರ ಐದು ಗ್ಯಾರಂಟಿಗಳ (Guarantee Scheme) ಘೋಷಣೆ ಮಾಡಿದೆ. ಉಚಿತ ಬಸ್ ಯೋಜನೆಗೆ ಕೆಲವೇ ದಿನಗಳಲ್ಲಿ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡುತ್ತಾರೆ. ಗೃಹಜ್ಯೋತಿಯ ನೋಂದಣಿ ಕೂಡಾ ನಡೆಯುತ್ತಿದೆ. ಕೆಲವು ಕಡೆ ಹಣ ವಸೂಲಿ ಮಾಡುತ್ತಿರುವುದು ಕೇಳಿಬರುತ್ತಿದೆ. ಈ ಬಗ್ಗೆ ಅಧಿಕಾರಿಗಳು ಎಚ್ಚರವಹಿಸಿ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಆಹ್ವಾನ ಆಗುತ್ತಿದೆ. ಗ್ರಾಮ ಒನ್, ಡಿಜಿಟಲ್ ಸೇವಾ ಕೇಂದ್ರಗಳಲ್ಲಿ ಅರ್ಜಿ ಹಾಕಬೇಕು. ಗೃಹಲಕ್ಷ್ಮಿ ಯೋಜನೆ ಅರ್ಜಿ ಸಂಪೂರ್ಣ ಉಚಿತ. ಯಾವುದೇ ಕಾರಣಕ್ಕೂ ಯಾರೂ ಹಣ ಕೊಡಬಾರದು. ಎಲ್ಲಾ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸಲಹೆ ನೀಡಿದರು. ಇದನ್ನೂ ಓದಿ: ಪೊಲೀಸರು ನನ್ನನ್ನ ಒದ್ದು ಒಳಗೆ ಹಾಕಿದ್ರು – ಇಂಟರೆಸ್ಟಿಂಗ್ ಸಂಗತಿ ಹಂಚಿಕೊಂಡ ಸಿಎಂ