ನವದೆಹಲಿ: ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಅವರನ್ನು ನನ್ನ ಜೊತೆಗೆ ಲೈವ್ ಆಗಿ ಮಂಪರು ಪರೀಕ್ಷೆಗೆ ಒಳಪಡಿಸುವುದಾದರೆ ನಾನು ಮಂಪರು ಪರೀಕ್ಷೆಗೆ ಒಳಪಡಲು ಸಿದ್ಧ ಎಂದು ಪರಿಷತ್ ಸದಸ್ಯ, ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ (BK Hariprasad) ಪ್ರತಿ ಸವಾಲು ಹಾಕಿದ್ದಾರೆ.
ರಾಮಮಂದಿರ (Ram Mandir) ಉದ್ಘಾಟನೆ ವೇಳೆ ಗೋದ್ರಾ ತರಹದ ಘಟನೆ ಸಂಭವಿಸಬಹುದು ಎಂದು ಹೇಳಿಕೆ ನೀಡಿದ ಬಿ.ಕೆ ಹರಿಪ್ರಸಾದ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂಬ ಬಿ.ವೈ ವಿಜಯೇಂದ್ರ ಅವರ ಹೇಳಿಕೆಗೆ ನವದೆಹಲಿಯಲ್ಲಿ (New Delhi) ಪ್ರತಿಕ್ರಿಯಿಸಿದ ಅವರು, ಏಕಕಾಲದಲ್ಲಿ ನನ್ನ ಮತ್ತು ವಿಜಯೇಂದ್ರ ಅವರನ್ನು ಪರೀಕ್ಷೆಗೆ ಒಳಪಡಿಸಿ ಎಂದು ಹೇಳಿದರು. ಇದನ್ನೂ ಓದಿ: ಮನೆಯ ಮುಂದೆ ರಾಮಮಂದಿರದ ಪ್ರತಿಕೃತಿ ನಿರ್ಮಿಸಿದ ಎಂಜಿನಿಯರ್
Advertisement
Advertisement
ಹೊಸ ರಾಜ್ಯಾಧ್ಯಕ್ಷರಾಗಿರುವ ಬಿ.ವೈ ವಿಜಯೇಂದ್ರ ಅವರು ಹುಮ್ಮಸ್ಸಿನಲ್ಲಿ ಹೇಳಿದ್ದನ್ನೇ ಹೇಳುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ 40,000 ಕೋಟಿ ಹಗರಣ ನಡೆದಿದೆ ಎಂದು ಬಿಜೆಪಿ ನಾಯಕ ಬಸನಗೌಡ ಯತ್ನಾಳ್ (Basangouda Patil Yatnal) ಹೇಳಿದ್ದಾರೆ. ಹೀಗಾಗೀ ನನ್ನ ಮತ್ತು ವಿಜಯೇಂದ್ರ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ. ಮಂಪರು ಪರೀಕ್ಷೆ ಲೈವ್ ಆಗಬೇಕು. ಟಿವಿಯಲ್ಲಿ ಪ್ರಸಾರ ಮಾಡಬೇಕು ಎಂದು ಸವಾಲು ಹಾಕಿದರು. ಇದನ್ನೂ ಓದಿ: Ayodhya Ram Mandir: ಕಾಶಿ ಯಜ್ಞಶಾಲೆಯಲ್ಲಿ 40 ದಿನ ವಿಶೇಷ ಪೂಜೆ – ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ
Advertisement
Advertisement
ಮುಂದುವರಿದು ಬಿಜೆಪಿ ನಾಯಕ ಸಿ.ಟಿ ರವಿ (CT Ravi) ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮ್ಯಾಚ್ ಫಿಕ್ಸಿಂಗ್ ಆಗಿದೆ ಎಂದು ಸಿ.ಟಿ ರವಿ ಮೊದಲನೇ ಬಾರಿಗೆ ಸತ್ಯ ಹೇಳಿದ್ದಾರೆ. ಹೀಗಾಗಿ ಅವರನ್ನೂ ಮಂಪರು ಪರೀಕ್ಷೆಗೆ ಒಳಪಡಿಸಿ. ಬಿಜೆಪಿ ಅವರ ಆಟಗಳು ನಮಗೆ ಗೊತ್ತಿದೆ. ವಿರೋಧ ಪಕ್ಷದ ನಾಯಕರು ನನ್ನನ್ನು ಬಂಧಿಸಬೇಕು ಎಂದು ಹೇಳಿದ್ದಾರೆ. ಆದರೆ ನನ್ನ ಬಂಧನಕ್ಕೂ ಮುನ್ನ ಹೆಚ್‌ಎಂಟಿ ಬಳಿ ಫಿಲ್ಮ್ ಥಿಯೇಟರ್ ಇತ್ತು. ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಯಾಕೆ ಅರೆಸ್ಟ್ ಆಗಿದ್ದರು ಅಂತಾ ಮೊದಲು ಹೇಳಿ ಬಿಡಲಿ. ಆಮೇಲೆ ಬೇಕಾದರೆ ನನ್ನನ್ನು ಬಂಧಿಸಲಿ. ನಾನು ಯಾವುದೇ ಕ್ರಿಮಿನಲ್ ಕೇಸ್, ಭ್ರಷ್ಟಾಚಾರದ ಆರೋಪ ಇಲ್ಲದ ರಾಜಕೀಯ ಜೀವನ ಮಾಡಿದ್ದೇನೆ. ರಾಜ್ಯದಲ್ಲಿ ಜನರು ಶಾಂತವಾಗಿರಬೇಕು. ಮುನ್ನೆಚ್ಚರಿಕೆ ಕೊಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದರು. ಇದನ್ನೂ ಓದಿ: ಸಂಸತ್ ದಾಳಿ: ಮೈಸೂರಿನ ಮನೋರಂಜನ್ ಸೇರಿ ಐವರಿಗೆ ಮಂಪರು ಪರೀಕ್ಷೆ
ಭಾರತ್ ಜೋಡೊ ನ್ಯಾಯ ಯಾತ್ರೆ ಬಗ್ಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಉದ್ದೇಶಕ್ಕಾಗಿ ಯಾತ್ರೆ ಮಾಡುತ್ತಿಲ್ಲ. ಮೊದಲ ಹಂತದ ಯಾತ್ರೆ ಸಮಯದಲ್ಲಿ ಇದು ಚುನಾವಣೆಗೆ ಸಂಬಂಧಿಸಿಲ್ಲ ಎಂದು ಹೇಳಿದೆ. ದ್ವೇಷ ಮತ್ತು ಅಸೂಯೆ ವಾತಾವರಣ ಸರಿಪಡಿಸಲು ಯಾತ್ರೆ ಕೈಗೊಂಡಿದೆ. ಪ್ರಧಾನಿ ಮೋದಿ (Narendra Modi) ಮಣಿಪುರಕ್ಕೆ ಭೇಟಿ ನೀಡುತ್ತಿಲ್ಲ. ಲಕ್ಷದ್ವೀಪ ಸೇರಿ ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಜನರ ನೋವಿನ ಬಗ್ಗೆ ಬಿಜೆಪಿ ಅವರಿಗೆ ಅರಿವು ಇಲ್ಲ. ಅವರು ರಾಜಕೀಯ ಪ್ರವಾಸ ಮಾಡುತ್ತಿದ್ದಾರೆ. ಜನರ ಕಷ್ಟಗಳಿಗೆ ಹೇಗೆ ಸ್ಪಂದಿಸಬೇಕು ಗೊತ್ತಿಲ್ಲ. ಇಸ್ರೇಲ್‌ನಲ್ಲಿ (Israel) ಯುದ್ಧ ಆದರೆ ಮೋದಿ ಮಾತನಾಡುತ್ತಾರೆ ಆದರೆ ಮಣಿಪುರದ ಬಗ್ಗೆ ಮಾತನಾಡಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: 8 ವರ್ಷಗಳ ಹಿಂದೆ ಕಣ್ಮರೆಯಾಗಿದ್ದ ಭಾರತೀಯ ವಾಯುಪಡೆ ವಿಮಾನದ ಅವಶೇಷಗಳು ಪತ್ತೆ – ಇದೇ ವಿಮಾನದಲ್ಲಿದ್ರು ಮಂಗಳೂರಿನ ಯೋಧ
ಜನಗಣತಿ ವರದಿ (Caste Census) ಸಲ್ಲಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜಾತಿಗಣತಿ ವರದಿ ಅಂತಿಮ ಆಗಿದೆ. ಅದನ್ನು ಶೀಘ್ರವಾಗಿ ಬಹಿರಂಗಗೊಳಿಸಬೇಕು. ಬಳಿಕ ಸಾಧಕ-ಬಾಧಕ ಪರಿಶೀಲಿಸಿ ಬದಲಾಯಿಸಬಹುದು. ಕೆಲವು ಜನರು ವಿರೋಧಿಸುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ವಿರೋಧಿಸುವ ಹಕ್ಕು ಇದೆ. ನಾವು ನಮ್ಮ ಹಕ್ಕಿಗಾಗಿ ಹೋರಾಡುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಜ.22ರಂದು ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠೆ – ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಆಹ್ವಾನ