ಭೋಪಾಲ್: ನನ್ನ ಹುಟ್ಟುಹಬ್ಬದಂದು(Birthday) ಪ್ರತಿ ಬಾರಿಯೂ ನನ್ನ ತಾಯಿಯ(Mother) ಬಳಿ ತೆರಳಿ ಅವರ ಪಾದ ಸ್ಪರ್ಶಿಸಿ ಆಶೀರ್ವಾದ ಪಡೆಯುತ್ತಿದ್ದೆ. ಆದರೆ ಈ ಬಾರಿ ಅದು ಸಾಧ್ಯವಾಗಿಲ್ಲ. ಆದರೆ ಇಂದು ಬುಡಕಟ್ಟು ಪ್ರದೇಶಗಳಲ್ಲಿ ಹಾಗೂ ಹಳ್ಳಿಗಳಲ್ಲಿ ಕಷ್ಟಪಟ್ಟು ದುಡಿಯುವ ಲಕ್ಷಾಂತರ ಮಂದಿ ತಾಯಂದಿರು ನನ್ನನ್ನು ಆಶೀರ್ವದಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ.
ಮಧ್ಯಪ್ರದೇಶದ(Madhya Pradesh) ಶಿಯೋಪುರದಲ್ಲಿ ಸ್ವಸಹಾಯ ಗುಂಪುಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೋದಿ ತಮ್ಮ ತಾಯಿಯನ್ನು ನೆನೆಸಿಕೊಂಡು, ಈ ದಿನ ನಾನು ಸಾಮಾನ್ಯವಾಗಿ ನನ್ನ ತಾಯಿಯ ಬಳಿ ಹೋಗಿ ಆಶೀರ್ವಾದ ಪಡೆಯುತ್ತಿದ್ದೆ. ಆದರೆ ಇಂದು ನಾನು ಆಕೆಯ ಬಳಿ ಹೋಗಲು ಸಾಧ್ಯವಾಗಲಿಲ್ಲ ಎಂದರು.
Advertisement
Advertisement
ಕಳೆದ ಶತಮಾನದ ಭಾರತ ಮತ್ತು ಈ ಶತಮಾನದ ನವಭಾರತದ ನಡುವೆ ಅಗಾಧ ವ್ಯತ್ಯಾಸವಿದೆ. ಈಗಿನ ನವಭಾರತದಲ್ಲಿ ನಾರಿ ಶಕ್ತಿ ಪ್ರಾತಿನಿಧ್ಯವಾಗಿ ಬಂದಿದೆ. ಪಂಚಾಯತ್ ಭವನದಿಂದ ರಾಷ್ಟ್ರಪತಿ ಭವನದವರೆಗೆ ಮಹಿಳಾ ಶಕ್ತಿಯ ಧ್ವಜ ಹಾರಾಡುತ್ತಿದೆ ಎಂದು ಪ್ರಧಾನಿ ಹೇಳಿದರು. ಇದನ್ನೂ ಓದಿ: 70 ವರ್ಷಗಳ ನಂತರ ಭಾರತಕ್ಕೆ ಮರಳಿದ ಚೀತಾ – ನಮೀಬಿಯಾದ 8 ಚೀತಾಗಳನ್ನು ಬಿಡುಗಡೆ ಮಾಡಿದ ಮೋದಿ
Advertisement
ಕಳೆದ 8 ವರ್ಷಗಳಲ್ಲಿ, ನಾವು ಸ್ವಸಹಾಯ ಗುಂಪುಗಳನ್ನು ಸಬಲೀಕರಣಗೊಳಿಸಲು ಎಲ್ಲಾ ರೀತಿಯಲ್ಲೂ ಸಹಾಯ ಮಾಡಿದ್ದೇವೆ. ಇಂದು ದೇಶಾದ್ಯಂತ 8 ಕೋಟಿಗೂ ಹೆಚ್ಚು ಮಹಿಳೆಯರು ಈ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ. ಈ ಅಭಿಯಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಗ್ರಾಮೀಣ ಮನೆಯಿಂದ ಕನಿಷ್ಠ ಒಬ್ಬ ಸಹೋದರಿಯನ್ನು ಹೊಂದಲು ನಾವು ಗುರಿಯಿಟ್ಟಿದ್ದೇವೆ ಎಂದು ತಿಳಿಸಿದರು.
Advertisement
ನಮ್ಮ ಸರ್ಕಾರ ಗ್ರಾಮೀಣ ಆರ್ಥಿಕತೆಯಲ್ಲಿ ಮಹಿಳಾ ಉದ್ಯಮಿಗಳಿಗೆ ಹೊಸ ಸಾಧ್ಯತೆಗಳನ್ನು ಸೃಷ್ಟಿಸಲು ನಿರಂತರವಾಗಿ ಕೆಲಸ ಮಾಡುತ್ತಿದೆ. ‘ಒಂದು ಜಿಲ್ಲೆ, ಒಂದು ಉತ್ಪನ್ನ’ ಯೋಜನೆಯ ಮೂಲಕ ನಾವು ಪ್ರತಿ ಜಿಲ್ಲೆಯಿಂದ ಸ್ಥಳೀಯ ಉತ್ಪನ್ನಗಳನ್ನು ದೊಡ್ಡ ಮಾರುಕಟ್ಟೆಗಳಿಗೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದೇವೆ ಎಂದರು. ಇದನ್ನೂ ಓದಿ: ಬ್ಯಾಂಕುಗಳಿಗೆ ಸ್ಥಳೀಯ ಭಾಷಿಕರನ್ನೇ ನೇಮಿಸಿ- ನಿರ್ಮಲಾ ಸೀತಾರಾಮನ್ ಸಲಹೆ