ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ(Jammu and Kashmir) 370 ನೇ ವಿಧಿಯನ್ನು(Article 370) ಮರುಸ್ಥಾಪಿಸುವ ಭರವಸೆಯನ್ನು ನಾನು ನೀಡುವುದಿಲ್ಲ. ಸುಳ್ಳು ಭರವಸೆಗಳನ್ನು ನೀಡುವುದರಲ್ಲಿ ನನಗೆ ನಂಬಿಕೆಯಿಲ್ಲ ಎಂದು ಕಾಂಗ್ರೆಸ್‌ನ ಮಾಜಿ ನಾಯಕ ಗುಲಾಂ ನಬಿ ಆಜಾದ್(Ghulam Nabi Azad) ಅವರು ಭಾನುವಾರ ಹೇಳಿದರು.
ಉತ್ತರ ಕಾಶ್ಮೀರದ ಬಾರಾಮುಲ್ಲಾ ಪಟ್ಟಣದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಆಜಾದ್, 370 ನೇ ವಿಧಿಯನ್ನು ಮರುಸ್ಥಾಪಿಸಲು ಲೋಕಸಭೆಯಲ್ಲಿ ಸುಮಾರು 350 ಮತಗಳು ಮತ್ತು ರಾಜ್ಯಸಭೆಯಲ್ಲಿ 175 ಮತಗಳು ಬೇಕು. ಇದು ಯಾವುದೇ ರಾಜಕೀಯ ಪಕ್ಷಗಳು ಹೊಂದಿರದ ಅಥವಾ ಎಂದಿಗೂ ಪಡೆಯದಿರುವ ಸಂಖ್ಯೆ. ಕಾಂಗ್ರೆಸ್ 50 ಕ್ಕಿಂತ ಕಡಿಮೆ ಸ್ಥಾನಗಳಿಗೆ ಕುಸಿದಿದೆ. ಆದರೂ ಅವರು 370 ನೇ ವಿಧಿಯನ್ನು ಮರುಸ್ಥಾಪಿಸುತ್ತೇವೆ ಎಂದು ಹೇಳಿ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು.
ನಮ್ಮ ರಾಜಕೀಯ ಅಜೆಂಡಾದಲ್ಲಿ ರಾಜ್ಯತ್ವ, ಭೂಮಿ ಮತ್ತು ಸ್ಥಳೀಯರಿಗೆ ಉದ್ಯೋಗಗಳನ್ನು ನೀಡುವುದೇ ಸೇರಿವೆ. ಏಕೆಂದರೆ ಇವು ಸಾಧಿಸಬಹುದಾದ ವಿಚಾರಗಳು. ಗೃಹ ಸಚಿವರು ತಂದ 370 ನೇ ವಿಧಿಯನ್ನು ರದ್ದುಗೊಳಿಸುವ ನಿರ್ಣಯದ ಪರವಾಗಿ ಮತ ಚಲಾಯಿಸಿದ್ದೇನೆ ಎಂದು ಕೆಲವರು ನನ್ನನ್ನು ದೂಷಿಸಿದ್ದಾರೆ. ಆದರೆ ನಾನು ರದ್ದತಿಯ ವಿರುದ್ಧ ಮತ ಹಾಕಿದ್ದೇನೆ. ಸಂಸತ್ತಿನ ಕೆಲಸದ ಬಗ್ಗೆ ತಿಳಿಯದ ಈ ಜನರು, ನಾನು 370 ನೇ ವಿಧಿಯ ವಿರುದ್ಧ ಮತ ಹಾಕಿದ್ದೇನೆ ಎಂದು ಹೇಳುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ – ಉದ್ಧವ್ ಬಣದ ಐವರು ಅರೆಸ್ಟ್, 40 ಮಂದಿ ವಿರುದ್ಧ FIR
ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಣಿವೆ ಪ್ರದೇಶದಲ್ಲಿ 4 ಹಾಗೂ ಜಮ್ಮು ವಿಭಾಗದಲ್ಲಿ 3 ಹೊಸ ಜಿಲ್ಲೆಗಳನ್ನು ರಚಿಸಲಾಗಿದೆ. ಆ ಅವಧಿಯಲ್ಲಿ ನಾನು ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿದ್ದೇನೆ. ಚುನಾವಣೆ ಸಂದರ್ಭದಲ್ಲಿ ನನಗೆ 4 ಮತ ಬಿದ್ದರೂ, ಲಕ್ಷಗಟ್ಟಲೆ ಮತ ಪಡೆದರೂ ಜನರಿಗೆ ಮೋಸ ಮಾಡುವುದಿಲ್ಲ ಎಂದು ಸಾರ್ವಜನಿಕ ಸಭೆಗೆ ಭರವಸೆ ನೀಡಿದರು. ಇದನ್ನೂ ಓದಿ: 21 ವರ್ಷಗಳ ಬಳಿಕ ಈಡೇರಿದ ಸಂಕಲ್ಪ- ಕೊನೆಗೂ ಗಡ್ಡ ತೆಗೆಸಿಕೊಂಡ ವ್ಯಕ್ತಿ