-ಪ್ರೇಮ್ ಪಂಚಿಂಗ್ ಲಿರಿಕ್ಸ್, ಶಂಕರ್ ಮಹಾದೇವನ್ ಸೂಪರ್ ವಾಯ್ಸ್
ಬೆಂಗಳೂರು: ಸ್ಯಾಂಡಲ್‍ವುಡ್‍ನ ಬಹುನಿರೀಕ್ಷೆಯ ಸಿನಿಮಾ `ದಿ ವಿಲನ್’. ಸೆಟ್ಟೇರಿದಾಗಿನಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸಖತ್ ಸೌಂಡ್ ಮಾಡುತ್ತಿರುವ ಈ ಚಿತ್ರ ಟೀಸರ್‍ನಿಂದ ಸೃಷ್ಟಿಸಿರುವ ಹವಾ ಅಷ್ಟಿಷ್ಟಲ್ಲ. ಸದ್ಯ ಈ ಚಿತ್ರದ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದೆ.
‘ಮಚ್ಚು ಗಿಚ್ಚು ಹಿಡಿದವನಲ್ಲ, ಆದ್ರೂ ಹವಾ ಇಟ್ಟವನಲ್ಲ, ಕೋಟೆ ಕಟ್ಟಿ ಮೆರೆದವನಲ್ಲ ಆದ್ರೂ ರಾಜ್ಯ ಆಳುತ್ತವನಲ್ಲ’ ಎಂದು ಸಾಗುವ ಈ ಹಾಡು ಜೋಗಿ ಪ್ರೇಮ್ ಲೇಖನದಲ್ಲಿ ಮೂಡಿ ಬಂದಿದೆ. ಶಂಕರ್ ಮಹಾದೇವನ್ ಕಂಠಸಿರಿಯಲ್ಲಿ ಮೂಡಿಬಂದಿರುವ ವಿಲನ್ ಟೈಟಲ್ ಟ್ರ್ಯಾಕ್ ಕೇಳುಗರಿಗೆ ಸಖತ್ ಕಿಕ್ ಕೊಡುತ್ತಿದೆ.
Advertisement
ರಿಲೀಸ್ ಆದ ಒಂದು ಗಂಟೆಯಲ್ಲಿ 1 ಲಕ್ಷಕ್ಕೂ ಅಧಿಕ ವ್ಯೂ ಪಡೆದುಕೊಂಡಿದೆ. ಈ ಹಾಡಿನಲ್ಲಿ ಶಿವಣ್ಣ ಹಾಗೂ ಸುದೀಪ್ ಇಬ್ಬರು ಇರ್ತಾರಾ ಇಲ್ಲವೋ ಅನ್ನೋದನ್ನ ಪ್ರೇಮ್ ಸಸ್ಪೆನ್ಸ್ ಆಗಿಟ್ಟಿದ್ದಾರೆ. ಆದರೆ ರಿಲೀಸ್ ಆಗಿರುವ ಲಿರಿಕಲ್ ವಿಡಿಯೋದಲ್ಲಿ ಶಿವಣ್ಣ ಹಾಗೂ ಸುದೀಪ್ ಇಬ್ಬರು ಇರುವ ಮೇಕಿಂಗ್‍ನ ಬಳಸಿಕೊಂಡಿದ್ದಾರೆ.